Loading..!

ಐಆರ್‌ಸಿಟಿಸಿ ನೇಮಕಾತಿ 2019-(IRCTC Recruitment-2019): ಮೇಲ್ವಿಚಾರಕ ಹುದ್ದೆಗಳಿಗೆ Walkin Interview
| Date:15 ಜೂನ್ 2019
not found
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ನಿಯಮಿತ 74 ಮೇಲ್ವಿಚಾರಕ (ಹಾಸ್ಪಿಟಾಲಿಟಿ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಹುದ್ದೆಗಳಿಗೆ ಸೇರಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 9,10 ಮತ್ತು 12 ರಂದು ವಿವಿದೆಡೆ ನಡೆಯುವ ಸಂದರ್ಶನದಲ್ಲಿ ಭಾಗಿಯಾಬಹುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಂದರ್ಶನಕ್ಕೆ ಒಯ್ಯತಕ್ಕದ್ದು.

ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 9,10 ಮತ್ತು 12 ರಂದು ನಡೆಯಲಿರುವ ವಾಕ್‌-ಇನ್‌ ಇಂಟರ್‌ವ್ಯೂ ನಲ್ಲಿ ಭಾಗವಹಿಸಬಹುದು.

ಸಂದರ್ಶನ ನಡೆಯುವ ಸ್ಥಳದ ವಿವರ:
* ಏಪ್ರಿಲ್ 9,2019 ರಂದು ಸಂದರ್ಶನ ನಡೆಯುವ ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್ (ಕ್ಯಾಟರಿಂಗ್ ಕಾಲೇಜು), ಜಿ.ವಿ.ರಾಜ ರೋಡ್, ಕೊವಲಂ, ತಿರುವನಂತಪುರಂ,ಕೇರಳ-695527
* ಏಪ್ರಿಲ್ 10,2019 ರಂದು ಸಂದರ್ಶನ ನಡೆಯುವ ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್, ಎಂ.ಎಸ್‌ ಬ್ಯುಲ್ಡಿಂಗ್ ಮತ್ತು ಎಸ್‌ಕೆಎಸ್‌ಜೆಟಿಐ ಹಾಸ್ಟೆಲ್ ಹತ್ತಿರ, ಎಸ್‌.ಜೆ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು- 560001
* ಏಪ್ರಿಲ್ 12,2019 ರಂದು ಸಂದರ್ಶನ ನಡೆಯುವ ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕ್ಯಾಟರಿಂಗ್ ಟೆಕ್ನಾಲಜಿ ಮತ್ತು ಅಪ್ಲೈಡ್ ನ್ಯೂಟ್ರೀಶನ್, 4ನೇ ಕ್ರಾಸ್, ಸಿ.ಐ.ಟಿ ಕ್ಯಾಂಪಸ್, ತಾರಾಮಣಿ (ಪೋ), ಚೆನ್ನೈ -600113
Application Start Date:  21 ಮಾರ್ಚ್ 2019
Application End Date:  10 ಎಪ್ರಿಲ್ 2019
Work Location:  ತಮಿಳು ನಾಡು, ಕೇರಳ, ಕರ್ನಾಟಕ, ಭಾರತದೆಲ್ಲೆಡೆ
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: ಈ ಹುದ್ದೆಗಳಿಗೆ ಬಿಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
* ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.
Fee: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.
Age Limit: ಮಾರ್ಚ್ 1,2019 ರ ಅನ್ವಯ ಗರಿಷ್ಟ 30 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ , ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಮತ್ತು ಅಂಗವಿಕಲ (ಓಬಿಸಿ) ಅಭ್ಯರ್ಥಿಗಳಿಗೆ 13 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Pay Scale: ಮೇಲ್ವಿಚಾರಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ ವೇತನವನ್ನು ನೀಡಲಾಗುವುದು.

** ಈ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು
to download official notification

Comments