Loading..!

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳಿಗೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Siddaram Halli | Date:29 ಜನವರಿ 2020
not found
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿಯೂ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಶೇಷ ವಾಹಕ ಸಂಸ್ಥೆಯಾಗಿ ಸಾರ್ವಜನಿಕ ಕಂಪನಿ ಕಾಯಿದೆ ಅಡಿ ಹದಿಮೂರ ಅಡಿಯಲ್ಲಿ ಯೋಜನೆ ನೋಂದಾಯಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ.
ಸದರಿ ಸಂಸ್ಥೆಯಲ್ಲಿ ಖಾಲಿ ಇರುವ ಈ ಕೆಳಕಂಡ ವಿವಿಧ ಹುದ್ದೆಗಳಿಗೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅವಶ್ಯ ದಾಖಲೆಗಳೊಂದಿಗೆ ದಿನಾಂಕ 15 ಫೆಬ್ರವರಿ 2020 ರ ಒಳಗಾಗಿ ಕಚೇರಿಗೆ ತಲುಪುವಂತೆ ಅರ್ಜಿಗಳನ್ನು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹುದ್ದೆಗಳ ವಿವರ :
* ಪ್ರಾಜೆಕ್ಟ್ ಮ್ಯಾನೇಜರ್ - 03
* ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ - 03
* ಟೆಕ್ನಿಕಲ್ ಅಸಿಸ್ಟೆಂಟ್ - 03
* ಪ್ರಾಜೆಕ್ಟ್ ಆಫೀಸರ್ ಎಂಐಎಸ್ - 03
* ಪಬ್ಲಿಕ್ ರಿಲೇಷನ್ ಆಫೀಸರ್ ಕಮ್ ಸೋಸಿಯಲ್ ಡವಲಪ್ಮೆಂಟ್ ಆಫೀಸರ್ / HR - 01
* ಅಸಿಸ್ಟೆಂಟ್ ಎಂಜಿನಿಯರ್ - 01
* ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್ - 01
* ಮ್ಯಾನೇಜರ್ ಅರ್ಬನ್ ಪ್ಲಾನರ್ - 01
* ಅರ್ಬನ್ ಫೈನಾನ್ಸ್ ಎಕ್ಸ್ಪರ್ಟ್ - 01
* ಕಂಪನಿ ಸೆಕ್ರೆಟರಿ - 01
* ಕಂಪ್ಯೂಟರ್ ಆಪರೇಟರ್ with ವೆಬ್ ಡಿಸೈನರ್ - 01


- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಮತ್ತು ಅನುಭವದ ಕುರಿತು ಈ ಕೆಳಗೆ ನೀಡಿರುವ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

* ಆಸಕ್ತ ಅಭ್ಯರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಅಪ್ಲಿಕೇಷನ್ ಫಾರ್ಮ್ ನೊಂದಿಗೆ ಈ ಮೇಲ್ ಮಾಡಬಹುದು
* ಅರ್ಜಿದಾರರು ಹುದ್ದೆಗೆ ಅನುಗುಣವಾಗಿ ಶಿಕ್ಷಣ, ಅನುಭವ ಮತ್ತು ಇತರೆ ದಾಖಲಾತಿಗಳನ್ನು ಎರಡು ಪ್ರತಿಗಳಲ್ಲಿ ಸ್ವಯಂ ದೃಢೀಕರಣದೊಂದಿಗೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಬಹುದಾಗಿದೆ.
* ಈ ಎಲ್ಲ ಹುದ್ದೆಗಳು ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು ಒಂದು ವರ್ಷದ ಅವಧಿಗೆ ಕಾರ್ಯನಿರ್ವಹಿಸಬಹುದಾಗಿದೆ.
* ಅರ್ಜಿ ಸಲ್ಲಿಸಬೇಕಾದ ವಿಳಾಸ :
ವ್ಯವಸ್ಥಾಪಕ ನಿರ್ದೇಶಕರು,
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್
4ನೇ ಮಹಡಿ, F ಬ್ಲಾಕ್, ಐಟಿ ಪಾರ್ಕ್,
ಹುಬ್ಬಳ್ಳಿ
Email id : smartcityhubballidharwad@gmail.com

ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
No. of posts:  16
Application Start Date:  29 ಜನವರಿ 2020
Application End Date:  15 ಫೆಬ್ರುವರಿ 2020
Work Location:  ಹುಬ್ಬಳ್ಳಿ-ಧಾರವಾಡ
to download official notification Hubli-Dharwad Smart-City Limited Recruitment
to download application form Hubli-Dharwad Smart-City Limited Recruitment
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments