ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಸೇನೆಯಲ್ಲಿ ಖಾಲಿ ಇರುವ ಒಟ್ಟು 76 NCC ವಿಶೇಷ ಪ್ರವೇಶ ಯೋಜನೆ 58ನೇ ಕೋರ್ಸ್ (ಅಕ್ಟೋಬರ್ 2025) ಅಡಿಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶಾರ್ಟ್ ಸರ್ವೀಸ್ ಕಮಿಷನ್ (ಎನ್‌ಟಿ) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವಂತೆ ಆಸಕ್ತ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 14.02.2025 ರಿಂದ 03.00 PM ರಿಂದ 15.03.2025 ರೊಳಗಾಗಿ 03.00 PM ವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ರಮುಖ ಮಾಹಿತಿಗಳು:
- ಸಂಸ್ಥೆ : ಭಾರತೀಯ ಸೇನೆ
- ಕೇಂದ್ರ ಸರ್ಕಾರದ ಉದ್ಯೋಗಗಳು
- ಉದ್ಯೋಗ ಪ್ರಕಾರ : ನಿಯಮಿತ ಆಧಾರದ ಮೇಲೆ
- ಒಟ್ಟು ಹುದ್ದೆಗಳ ಸಂಖ್ಯೆ : 76
- ಹುದ್ದೆಗಳ ಪ್ರಕಾರ :
- NCC ಪುರುಷ - 70 (ಸಾಮಾನ್ಯ ವರ್ಗದ 63 ಮತ್ತು ಸೇನಾ ಸಿಬ್ಬಂದಿಯ ಯುದ್ಧ ಬಲಿದಾನಿತ ಕುಟುಂಬಗಳಿಗೆ 07)
- NCC ಮಹಿಳೆ - 06 (ಸಾಮಾನ್ಯ ವರ್ಗದ 05 ಮತ್ತು ಸೇನಾ ಸಿಬ್ಬಂದಿಯ ಯುದ್ಧ ಬಲಿದಾನಿತ ಕುಟುಂಬಗಳಿಗೆ 01)
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 14.02.2025 ರಂದು 03.00 PM
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 15.03.2025 ರಂದು 03.00 PM
ಅರ್ಹತಾ ಮಾನದಂಡ :
- ಶೈಕ್ಷಣಿಕ ಅರ್ಹತೆ : ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ. ಅಂತಿಮ ವರ್ಷದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.
- NCC ಸೇವೆ : ಹಿರಿಯ ವಿಭಾಗ/ವಿಂಗ್‌ನಲ್ಲಿ ಕನಿಷ್ಠ 2 ಅಥವಾ 3 ವರ್ಷಗಳ ಸೇವೆ ಮಾಡಿರಬೇಕು.
- ಗ್ರೇಡಿಂಗ್ : NCC ‘C’ ಪ್ರಮಾಣಪತ್ರದಲ್ಲಿ ಕನಿಷ್ಠ ‘B’ ಗ್ರೇಡ್ ಹೊಂದಿರಬೇಕು.
ವಯೋಮಿತಿ :
- 01.07.2025 ರಂದು 19 ರಿಂದ 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು (02.07.2000 ಮತ್ತು 01.07.2006 ನಡುವೆ ಜನಿಸಿದವರಾಗಿರಬೇಕು).
ವೇತನ ಶ್ರೇಣಿ :
- NCC (ವಿಶೇಷ) ಪ್ರವೇಶ ಹುದ್ದೆ - ಮಟ್ಟ 10, ವೇತನ ಶ್ರೇಣಿ ರೂ. 56,100/- ರೂ ಗಳಿಂದ 1,77,500/- ರೂ ಗಳ ವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟಿಂಗ್, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
To Download Official Notification
- Join Indian Army 2025
- Indian Army Online Application 2025
- How to apply for Indian Army recruitment 2025
- Indian Army Bharti 2025 notification PDF
- Army recruitment 2025 latest updates
- Indian Army officer recruitment 2025
- Army Bharti online registration 2025
- Army rally recruitment schedule 2025





Comments