ಭಾರತೀಯ ತೈಲ ನಿಗಮ ನಿಯಮಿತದಲ್ಲಿ (IOCL) ಖಾಲಿ ಇರುವ ಒಟ್ಟು 570 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಭಾರತೀಯ ತೈಲ ನಿಗಮ ನಿಯಮಿತದಲ್ಲಿ (IOCL) ಖಾಲಿ ಇರುವ ಒಟ್ಟು 570 ತಾಂತ್ರಿಕ, ತಾಂತ್ರಿಕೇತರ ಮತ್ತು ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಜನವರಿ 15, 2022 ರಿಂದ ಆರಂಭಗೊಂಡು ಫೆಬ್ರವರಿ 15, 2022 ಸಾಯಂಕಾಲ 6 ಗಂಟೆಯೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುಸಾಗಿದೆ.
ಹುದ್ದೆಗಳ ವಿವರ :
Maharashtra : 322
Gujarat : 121
Madhya Pradesh : 80
Chattisgarh : 35
Goa : 8
Dadra Nagar & Havel : 4
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ PUC (12th), Diploma, ITI, Graduate(ಪದವಿ) ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು ಹಾಗೂ ಗರಿಷ್ಠ ಈ ಕೆಳಗಿನ ವಯೋಮಿತಿಯನ್ನು ಮೀರಿರಬಾರದು,
* ಸಾಮಾನ್ಯವರ್ಗ 24 ವರ್ಷ
* ಹಿಂದುಳಿದ ವರ್ಗ 27 ವರ್ಷ
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 29 ವರ್ಷಗಳ ಗರಿಷ್ಠ ವಯೋಮಿತಿಗಳನ್ನು ಮೀರಿರಬಾರದು.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.





Comments