ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳಿಗೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Siddaram Halli | Date:29 ಜನವರಿ 2020

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿಯೂ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಶೇಷ ವಾಹಕ ಸಂಸ್ಥೆಯಾಗಿ ಸಾರ್ವಜನಿಕ ಕಂಪನಿ ಕಾಯಿದೆ ಅಡಿ ಹದಿಮೂರ ಅಡಿಯಲ್ಲಿ ಯೋಜನೆ ನೋಂದಾಯಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ. ಸದರಿ ಸಂಸ್ಥೆಯಲ್ಲಿ ಖಾಲಿ ಇರುವ ಈ ಕೆಳಕಂಡ ವಿವಿಧ ಹುದ್ದೆಗಳಿಗೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅವಶ್ಯ ದಾಖಲೆಗಳೊಂದಿಗೆ ದಿನಾಂಕ 15 ಫೆಬ್ರವರಿ 2020 ರ ಒಳಗಾಗಿ ಕಚೇರಿಗೆ ತಲುಪುವಂತೆ ಅರ್ಜಿಗಳನ್ನು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹುದ್ದೆಗಳ ವಿವರ : * ಪ್ರಾಜೆಕ್ಟ್ ಮ್ಯಾನೇಜರ್ - 03 * ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ - 03 * ಟೆಕ್ನಿಕಲ್ ಅಸಿಸ್ಟೆಂಟ್ - 03 * ಪ್ರಾಜೆಕ್ಟ್ ಆಫೀಸರ್ ಎಂಐಎಸ್ - 03 * ಪಬ್ಲಿಕ್ ರಿಲೇಷನ್ ಆಫೀಸರ್ ಕಮ್ ಸೋಸಿಯಲ್ ಡವಲಪ್ಮೆಂಟ್ ಆಫೀಸರ್ / HR - 01 * ಅಸಿಸ್ಟೆಂಟ್ ಎಂಜಿನಿಯರ್ - 01 * ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್ - 01 * ಮ್ಯಾನೇಜರ್ ಅರ್ಬನ್ ಪ್ಲಾನರ್ - 01 * ಅರ್ಬನ್ ಫೈನಾನ್ಸ್ ಎಕ್ಸ್ಪರ್ಟ್ - 01 * ಕಂಪನಿ ಸೆಕ್ರೆಟರಿ - 01 * ಕಂಪ್ಯೂಟರ್ ಆಪರೇಟರ್ with ವೆಬ್ ಡಿಸೈನರ್ - 01 - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಮತ್ತು ಅನುಭವದ ಕುರಿತು ಈ ಕೆಳಗೆ ನೀಡಿರುವ ಅಧಿಸೂಚನೆಯಲ್ಲಿ ವಿವರಿಸಲಾಗಿದೆ. * ಆಸಕ್ತ ಅಭ್ಯರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಅಪ್ಲಿಕೇಷನ್ ಫಾರ್ಮ್ ನೊಂದಿಗೆ ಈ ಮೇಲ್ ಮಾಡಬಹುದು * ಅರ್ಜಿದಾರರು ಹುದ್ದೆಗೆ ಅನುಗುಣವಾಗಿ ಶಿಕ್ಷಣ, ಅನುಭವ ಮತ್ತು ಇತರೆ ದಾಖಲಾತಿಗಳನ್ನು ಎರಡು ಪ್ರತಿಗಳಲ್ಲಿ ಸ್ವಯಂ ದೃಢೀಕರಣದೊಂದಿಗೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಬಹುದಾಗಿದೆ. * ಈ ಎಲ್ಲ ಹುದ್ದೆಗಳು ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು ಒಂದು ವರ್ಷದ ಅವಧಿಗೆ ಕಾರ್ಯನಿರ್ವಹಿಸಬಹುದಾಗಿದೆ. * ಅರ್ಜಿ ಸಲ್ಲಿಸಬೇಕಾದ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ 4ನೇ ಮಹಡಿ, F ಬ್ಲಾಕ್, ಐಟಿ ಪಾರ್ಕ್, ಹುಬ್ಬಳ್ಳಿ Email id : smartcityhubballidharwad@gmail.com ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
No. of posts: 16
Application Start Date: 29 ಜನವರಿ 2020
Application End Date: 15 ಫೆಬ್ರುವರಿ 2020
Work Location: ಹುಬ್ಬಳ್ಳಿ-ಧಾರವಾಡ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಹುಬ್ಬಳ್ಳಿ-ಧಾರವಾಡ, KA,




Comments