Loading..!

ರಾಜ್ಯ ಹೈಕೋರ್ಟ್ ನಿಂದ ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ
| Date:25 ಜುಲೈ 2019
not found
ರಾಜ್ಯದಲ್ಲಿ ನ್ಯಾಯಾಧೀಶರಾಗುವ ಕನಸು ಕಾಣುತ್ತಿರುವ ಕಾನೂನು ಪದವೀಧರರಿಗೆ ಈ ವರ್ಷ ಮತ್ತೊಂದು ಅವಕಾಶ ಒದಗಿ ಬಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ನೇರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.
ಕಳೆದ ಡಿಸೆಂಬರ್ ನಲ್ಲಿ 71 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕೇವಲ 15 ಮಂದಿ ಮಾತ್ರ ಅಂತಿಮವಾಗಿ ಆಯ್ಕೆಯಾಗಿದ್ದರು . ಹೀಗಾಗಿ ಬಾಕಿ ಉಳಿದ 56 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಈಗ ಮತ್ತೆ ಉಚ್ಚ ನ್ಯಾಯಾಲಯವೂ ಅಧಿಸೂಚನೆ ಹೊರಡಿಸಿದೆ.

ಮೀಸಲಾತಿಗನುಗುಣವಾಗಿ ಹುದ್ದೆಗಳ ವರ್ಗಿಕರಣ :
ಒಟ್ಟು ಖಾಲಿ ಉಳಿದಿರುವ ಬ್ಯಾಕ್ ಲ್ಯಾಗ್ ಹುದ್ದೆಗಳು- 56
* ಪ್ರವರ್ಗ-1 ಕ್ಕೆ 9 ಹುದ್ದೆಗಳು
* ಪ್ರವರ್ಗ-2(A)ಗೆ 40 ಹುದ್ದೆಗಳು
* ಪ್ರವರ್ಗ-2(B)ಗೆ 07 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
No. of posts:  56
Application Start Date:  24 ಜುಲೈ 2019
Application End Date:  22 ಆಗಸ್ಟ್ 2019
Last Date for Payment:  26 ಜುಲೈ 2019
Selection Procedure: ಮೊದಲಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಮೌಖಿಕ ಪರೀಕ್ಷೆ ನಡೆಯಲಿದೆ. ಮುಖ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ 100 ಅಂಕಗಳ ಪ್ರಶ್ನೆ ಪತ್ರಿಕೆ ಇರುತ್ತದೆ. ಸಿವಿಲ್ ಪ್ರಕ್ರಿಯಾ ಸಂಹಿತೆ, ವರ್ಗಾವಣೆಯ ಲಿಖಿತಗಳ ಅಧಿನಿಯಮ, ಸ್ವತ್ತು ವರ್ಗಾವಣೆ ಅಧಿನಿಯಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಮುಖ್ಯ ಪರೀಕ್ಷೆಯಲ್ಲಿ ಭಾಷಾಂತರ ಪತ್ರಿಕೆ, ಕಾನೂನು ಪತ್ರಿಕೆ -1,2,3 (ತಲಾ 100 ಅಂಕಗಳು), ಮೌಖಿಕ ಪರೀಕ್ಷೆ ಮತ್ತು ಕಂಪ್ಯೂಟರ್ ಜ್ಞಾನದ ಪರೀಕ್ಷೆ ಇರುತ್ತದೆ. ಮೌಖಿಕ ಪರೀಕ್ಷೆಗೆ 100, ಕಂಪ್ಯೂಟರ್ ಪರೀಕ್ಷೆಗೆ 25 ಅಂಕ ನಿಗದಿಯಾಗಿರುತ್ತದೆ.
Qualification: - ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಾನೂನು ಪದವಿ ಪಡೆದಿರಬೇಕು. ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು.
- ಉಚ್ಚ ನ್ಯಾಯಾಲಯದಲ್ಲಿ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಅಗತ್ಯ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಪ್ರಾಸಿಕ್ಯೂಷನ್ ಮತ್ತು ಸರಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಸರಕಾರಿ ಪ್ರಾಸಿಕ್ಯೂಟರ್ ಹಾಗೂ ಹೆಚ್ಚುವರಿ ಸರಕಾರಿ ನ್ಯಾಯವಾದಿಗಳು ಸಹ ಅರ್ಜಿ ಸಲ್ಲಿಸಬಹುದು.
Fee: ಸಿವಿಲ್ ಪ್ರಿಲಿಮ್ಸ್ ಪರೀಕ್ಷೆಗೆ :
* ಪ್ರವರ್ಗ -1 ರ ಅಭ್ಯರ್ಥಿಗಳು 500 /- ರೂ ಅರ್ಜಿ ಶುಲ್ಕ ಪಾವತಿಸಬೇಕು.
* 2(A), 2(B) ಅಭ್ಯರ್ಥಿಗಳು 250/- ರೂ ಶುಲ್ಕ ಪಾವತಿಸಬೇಕು.

ಮೈನ್ಸ್ ಪರೀಕ್ಷಗೆ :
* 2(A), 2(B) ಅಭ್ಯರ್ಥಿಗಳು 1000/- ರೂ. ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 500/- ರೂ.ಅರ್ಜಿ ಶುಲ್ಕ ಪಾವತಿಸಬೇಕು.

-ಅರ್ಜಿ ಶುಲ್ಕವನ್ನು ಆನ್ ಲೈನ್ ಮತ್ತು ಬ್ಯಾಂಕ್ ಚಲನ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ.
Age Limit: ಸಿವಿಲ್ ನ್ಯಾಯಾಧೀಶ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
- ವಯೋಮಿತಿಯಲ್ಲಿ SC/ST ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗುತ್ತದೆ ಸೇವಾನಿರತರಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ.
Pay Scale: Rs.27,700/- ರಿಂದ Rs.44,770/-
to download official notification
ನೀವು ಮೊಬೈಲ್ ಫೋನುಗಳನ್ನು ಬಾರಿ ರಿಯಾತಿಯೊಂದಿಗೆ amazon ಜಾಲತಾಣದಿಂದ ಖರೀದಿಸಿ

Comments