ಭಾರತೀಯ ಕರಾವಳಿ ಪಡೆಯಲ್ಲಿ ಖಾಲಿ ಇರುವ ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನ
Published by: Hanamant Katteppanavar | Date:21 ಡಿಸೆಂಬರ್ 2020

ಭಾರತೀಯ ಕರಾವಳಿ ಪಡೆಯಲ್ಲಿ ಖಾಲಿ ಇರುವ ಸಹಾಯಕ ಕಮಾಂಡೆಂಟ್ (ಗ್ರೌಂಡ್ ಡ್ಯೂಟಿ ಬ್ರಾಂಚ್) ನ ಗ್ರೂಪ್ 'ಎ' ಗೆಜೆಟೆಡ್ ಆಫೀಸರ್ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳನ್ನು ಪೂರ್ಣ ಸಮಯದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವದು.
ಆನ್‌ಲೈನ್ ಅರ್ಜಿಯು ಡಿಸೆಂಬರ್ 21, 2020 ರಿಂದ ಪ್ರಾರಂಭಗೊಂಡು ಮತ್ತು ಡಿಸೆಂಬರ್ 27, 2020 ರಂದು ಕೊನೆಗೊಳ್ಳುತ್ತದೆ.
* ಪ್ರಮುಖ ದಿನನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-12-2020
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-12-2020
- ಪ್ರವೇಶ ಪತ್ರದ ದೊರೆಯುವ ದಿನಾಂಕ: 06 ರಿಂದ 10-01-2021
- ಪ್ರಾಥಮಿಕ ಆಯ್ಕೆಯ ದಿನಾಂಕ: 20-01 ರಿಂದ 20-02-2021
- ಅಂತಿಮ ಆಯ್ಕೆಯ ದಿನಾಂಕ: ತಾತ್ಕಾಲಿಕವಾಗಿ ಫೆಬ್ರವರಿ ಅಂತ್ಯದಿಂದ ಏಪ್ರಿಲ್ 2021 ರವರೆಗೆ
- ಆಯ್ಕೆಪಟ್ಟಿ ದೊರೆಯುವ ದಿನಾಂಕ: ಮೇ 2021
No. of posts: 25
Application Start Date: 21 ಡಿಸೆಂಬರ್ 2020
Application End Date: 27 ಡಿಸೆಂಬರ್ 2020
Selection Procedure:
- ಹುದ್ದೆಗೆ ಅನುಸಾರವಾಗಿ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿ, ಪ್ರಾಥಮಿಕ ಸಾಮರ್ಥ್ಯ ಪರೀಕ್ಷೆ, ಮಾನಸಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುವದು.
Qualification:
- ಅಭ್ಯರ್ಥಿಗಳು ಒಟ್ಟು 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಹೊಂದಿರಬೇಕು.
10+2+3 ಶಿಕ್ಷಣದ ಹನ್ನೆರಡನೇ ತರಗತಿಯ ಗಣಿತ ಮತ್ತು ಭೌತಶಾಸ್ತ್ರವನ್ನು ಕನಿಷ್ಠ 60% ಅಂಕಗಳು ಪಾಸಾಗಿರಬೇಕು.
Age Limit:
- ಹುದ್ದೆಗೆ ಅನುಸಾರವಾಗಿ ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ 2020 ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಅಭ್ಯರ್ಥಿಗಳು ಕಡ್ಡಾಯವಾಗಿ ಜುಲೈ 01, 1996 ರಿಂದ ಜೂನ್ 30, 2000 ರ ನಡುವೆ ಜನಿಸಿದವರಾಗಿರಬೇಕು.
* ಮೀಸಲಾತಿಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Pay Scale:
- ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ - 56,100 ರೂ.ಗಳ ವೇತನವನ್ನು ನೀಡಲಾಗುವುದು.





Comments