Loading..!

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಲ್ಲಿ ಖಾಲಿ ಇರುವ 21 ಹುದ್ದೆಗಳು ಖಾಲಿ ಇದ್ದು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:29 ಸೆಪ್ಟೆಂಬರ್ 2019
not found
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಒಟ್ಟು 21 ವಿಜ್ಞಾನಿ / ಇಂಜಿನಿಯರ್ 'ಎಸ್‌ಸಿ' ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅಕ್ಟೋಬರ್ 14,2019 ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ಕುರಿತು ಮಾಹಿತಿ ನಿಮಗಾಗಿ

ಹುದ್ದೆಗಳು :
ವಿಜ್ಞಾನಿ/ಇಂಜಿನಿಯರ್ 'ಎಸ್‌ಸಿ' (ಸಿವಿಲ್)- 11,
ವಿಜ್ಞಾನಿ/ಇಂಜಿನಿಯರ್ 'ಎಸ್‌ಸಿ' (ಇಲೆಕ್ಟ್ರಿಕಲ್‌)-5,
ವಿಜ್ಞಾನಿ/ಇಂಜಿನಿಯರ್ 'ಎಸ್‌ಸಿ' (ರೆಫ್ರಿಜರೇಶನ್‌ & ಏರ್‌ ಕಂಡೀಷನಿಂಗ್‌)-4 ಮತ್ತು
ವಿಜ್ಞಾನಿ/ಇಂಜಿನಿಯರ್ 'ಎಸ್‌ಸಿ' (ಆರ್ಕಿಟೆಕ್ಚರ್)-1 ಹುದ್ದೆಗಳು
ಒಟ್ಟು 21 ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗುತ್ತಿದೆ.
No. of posts:  21
Application Start Date:  29 ಸೆಪ್ಟೆಂಬರ್ 2019
Application End Date:  14 ಅಕ್ಟೋಬರ್ 2019
Work Location:  ನೇಮಕಗೊಳ್ಳುವ ಸಿಬ್ಬಂದಿಯು ಬೆಂಗಳೂರಿನ ಇಸ್ರೊ ಕೇಂದ್ರ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ. ಅಭ್ಯರ್ಥಿಗಳನ್ನು ಭಾರತದೆಲ್ಲೆಡೆ ಇರುವ ಇಸ್ರೋ ಕಚೇರಿಗಳಿಗೆ ವರ್ಗಾಯಿಸಬಹುದು
Selection Procedure: ಅರ್ಜಿದಾರರ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುವುದು. ಅದರಲ್ಲಿ ಶೇ.60 ರಷ್ಟು ಅಂಕ ಪಡೆದ ಅಭ್ಯರ್ಥಿಗಳಲ್ಲಿ ಯಾರು ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೆಯೋ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು
Qualification: ಇಸ್ರೋದಲ್ಲಿ ಉದ್ಯೋಗಕ್ಕೆ ಸೇರಲು ಬಿ.ಇ / ಬಿ.ಟೆಕ್ ಮತ್ತು ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌ನಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Fee: ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು,
* ಸಾಮಾನ್ಯ / ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 100/- ರೂ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು ಸಂಪೂರ್ಣ ಶುಲ್ಕ ವಿನಾಯ್ತಿ ಹೊಂದಿರುತ್ತಾರೆ.
Age Limit: ಅಕ್ಟೋಬರ್ 14, 2019ರ ಅನ್ವಯ ಗರಿಷ್ಠ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Pay Scale: ವಿಜ್ಞಾನಿ ಅಥವಾ ಇಂಜಿನಿಯರ್ 'ಎಸ್‌ಸಿ' ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments