Loading..!

ಹಾವೇರಿ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Rukmini Krushna Ganiger | Date:6 ಆಗಸ್ಟ್ 2021
not found
- ಶ್ರೀ ಸಿದ್ಧರಾಮೇಶ್ವರ ಗ್ರಾಮೀಣ ವಿದ್ಯಾವರ್ಧಕ ಸಂಘ (ರಿ) ಚಿಕ್ಕಬಾಸೂರು ತಾII ಬ್ಯಾಡಗಿ ಜಿII ಹಾವೇರಿ ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನುದಾನಿತ ಪ್ರೌಢ ಶಾಲೆಯ ಶ್ರೀ ಬಾಲಕಿಯರ ಪ್ರೌಢಶಾಲೆ, ಆಡೂರ ತಾII ಹಾನಗಲ್ ಜಿII ಹಾವೇರಿ ಇಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಶಿಕ್ಷಕ ವೃಂದದ ಹುದ್ದೆಗಳನ್ನು ತುಂಬಿಕೊಳ್ಳಲು ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಆದೇಶ ಸಂಖ್ಯೆ ಜಿ4:ಸಾಶಿಕಾಹುತು ಸಿದ್ಧರಾಮೇಶ್ವರ ಆಡೂರ 56/2019/20 ದಿನಾಂಕ : 16/03/2020 ರಂದು ಅನುಮತಿ ನೀಡಿರುತ್ತಾರೆ. ಈ ಪ್ರಕಾರ ಸಹ ಶಿಕ್ಷಕ ಹುದ್ದೆಗಳನ್ನು ತುಂಬಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.


- ಹುದ್ದೆಗಳ ವಿವರ (ಕನ್ನಡ ಮಾಧ್ಯಮ) :

* ಹಿಂದಿ ಭಾಷೆ - 01

* ವಿಜ್ಞಾನ - 01

* ಸಮಾಜ ವಿಜ್ಞಾನ  -01
No. of posts:  3
Application Start Date:  4 ಆಗಸ್ಟ್ 2021
Application End Date:  24 ಆಗಸ್ಟ್ 2021
Work Location:  ಹಾವೇರಿ ಜಿಲ್ಲೆ
Selection Procedure: - ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Fee: - ಸಹ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಹಾಗೂ ಅವಶ್ಯಕ ದೃಢೀಕೃತ ದಾಖಲೆಗಳೊಂದಿಗೆಪರಿಶಿಷ್ಟ ಜಾತಿ ₹ 1000 , ಸಾಮಾನ್ಯ ₹ 1500 ರೂಪಾಯಿ ರಾಷ್ಟ್ರೀಕೃತ ಬ್ಯಾಂಕಿನಿಂದ ಡಿಡಿ (DD)ಯನ್ನು ಗೌರವ ಕಾರ್ಯದರ್ಶಿ, ಶ್ರೀ ಸಿದ್ದರಾಮೇಶ್ವರ ಗ್ರಾಮೀಣ ವಿದ್ಯಾವರ್ಧಕ ಸಂಘ (ರಿ) ಚಿಕ್ಕಬಾಸೂರ ತಾಲ್ಲೂಕು ಬ್ಯಾಡಗಿ ಜಿಲ್ಲಾ ಹಾವೇರಿ ಇವರ ಹೆಸರಿನಲ್ಲಿ ಪಡೆದು ಅರ್ಜಿ ಸಮೇತ ಸದರಿಯವರ ವಿಳಾಸಕ್ಕೆ ದಿನಾಂಕ: 04/08/2021 ರಿಂದ 24/08/2021 ರ ಇಪ್ಪತ್ತೊಂದು ದಿನಗಳ ಒಳಗಾಗಿ ಅರ್ಜಿಗಳನ್ನು ಕಳುಹಿಸಬೇಕು. ಅರ್ಜಿಯ 1 ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಇವರ ವಿಳಾಸಕ್ಕೆ ಕಳಿಸಬೇಕು.
Pay Scale: - ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ ಶ್ರೇಣಿ ಅನ್ವಯ ಸಂಬಳ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the News Paper Notification

Comments