Loading..!

ಭಾರತೀಯ ತೈಲ ನಿಗಮ ನಿಯಮಿತ(IOCL)ದಲ್ಲಿ ಖಾಲಿ ಇರುವ 246 ವಿವಿಧ ಹುದ್ದೆಗಳ ನೇಮಕಾತಿಗಾಗಿ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:1 ಫೆಬ್ರುವರಿ 2025
not found

ದೇಶದ ಪ್ರತಿಷ್ಠಿತ ತೈಲ ಸಂಸ್ಥೆಗಳಲ್ಲಿ ಒಂದಾಗಿರುವ, ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ತೈಲ ನಿಗಮ ನಿಯಮಿತ (IOCL)ದಲ್ಲಿ ಖಾಲಿ ಇರುವ 246 ಜೂನಿಯರ್ ಆಪರೇಟರ್, ಜೂನಿಯರ್ ಅಟೆಂಡೆಂಟ್ ಮತ್ತು ಜೂನಿಯರ್ ಬಿಸಿನೆಸ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2025ನೇ ಸಾಲಿನ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2025 ಫೆಬ್ರವರಿ 23ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆ ವಿವರ :
- ಸಂಸ್ಥೆಯ ಹೆಸರು : ಭಾರತೀಯ ತೈಲ ನಿಗಮ ಲಿಮಿಟೆಡ್ (IOCL)
- ಒಟ್ಟು ಹುದ್ದೆಗಳು : 246
- ಕೆಲಸದ ಸ್ಥಳ : ಭಾರತದೆಲ್ಲೆಡೆ
- ಹುದ್ದೆಯ ಹೆಸರು : ಜೂನಿಯರ್ ಆಪರೇಟರ್, ಜೂನಿಯರ್ ಅಟೆಂಡೆಂಟ್
- ವೇತನ ಶ್ರೇಣಿ : ರೂ. 23,000 - 1,05,000/- ಪ್ರತಿ ತಿಂಗಳು


ರಾಜ್ಯವಾರು ಹುದ್ದೆಗಳ ವಿವರ :
- ಕರ್ನಾಟಕ - 12
- ಉತ್ತರ ಪ್ರದೇಶ - 45
- ಮಧ್ಯಪ್ರದೇಶ - 21
- ಮಹಾರಾಷ್ಟ್ರ - 21
- ತಮಿಳುನಾಡು - 13
- ಇತ್ಯಾದಿ.


ಅರ್ಹತೆ ವಿವರ :
1. ಜೂನಿಯರ್ ಆಪರೇಟರ್ : 10ನೇ ತರಗತಿ, ITI ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
2. ಜೂನಿಯರ್ ಅಟೆಂಡೆಂಟ್ : 12ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಹರು.
3. ಜೂನಿಯರ್ ಬಿಸಿನೆಸ್ ಅಸಿಸ್ಟೆಂಟ್ : ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.


ವಯೋಮಿತಿಯ ವಿವರ :
- ಕನಿಷ್ಟ: 18 ವರ್ಷ
- ಗರಿಷ್ಟ: 26 ವರ್ಷ (31-01-2025)


ವಯೋಮಿತಿಯ ಸಡಿಲಿಕೆ :
- OBC (NCL) - 3 ವರ್ಷ
- SC/ST - 5 ವರ್ಷ
- PwBD (ಸಾಮಾನ್ಯ) - 10 ವರ್ಷ
- PwBD (OBC) - 13 ವರ್ಷ
- PwBD (SC/ST) - 15 ವರ್ಷ


ಅರ್ಜಿ ಶುಲ್ಕ :
- SC/ST/PwBD/ExSM ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
- ಸಾಮಾನ್ಯ/OBC ಅಭ್ಯರ್ಥಿಗಳಿಗೆ: ರೂ. 300/- (ಆನ್‌ಲೈನ್ ಪಾವತಿ)


ಆಯ್ಕೆ ಪ್ರಕ್ರಿಯೆ :
1. ಲಿಖಿತ ಪರೀಕ್ಷೆ
2. ಕೌಶಲ್ಯ/ದಕ್ಷತೆ/ದೈಹಿಕ ಪರೀಕ್ಷೆ
3. ಕಡತ ಪರಿಶೀಲನೆ
4. ವೈದ್ಯಕೀಯ ಪರೀಕ್ಷೆ
5. ಸಂದರ್ಶನ (Interview)


ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 03-02-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-02-2025
- E-ಪ್ರವೇಶ ಪತ್ರ ಬಿಡುಗಡೆ : ಮಾರ್ಚ್/ಏಪ್ರಿಲ್ 2025
- ಲಿಖಿತ ಪರೀಕ್ಷೆ (CBT) ತಾತ್ಕಾಲಿಕ ದಿನಾಂಕ : ಏಪ್ರಿಲ್ 2025
- ಪರೀಕ್ಷೆಯ ಫಲಿತಾಂಶ ಪ್ರಕಟಣೆ : ಏಪ್ರಿಲ್/ಮೇ 2025


ಈ ನೇಮಕಾತಿಯು ಕೇಂದ್ರ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನೊದಗಿಸಲಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಶೀಘ್ರದಲ್ಲಿ ಸಲ್ಲಿಸುವಂತೆ ಸಲಹೆ ನೀಡಲಾಗುತ್ತದೆ.

Application End Date:  23 ಫೆಬ್ರುವರಿ 2025
To Download Official Notification

Comments