ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಆದಾಯ ತೆರಿಗೆ ಇಲಾಖೆ 2025ನೇ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಒಟ್ಟು 22 ಹಿರಿಯ ಅನುವಾದ ಅಧಿಕಾರಿ (Senior Translation Officer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು 2025 ಮೇ 25 ರೊಳಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳು ಎಲ್ಲಾ ಭಾರತ ಮಟ್ಟದಲ್ಲಿ ಲಭ್ಯವಿದ್ದು, ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಸಂಸ್ಥೆಯ ಹೆಸರು : ಇನ್‌ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ (Income Tax Department)
ಒಟ್ಟು ಹುದ್ದೆಗಳ ಸಂಖ್ಯೆ : 22
ಹುದ್ದೆಯ ಹೆಸರು : ಹಿರಿಯ ಅನುವಾದ ಅಧಿಕಾರಿ (Senior Translation Officer)
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹44,900 – ₹1,42,400/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಪ್ರದೇಶವಾರ ಹುದ್ದೆಗಳ ವಿವರ :
ಗುಜರಾತ್ ಪ್ರದೇಶ - 1
ಕರ್ನಾಟಕ ಮತ್ತು ಗೋವಾ ಪ್ರದೇಶ - 2
ಒಡಿಶಾ ಪ್ರದೇಶ - 2
ಎನ್‌ಡಬ್ಲ್ಯೂಆರ್ ಪ್ರದೇಶ - 3
ತಮಿಳುನಾಡು ಮತ್ತು ಪುಡುಚೇರಿ ಪ್ರದೇಶ - 3
ದೆಹಲಿ ಪ್ರದೇಶ - 6
ಕೇರಳ ಪ್ರದೇಶ - 2
ಮುಂಬೈ ಪ್ರದೇಶ - 2
ಪುಣೆ ಪ್ರದೇಶ - 1
ಅರ್ಹತಾ ಮಾನದಂಡಗಳು :
- ಶೈಕ್ಷಣಿಕ ಅರ್ಹತೆ : ಅರ್ಹ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಅಥವಾ ಮಾಸ್ಟರ್ಸ್ ಡಿಗ್ರಿ ಹೊಂದಿರಬೇಕು.
- ವಯೋಮಿತಿ :
ಅಭ್ಯರ್ಥಿಗಳು ಮೇ 25, 2025 ರಂದು ಅರ್ಜಿದಾರರ ಗರಿಷ್ಟ ವಯಸ್ಸು 56 ವರ್ಷ ಹೊಂದಿರಬೇಕು.
ವಯೋಮಿತಿಯಲ್ಲಿ ವಿನಾಯಿತಿ :
ಇನ್‌ಕಮ್ ಟ್ಯಾಕ್ಸ್ ಇಲಾಖೆಯ ನಿಬಂಧನೆಗಳಂತೆ ಅನ್ವಯವಾಗುತ್ತದೆ.
ಆಯ್ಕೆ ವಿಧಾನ :
- ಅಬ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೂಚಿಸಿರುವ ನಮೂನೆಯಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳೊಂದಿಗೆ ತಲಪಿಸಬೇಕಾದ ವಿಳಾಸ:
ಅರ್ಜಿ ಸಲ್ಲಿಸುವ ವಿಳಾಸ :
Directorate of Income Tax (HRD), Central Board of Direct Taxes, Official Language Division, Room No. 401, 2nd Floor, Jawahar Lal Nehru Stadium, Pragati Vihar, New Delhi – 110003
ಅರ್ಜಿ ಪ್ರತಿ ಕಳುಹಿಸುವ ಮುನ್ನ, ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಅರ್ಜಿಯ ಕಾಪಿಯನ್ನು ಈ ಇಮೇಲ್ ವಿಳಾಸಕ್ಕೂ ಕಳುಹಿಸಬಹುದು.
ಮುಖ್ಯ ದಿನಾಂಕಗಳು:
- ಅರ್ಜಿ ಆರಂಭ ದಿನಾಂಕ : 26 ಮಾರ್ಚ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25 ಮೇ 2025
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಮತ್ತು ತಕ್ಷಣವೇ ಅರ್ಜಿ ಸಲ್ಲಿಸಿ.
To Download Official Notification
Income Tax Jobs 2025
Income Tax Vacancy 2025
Income Tax Department Notification 2025
Income Tax Application Form 2025
Income Tax Department Eligibility Criteria
How to Apply for Income Tax Jobs
Income Tax Recruitment Application Process
Income Tax Department Selection Process
Income Tax Department Salary Details
Income Tax Recruitment Last Date to Apply
Income Tax Department Important Dates
Income Tax Recruitment 2025 Application Deadline





Comments