Loading..!

ಐಐಟಿ ಖರಗ್ ಪುರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Bhagya R K | Date:21 ಅಕ್ಟೋಬರ್ 2023
not found

ಖರಗ್ ಪುರದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)ಯಲ್ಲಿ ಖಾಲಿ ಇರುವ 182 ಡೆಪ್ಯುಟಿ ರಿಜಿಸ್ಟ್ರಾರ್, ಡೆಪ್ಯುಟಿ ಲೈಬ್ರರಿಯನ್, ಅಸಿಸ್ಟೆಂಟ್ ಲೈಬ್ರರಿಯನ್, ಸೀನಿಯರ್ ಸಾಫ್ಟ್ ವೇರ್ ಎಂಜಿನಿಯರ್ ಗ್ರೇಡ್ 1 ಮತ್ತು 2, ಕಾನೂನು ಆಫೀಸರ್, ಮೆಡಿಕಲ್ ಆಫೀಸರ್, ಸ್ಪೋರ್ಟ್ಸ್ ಆಫೀಸರ್, ಟೆಕ್ನಿಕಲ್ ಆಫೀಸರ್, ಜೂನಿಯರ್ ಅಕೌಂಟ್ಸ್ ಆಫೀಸರ್, ಮತ್ತು ಅಡ್ಮಿಸ್ಟ್ರೇಟಿವ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಯನ್ನು ನೇಮಕ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 30/10/2023 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 

No. of posts:  182
Application Start Date:  21 ಅಕ್ಟೋಬರ್ 2023
Application End Date:  30 ಅಕ್ಟೋಬರ್ 2023
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ Diploma/ B. Tech./ B.E/ M. Tech./ M .sc /M.E ಸ್ನಾತಕೋತ್ತರ ಪದವಿ/ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

Fee:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 1000 ರೂ ಗಳಿಂದ 500/-ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. SC/ ST ಮಾಜಿ ಸೈನಿಕರು/ PwBD/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ.

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 25 ವರ್ಷ ಹಾಗೂ ಗರಿಷ್ಠ 50 ವರ್ಷ ವಯೋಮಿತಿಯನ್ನು ಮೀರಬಾರದು.

Employment Type: FULL_TIME
Hiring Organization: KPSC Vaani https://www.kpscvaani.com
Work Location: ಖರಗ್ ಪುರ, KA,
To Download the official notification
Related Tags: Degree

Comments