Loading..!

HLL ಲೈಫ್‌ಕೇರ್ ನೇಮಕಾತಿ 2025: ಬೆಳಗಾವಿಯಲ್ಲಿ 22 ಉತ್ಪಾದನಾ ಸಹಾಯಕ ಹಾಗೂ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:18 ಜುಲೈ 2025
not found

ಸರ್ಕಾರಿ ಉದ್ಯೋಗದ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಸಂಭ್ರಮದ ಸುದ್ದಿ! HLL ಲೈಫ್‌ಕೇರ್ ಲಿಮಿಟೆಡ್ (HLL Lifecare Limited) ಸಂಸ್ಥೆಯು 2025ನೇ ಸಾಲಿನ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಲೈಫ್‌ಕೇರ್ ಲಿಮಿಟೆಡ್ ನಲ್ಲಿ  ಉದ್ಯೋಗ ಎಂದರೆ ಸ್ಥಿರತೆ, ಭದ್ರತೆ ಮತ್ತು ಸಮಾಜದಲ್ಲಿ ಗೌರವ. ಪದವಿಧರರವರೆಗೆ ಎಲ್ಲರಿಗೂ ಅವಕಾಶವಿದೆ.


ಈ ನೇಮಕಾತಿಯಡಿಯಲ್ಲಿ ಉತ್ಪಾದನಾ ಸಹಾಯಕರು ಮತ್ತು ತರಬೇತಿದಾರರು ಹುದ್ದೆಗಳನ್ನು ಭರ್ತಿ ಮಾಡಲಿದ್ದು ಒಟ್ಟು 22 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ಬೆಳಗಾವಿ ಜಿಲ್ಲೆಯಲ್ಲಿ ಉದ್ಯೋಗ ಸಾಧ್ಯತೆಯನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ತಮ್ಮ ಅರ್ಜಿಯನ್ನು 2025ರ ಜುಲೈ 30ರೊಳಗೆ ಆಫ್‌ಲೈನ್ ಮೂಲಕ ಸಲ್ಲಿಸಬೇಕು.


ಹುದ್ದೆಗಳ ವಿವರ :
ಹುದ್ದೆಯ ಹೆಸರು : ಪ್ರೊಡಕ್ಷನ್ ಅಸಿಸ್ಟೆಂಟ್, ತರಬೇತಿದಾರರು
ಒಟ್ಟು ಹುದ್ದೆಗಳು : 22
ಉದ್ಯೋಗ ಸ್ಥಳ : ಕನಾಗಲಾ, ಬೆಳಗಾವಿ ಜಿಲ್ಲೆ – ಕರ್ನಾಟಕ
ಅಧಿಕೃತ ವೆಬ್‌ಸೈಟ್ : [https://lifecarehll.com](https://lifecarehll.com)


ಹುದ್ದೆಗಳ ವಿವರ :
ಉತ್ಪಾದನಾ ಸಹಾಯಕ (Production Assistant) : 08
ಹಿರಿಯ ಉತ್ಪಾದನಾ ಸಹಾಯಕ (ಫಾರ್ಮಾ) : 01
ಲ್ಯಾಬ್ ಅನಾಲಿಸ್ಟ್ : 01
ಲೆಕ್ಕಾಧಿಕಾರಿ (Accounts Officer) : 01
ತರಬೇತಿದಾರ – ಸಾಮಗ್ರಿ ನಿರ್ವಹಣೆ :  01
ಇಂಜಿನಿಯರಿಂಗ್ ಪದವಿದಾರ ತರಬೇತಿದಾರರು : 05
ಡಿಪ್ಲೋಮಾ ತರಬೇತಿದಾರರು : 05


ವಿದ್ಯಾರ್ಹತೆ :
ಉತ್ಪಾದನಾ ಸಹಾಯಕ (Production Assistant) : ಐಟಿಐ (ITI)
ಹಿರಿಯ ಉತ್ಪಾದನಾ ಸಹಾಯಕ (ಫಾರ್ಮಾ) : ಡಿಪ್ಲೋಮಾ
ಲ್ಯಾಬ್ ಅನಾಲಿಸ್ಟ್ : ಬಿ.ಎಸ್‌ಸಿ / ಬಿ.ಫಾರ್ಮ್
ಲೆಕ್ಕಾಧಿಕಾರಿ (Accounts Officer) :  ಸಿಎ / ಬಿ.ಕಾಂ / ಎಂ.ಬಿ.ಎ
ತರಬೇತಿದಾರ – ಸಾಮಗ್ರಿ ನಿರ್ವಹಣೆ :  ಎಂ.ಬಿ.ಎ
ಇಂಜಿನಿಯರಿಂಗ್ ಪದವಿದಾರ ತರಬೇತಿದಾರರು : ಬಿಇ / ಬಿಟೆಕ್
ಡಿಪ್ಲೋಮಾ ತರಬೇತಿದಾರರು :  ಡಿಪ್ಲೋಮಾ


ವಯೋಮಿತಿ :
HLL ಲೈಫ್‌ಕೇರ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು


ವಯೋಮಿತಿ ಸಡಿಲಿಕೆ :
  * OBC: 3 ವರ್ಷ
  * SC/ST: 5 ವರ್ಷ


ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹9,000/- ರಿಂದ ₹29,500/- ತನಕ ವೇತನ ನೀಡಲಾಗುತ್ತದೆ.


ಆಯ್ಕೆ ವಿಧಾನ :
1. ಲಿಖಿತ ಪರೀಕ್ಷೆ
2. ಕೌಶಲ್ಯ ಪರೀಕ್ಷೆ
3. ವೈಯಕ್ತಿಕ ಸಂದರ್ಶನ


ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.


ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – [https://lifecarehll.com](https://lifecarehll.com)
2. “Careers” ವಿಭಾಗದಲ್ಲಿ ಸಂಬಂಧಿತ ಹುದ್ದೆಯ ಅಧಿಸೂಚನೆಯನ್ನು ಓದಿ
3. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ
4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
5. ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು ಪ್ರಿಂಟ್‌ ಔಟ್ ತೆಗೆದು ಇಟ್ಟುಕೊಳ್ಳಿ
6. ನಂತರ, ಅರ್ಜಿಯ ಪ್ರತಿಯನ್ನು ಈ ವಿಳಾಸಕ್ಕೆ ಕಳುಹಿಸಬೇಕು:


📮
General Manager (Operations) & Unit Chief
HLL Lifecare Limited,
Kanagala – 591225,
Hukkeri Taluka,
Belagavi District, Karnataka


ಅರ್ಜಿ ಸಲ್ಲಿಸಲು ಮುಖ್ಯ ದಿನಾಂಕಗಳು :
ಆರಂಭ ದಿನಾಂಕ : 15-ಜುಲೈ-2025
ಕೊನೆಯ ದಿನಾಂಕ : 30-ಜುಲೈ-2025


- ಈ ನೇಮಕಾತಿ ಕಾರ್ಯಕ್ರಮವು ಡಿಪ್ಲೊಮಾ, ಐಟಿಐ, ಬಿಕಾಂ ಮತ್ತು ಎಂಜಿನಿಯರಿಂಗ್ ಮಾಡಿದ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ ಉತ್ತಮ ಉದ್ಯೋಗಾವಕಾಶ ಒದಗಿಸುತ್ತಿದೆ. ಸರ್ಕಾರಿ ಉದ್ಯೋಗದ ಕನಸು ನನಸಾಗಿಸಲು ಈಗೇ ಅರ್ಜಿ ಸಲ್ಲಿಸಿ!

Comments