ISRO ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ, ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO)ದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ತಮ್ಮ ವೃತ್ತಿ ಜೀವನವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಲ್ಲಿ ಪ್ರಾರಂಭಿಸಬಹುದಾಗಿದೆ. ಇದು ಭಾರತದೆಲ್ಲೆಡೆ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO)ದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ಅಧಿಕೃತ ಅಧಿಸೂಚನೆಯಡಿಯಲ್ಲಿ23 ತಾಂತ್ರಿಕ ಸಹಾಯಕ, ಉಪ ಅಧಿಕಾರಿ, ತಂತ್ರಜ್ಞ 'ಬಿ', ಭಾರೀ ವಾಹನ ಚಾಲಕ 'ಎ' ಮತ್ತು ಲಘು ವಾಹನ ಚಾಲಕ 'ಎ' ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಇದು ಕೇವಲ ನೌಕರಿ ಮಾತ್ರವಲ್ಲ, ಸ್ಥಿರ ವೇತನ, ಪಿಂಚಣಿ ಸೌಲಭ್ಯಗಳು ಮತ್ತು ಉಜ್ವಲ ಭವಿಷ್ಯದ ಅವಕಾಶವಾಗಿದೆ. ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳು, ಅರ್ಹತಾ ಮಾನದಂಡಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಆಯ್ಕೆಯ ಪ್ರಕ್ರಿಯೆಯ ಕುರಿತು ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮ ಕನಸಿನ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಿದ್ಧರಾಗಿ!
📌ನೇಮಕಾತಿ ಸಂಕ್ಷಿಪ್ತ ವಿವರ :
🏛️ಸಂಸ್ಥೆ ಹೆಸರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
🧾ಒಟ್ಟು ಹುದ್ದೆಗಳು : 23
👨💼 ಹುದ್ದೆ ಹೆಸರು : ತಂತ್ರಜ್ಞರು, ಉಪ ಅಧಿಕಾರಿ ಮತ್ತು ಇತರ ಹುದ್ದೆಗಳು
📍ಉದ್ಯೋಗ ಸ್ಥಳ : ಅಖಿಲ ಭಾರತ
📌ಹುದ್ದೆಗಳ ವಿವರ :
ತಾಂತ್ರಿಕ ಸಹಾಯಕ : 12
ಉಪ ಅಧಿಕಾರಿ : 01
ತಂತ್ರಜ್ಞ 'ಬಿ' : 06
ಭಾರೀ ವಾಹನ ಚಾಲಕ 'ಎ' : 02
ಲಘು ವಾಹನ ಚಾಲಕ 'ಎ' : 02
🎓ಅರ್ಹತೆ : ಅಭ್ಯರ್ಥಿಗಳು ಡಿಪ್ಲೊಮಾ, ಐಟಿಐ, 10ನೇ ತರಗತಿ ಪೂರ್ಣಗೊಳಿಸಿರಬೇಕು.
🎂 ವಯೋಮಿತಿ :
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
💰ಅರ್ಜಿ ಶುಲ್ಕ :
🔹 ತಾಂತ್ರಿಕ ಸಹಾಯಕ, ಉಪ ಅಧಿಕಾರಿ, ತಂತ್ರಜ್ಞ ಹುದ್ದೆಗಳಿಗೆ :
ಆರಂಭದಲ್ಲಿ, ಎಲ್ಲಾ ಅರ್ಜಿದಾರರು ಏಕರೂಪವಾಗಿ ₹750/- ಮೊತ್ತವನ್ನು ಪಾವತಿಸಬೇಕು.
ಶುಲ್ಕ ವಿನಾಯಿತಿ ಪಡೆದ ವರ್ಗಗಳಿಗೆ (ಮಹಿಳೆ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕರು) ಸೇರಿದ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕವನ್ನು ಮರುಪಾವತಿಸಲಾಗುತ್ತದೆ.
