ಬ್ಯಾಂಕ್ ಉದ್ಯೋಗದ ಕನಸು ಇವತ್ತೇ ನಿಜವಾಗಿಸಿಕೊಳ್ಳಿ – ಇಂಡಿಯನ್ ಬ್ಯಾಂಕ್‌ನಲ್ಲಿ 1500 ಹುದ್ದೆಗಳ ಭರ್ಜರಿ ನೇಮಕಾತಿ!

ಈಗ ಬ್ಯಾಂಕ್ ಉದ್ಯೋಗದಲ್ಲಿ ಸ್ಥಿರತೆ ಮತ್ತು ಭದ್ರತೆ ಬಯಸುತ್ತಿದ್ದೀರಾ? ನಿಮ್ಮ ಅವಕಾಶ ಇಲ್ಲಿದೆ! ಇಂಡಿಯನ್ ಬ್ಯಾಂಕ್ 1500 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ - ಈ ಮಾಹಿತಿ ನಿಮ್ಮ ಬದುಕನ್ನೇ ಬದಲಾಯಿಸಬಹುದು. ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮುಗಿಯಲಿದೆ. ಯಾವುದೇ ಪದವಿಯನ್ನು ಪಾಸಾದ ಅಭ್ಯಥಿಗಳಿಗೆ ಸರ್ಕಾರಿ ಕೆಲಸ ಪಡೆಯಲು ಇದೊಂದು ಸುವರ್ಣಾವಕಾಶ!
🏦 ಸಾರ್ವಜನಿಕ ಕ್ಷೇತ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್ ಬ್ಯಾಂಕ್ (Indian Bank) 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಭಾರತದಾದ್ಯಂತ ಒಟ್ಟು 1500 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 42 ಹುದ್ದೆಗಳನ್ನು ನೇಮಕಮಾಡಿಕೊಳ್ಳಲಾಗುತ್ತದೆ.
ಬ್ಯಾಂಕ್ ಉದ್ಯೋಗಕ್ಕಾಗಿ ನಿರೀಕ್ಷಿಸುತ್ತಿರುವ ಯುವಕರಿಗೆ ಇದು ಅಸಾಧಾರಣ ಅವಕಾಶ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಆಗಸ್ಟ್ 07 2025ವರೆಗೆ ಮಾತ್ರ ಅವಕಾಶವಿದೆ.
ಯೋಚಿಸಿ ನೋಡಿ. ಸರ್ಕಾರಿ ಬ್ಯಾಂಕ್ ಉದ್ಯೋಗದಲ್ಲಿ ಉತ್ತಮ ವೇತನ, ಆಕರ್ಷಕ ಭತ್ಯೆಗಳು, ಮತ್ತು ಜೀವನಪರ್ಯಂತ ಭದ್ರತೆ. ಇಂಡಿಯನ್ ಬ್ಯಾಂಕ್ ನಲ್ಲಿ ಕ್ಲರ್ಕ್, ಪಿಓ ಮತ್ತು ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ನೇಮಕಾತಿ ನಿಮಗಾಗಿಯೇ ಕಾಯುತ್ತಿದೆ. ಆದರೆ ಯಶಸ್ಸು ಸಿಗಲು ನೀವು ಏನು ಮಾಡಬೇಕು? ಅರ್ಹತೆಗಳೇನು? ಪರೀಕ್ಷೆಗೆ ಹೇಗೆ ತಯಾರಾಗಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಬ್ಲಾಗ್ ಪೋಸ್ಟ್ ನಲ್ಲಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳ ಅಧಿಸೂಚನೆ
📌 ಹುದ್ದೆಯ ವಿವರ:
ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice)
ಒಟ್ಟು ಹುದ್ದೆಗಳ ಸಂಖ್ಯೆ: 1500
ಕೆಲಸದ ಸ್ಥಳ: ಭಾರತದೆಲ್ಲೆಡೆ ರಾಜ್ಯವಾರು ಹಂಚಿಕೆ
ಹುದ್ದೆಯ ಅವಧಿ: 1 ವರ್ಷ (Apprenticeship Act, 1961 ಅಡಿಯಲ್ಲಿ)
📌 ರಾಜ್ಯವಾರು ಹುದ್ದೆಗಳ ವಿವರ :
ಆಂಧ್ರ ಪ್ರದೇಶ : 82
ಅರುಣಾಚಲ ಪ್ರದೇಶ : 1
ಅಸ್ಸಾಂ : 29
ಬಿಹಾರ : 76
ಚಂಡೀಗಢ : 2
ಛತ್ತೀಸ್‌ಗಢ : 17
ಗೋವಾ : 2
ಗುಜರಾತ್ : 35
ಹರಿಯಾಣ : 37
ಹಿಮಾಚಲ ಪ್ರದೇಶ : 6
ಜಮ್ಮು ಮತ್ತು ಕಾಶ್ಮೀರ : 3
ಜಾರ್ಖಂಡ್ : 42
ಕರ್ನಾಟಕ : 42
