ಭಾರತೀಯ ಸಶಸ್ತ್ರ ಪಡೆಗಳ ನೌಕಾಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Savita Halli | Date:18 ಡಿಸೆಂಬರ್ 2021

ಭಾರತೀಯ ಸಶಸ್ತ್ರ ಪಡೆಗಳ ಅಡಿಯಲ್ಲಿ ಭಾರತೀಯ ನೌಕಾಪಡೆಯು ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಅಧಿಸೂಚನೆ 2021 ಅನ್ನು ಇಲಾಖೆಯು ಬಿಡುಗಡೆ ಮಾಡಿದೆ. ಭಾರತೀಯ ನೌಕಾಪಡೆಯ ಮೂಲಕ ನಾವಿಕ (ಕ್ರೀಡಾ ಕೋಟಾ ಪ್ರವೇಶ) 2022ರ ಬ್ಯಾಚ್‌ನ ಹಲವಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅವಿವಾಹಿತ ಕ್ರೀಡಾಪಟುಗಳಿಂದ (ಅವಿವಾಹಿತ ಪುರುಷ) ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಏಪ್ರಿಲ್ 2022 ರಲ್ಲಿ ಪ್ರಾರಂಭವಾಗುವ ಈ ಕೋರ್ಸ್ ಅನ್ನು ಭಾರತದಲ್ಲಿನ ಭಾರತೀಯ ನೌಕಾಪಡೆಯ ಘಟಕಗಳಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಪೋಸ್ಟ್ ಮಾಡಲಾಗುತ್ತದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 11,2021 ರಿಂದ ಡಿಸೆಂಬರ್ 25,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
Application Start Date: 15 ಡಿಸೆಂಬರ್ 2021
Application End Date: 25 ಡಿಸೆಂಬರ್ 2021
Work Location: India
Selection Procedure: ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
Qualification: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
Age Limit: ಅಭ್ಯರ್ಥಿಗಳು ಕನಿಷ್ಟ 17 ರಿಂದ ಗರಿಷ್ಟ 21 ವರ್ಷ ಹೊಂದಿರಬೇಕು
Pay Scale: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,700/- ರಿಂದ 43,100/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

Comments