ಇತರ ಅಭ್ಯರ್ಥಿಗಳಿಗೆ ₹250/- ಅರ್ಜಿ ಶುಲ್ಕವನ್ನು ಉಳಿಸಿಕೊಂಡ ನಂತರ ₹500/- ಮರುಪಾವತಿಸಲಾಗುತ್ತದೆ.
🔹 ತಂತ್ರಜ್ಞ, ಭಾರೀ ವಾಹನ ಚಾಲಕ ಮತ್ತು ಲಘು ವಾಹನ ಚಾಲಕರಿಗೆ ಹುದ್ದೆಗಳಿಗೆ :
ಆರಂಭದಲ್ಲಿ, ಎಲ್ಲಾ ಅರ್ಜಿದಾರರು ಏಕರೂಪವಾಗಿ ₹500/- (ಐನೂರು ರೂಪಾಯಿಗಳು ಮಾತ್ರ) ಅರ್ಜಿ ಶುಲ್ಕವಾಗಿ ಪಾವತಿಸಬೇಕು.
ಶುಲ್ಕ ವಿನಾಯಿತಿ ಪಡೆದ ವರ್ಗಗಳಿಗೆ (ಮಹಿಳೆ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕರು) ಸೇರಿದ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕವನ್ನು ಮರುಪಾವತಿಸಲಾಗುತ್ತದೆ.
ಇತರ ಅಭ್ಯರ್ಥಿಗಳಿಗೆ ₹100/- ಅರ್ಜಿ ಶುಲ್ಕವನ್ನು ಉಳಿಸಿಕೊಂಡ ನಂತರ ₹400/- ಮರುಪಾವತಿಸಲಾಗುತ್ತದೆ.
🎯 ಆಯ್ಕೆ ಪ್ರಕ್ರಿಯೆ :
1. ಲಿಖಿತ ಪರೀಕ್ಷೆ
2. ವೈಯಕ್ತಿಕ ಸಂದರ್ಶನ
💰ಮಾಸಿಕ ವೇತನ :
ತಾಂತ್ರಿಕ ಸಹಾಯಕ : ಹಂತ 7 (ವೇತನ ಮ್ಯಾಟ್ರಿಕ್ಸ್: `44,900/- - `1,42,400/-)
ಉಪ ಅಧಿಕಾರಿ: ಹಂತ 6 (ವೇತನ ಮ್ಯಾಟ್ರಿಕ್ಸ್: `35,400/- - `1,12,400/-)
ತಂತ್ರಜ್ಞ 'ಬಿ': ಹಂತ 3 (ವೇತನ ಮ್ಯಾಟ್ರಿಕ್ಸ್: `21,700/- - `69,100/-)
ಲಘು ವಾಹನ ಚಾಲಕ 'ಎ': ಹಂತ 2 (ವೇತನ ಮ್ಯಾಟ್ರಿಕ್ಸ್: `19,900/- - `63,200/-)
ಹೆವಿ ವೆಹಿಕಲ್ ಡ್ರೈವರ್ 'ಎ: ಲೆವೆಲ್ 2 (ಪೇ ಮ್ಯಾಟ್ರಿಕ್ಸ್: `19,900/- - `63,200/-)
📝 ಅರ್ಜಿ ಸಲ್ಲಿಸುವ ವಿಧಾನ :
1. ಇಸ್ರೋ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
2. ಅರ್ಜಿ ಸಲ್ಲಿಸಲು ಮುನ್ನ, ಇಮೇಲ್, ಮೊಬೈಲ್, ಶಿಕ್ಷಣ ದಾಖಲೆಗಳು ಮತ್ತು ಗುರುತಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
3. ಅಧಿಕೃತ ಲಿಂಕ್‌ನಲ್ಲಿ ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ
4. ಅಗತ್ಯ ದಾಖಲೆಗಳ ಸ್ಕಾನ್ ನಕಲನ್ನು ಅಪ್ಲೋಡ್ ಮಾಡಿ
5. ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ)
6. ಸಲ್ಲಿಸಿದ ನಂತರ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ
📅 ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:12-08-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-08-2025
Comments