Loading..!

ಭಾರತ ಸರ್ಕಾರ ಸ್ವಾಮ್ಯದ ಭಾರತೀಯ ದೂರವಾಣಿ ಕೈಗಾರಿಕಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Mallappa Myageri | Date:8 ನವೆಂಬರ್ 2021
not found

ಭಾರತ ಸರ್ಕಾರ ಸ್ವಾಮ್ಯದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್(ITI) ದಲ್ಲಿ ಮುಖ್ಯ್ ವ್ಯವಸ್ಥಾಪಕ ಮತ್ತು ಉಪ ವ್ಯವಸ್ಥಾಪಕ ಒಟ್ಟು 41 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕವಾದ : 25-11-2021ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ಕಛೇರಿ ವಿಳಾಸಕ್ಕೆ ದಿನಾಂಕ : 29-11-2021ರೊಳಗೆ ಅರ್ಜಿಯನ್ನು ತಲುಪಿಸಲು ಕೋರಲಾಗಿದೆ.
ಕಛೇರಿ ವಿಳಾಸ: 

GENERAL MANAGER-HR
ITI LIMITED, REGD & CORPORATE OFFICE
ITI BHAVAN, DOORAVANI NAGAR, BENGALURU – 560016

No. of posts:  41
Application Start Date:  6 ನವೆಂಬರ್ 2021
Application End Date:  25 ನವೆಂಬರ್ 2021
Work Location:  All Over India
Qualification:

ಮುಖ್ಯ್ ವ್ಯವಸ್ಥಾಪಕ, ವ್ಯವಸ್ಥಾಪಕ, ಉಪ ವ್ಯವಸ್ಥಾಪಕ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ E&C / Electronics / Telecommunications / Computer Science / Information Technology / Civil Engineering ನಲ್ಲಿ BE / B.Tech, ME / M.Tech, MBA ಮತ್ತು CA / ICWA ವಿದ್ಯಾರ್ಹತೆಯನ್ನು ಪಡೆದಿರಬೇಕು.

Age Limit:

ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ.
1) ಮುಖ್ಯ್ ವ್ಯವಸ್ಥಾಪಕ ಹುದ್ದೆಗಳಿಗೆ ಗರಿಷ್ಟ 45 ವರ್ಷ ಹುದ್ದೆಗಳಿಗೆ ಗರಿಷ್ಠ 30 ವರ್ಷ 
2) ವ್ಯವಸ್ಥಾಪಕ ಹುದ್ದೆಗಳಿಗೆ ಗರಿಷ್ಟ 42 ವರ್ಷ 
3) ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಗರಿಷ್ಟ 40 ವರ್ಷ 
4) ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಟ 36 ವರ್ಷ ವಯೋಮಿತಿಯನ್ನು  
5) ಮತ್ತು ನೇಮಕಾತಿಯ ನಿಯಮಗಳ ಪ್ರಕಾರ OBC/SC/ST/Disability and Ex. Army ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಲಿಕೆ ಇರುತ್ತದೆ.

Pay Scale:

ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವೇತನವನ್ನು ನೀಡಲಾಗುವುದು. 
ಮುಖ್ಯ್ ವ್ಯವಸ್ಥಾಪಕ (Grade 6) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 80,240/-ರೂ, 
ವ್ಯವಸ್ಥಾಪಕ (Grade 5) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 72,717/-ರೂ,
ವ್ಯವಸ್ಥಾಪಕ (Grade 4) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 65,195 ಮತ್ತು 
ಸಹಾಯಕ ವ್ಯವಸ್ಥಾಪಕ (Grade 3) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 52,658/-ರೂ ವೇತನವನ್ನು ನೀಡಲಾಗುವುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

To Download the official notification

Comments