ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯ (ಐಡಿಬಿಐ) ದಲ್ಲಿ ಖಾಲಿ ಇರುವ 134 ಸ್ಪೆಷಲಿಸ್ಟ್ ಕೇಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:27 ಡಿಸೆಂಬರ್ 2020

1964 ರಲ್ಲಿ ಸ್ಥಾಪಿಸಲಾದ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ಭಾರತೀಯ ಉದ್ಯಮದ ಅಭಿವೃದ್ಧಿಗೆ ಸಾಲ ಮತ್ತು ಇತರ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತದೆ.
ಪ್ರಸ್ತುತ ಬ್ಯಾಂಕಿನಲ್ಲಿ ಖಾಲಿ ಇರುವ 134 ಸ್ಪೆಷಲಿಸ್ಟ್ ಕೇಡರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜನವರಿ 7,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
No. of posts: 134
Application Start Date: 24 ಡಿಸೆಂಬರ್ 2020
Application End Date: 7 ಜನವರಿ 2021
Selection Procedure: - ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮತ್ತು/ಅಥವಾ ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಈ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ/ಪಿಜಿಡಿಎಂ/ಪಿಜಿಡಿಬಿಎ, ಬಿಎಸ್ಸಿ, ಬಿ.ಕಾಂ ಮತ್ತು ಎಂಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee:
- ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು- 700/- ರೂ ಮತ್ತು
- ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳು - 150/-ರೂ ಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು.
Age Limit:
ದಿನಾಂಕ ನವೆಂಬರ್ 1, 2020 ಕ್ಕೆ ಅನ್ವಯಿಸುವಂತೆ
- ಡಿಜಿಎಂ ಹುದ್ದೆಗಳಿಗೆ ಕನಿಷ್ಠ- 35 ರಿಂದ ಗರಿಷ್ಠ- 40 ವರ್ಷ,
- ಎಜಿಎಂ ಹುದ್ದೆಗಳಿಗೆ ಕನಿಷ್ಠ- 28 ರಿಂದ ಗರಿಷ್ಠ- 40 ವರ್ಷ,
ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ- 25 ರಿಂದ ಗರಿಷ್ಠ- 35 ವರ್ಷ ಮತ್ತು
- ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ- 21 ರಿಂದ ಗರಿಷ್ಠ- 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ನೇಮಕಾತಿಯ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Pay Scale:
ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತೆ ವೇತನ ನಿಗದಿಪಡಿಸಲಾಗಿದೆ
- ಡಿಜಿಎಂ ಹುದ್ದೆಗಳಿಗೆ - 50,030/- ದಿಂದ 59,170/-ರೂ ಗಳವರೆಗೆ
- ಎಜಿಎಂ ಹುದ್ದೆಗಳಿಗೆ - 42,020/- ದಿಂದ 51,490/- ರೂ ಗಳವರೆಗೆ
- ಮ್ಯಾನೇಜರ್ ಹುದ್ದೆಗಳಿಗೆ - 31,705/- ದಿಂದ 45,950/-ರೂ ಗಳವರೆಗೆ
- ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ -23,700/- ದಿಂದ 42,020/-ರೂ ಗಳವರೆಗೆ ವೇತನವನ್ನು ನೀಡಲಾಗುತ್ತದೆ.





Comments