ಕೇರಳ : 44
ಮಧ್ಯಪ್ರದೇಶ : 59
ಮಹಾರಾಷ್ಟ್ರ : 68
ಮಣಿಪುರ : 2
ಮೇಘಾಲಯ : 1
ನಾಗಾಲ್ಯಾಂಡ್ : 2
ದೆಹಲಿಯ NCT : 38
ಒಡಿಶಾ : 50
ಪುದುಚೇರಿ : 9
ಪಂಜಾಬ್ : 54
ರಾಜಸ್ಥಾನ : 37
ತಮಿಳುನಾಡು : 277
ತೆಲಂಗಾಣ : 42
ತ್ರಿಪುರ : 1
ಉತ್ತರ ಪ್ರದೇಶ : 277
ಉತ್ತರಾಖಂಡ : 13
ಪಶ್ಚಿಮ ಬಂಗಾಳ : 152
🎓 ಶೈಕ್ಷಣಿಕ ಅರ್ಹತೆ: ಇಂಡಿಯನ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಪದವಿ ಪೂರ್ಣಗೊಳಿಸಿರಬೇಕು.
🎂 ವಯೋಮಿತಿ :
ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಜುಲೈ-2025 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷಗಳು
💰 ಸ್ಟೈಪೆಂಡ್ (Stipend) :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹15,000/- ನಷ್ಟು ಸ್ಕಾಲರ್‌ಶಿಪ್/ವೈತನಿಕ ಮಾನಧನ ನೀಡಲಾಗುತ್ತದೆ.
💼 ಆಯ್ಕೆ ವಿಧಾನ :
1️⃣ ಆನ್‌ಲೈನ್ ಲಿಖಿತ ಪರೀಕ್ಷೆ
2️⃣ ಭಾಷಾ ಪರೀಕ್ಷೆ (Place-specific local language proficiency)
3️⃣ ದಾಖಲೆ ಪರಿಶೀಲನೆ
💰 ಅರ್ಜಿ ಶುಲ್ಕ :
SC/ST/PwBD ಅಭ್ಯರ್ಥಿಗಳು: ರೂ.175/-
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ.800/-
ಪಾವತಿ ವಿಧಾನ: ಆನ್‌ಲೈನ್
📝 ಅರ್ಜಿ ಸಲ್ಲಿಸುವ ವಿಧಾನ :
- ಮೊದಲನೆಯದಾಗಿ ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
- ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- ಇಂಡಿಯನ್ ಬ್ಯಾಂಕ್ ಅಪ್ರೆಂಟಿಸ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ - ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಇಂಡಿಯನ್ ಬ್ಯಾಂಕ್ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಇಂಡಿಯನ್ ಬ್ಯಾಂಕ್ ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.
📅 ಅರ್ಜಿ ಸಲ್ಲಿಕೆ ಮಾಹಿತಿ:
🖊️ ಅರ್ಜಿ ಪ್ರಾರಂಭ ದಿನಾಂಕ: 18-07-2025
📆 ಅಂತಿಮ ದಿನಾಂಕ: 07-ಆಗಸ್ಟ್-2025
🌐 ಅರ್ಜಿ ಸಲ್ಲಿಸುವ ಸ್ಥಳ:
👉 https://www.indianbank.in
📢 ಪ್ರಮುಖ ಸೂಚನೆಗಳು:
=> ಅಭ್ಯರ್ಥಿಗಳು NATS (National Apprenticeship Training Scheme) ಪೋರ್ಟಲ್‌ನಲ್ಲಿ ನೋಂದಾಯಿತರಾಗಿರಬೇಕು
=> ಸ್ಥಳೀಯ ಭಾಷಾ ಜ್ಞಾನ ಹೊಂದಿರುವವರಿಗೆ ಆದ್ಯತೆ
=> ಈ ಹುದ್ದೆಗಳು ನಿಯಮಿತ ನೇಮಕಾತಿಯಾಗಿಲ್ಲ, ಆದರೆ ಭವಿಷ್ಯದಲ್ಲಿ ಬ್ಯಾಂಕ್ ನೇಮಕಾತಿಗೆ ಅನುಭವದ ರೀತಿಯಲ್ಲಿ ಪರಿಗಣಿಸಬಹುದು
Comments