Loading..!

ಹಾವೇರಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಕಾಯಕಮಿತ್ರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Tags: SSLC
Published by: Surekha Halli | Date:28 ಮೇ 2021
not found
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯತಿಗಳಿಗೆ 'ಗ್ರಾಮ ಕಾಯಕಮಿತ್ರ' ಹುದ್ದೆಗಳನ್ನು ನೇಮಕ ಮಾಡಲು ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಖಾಲಿ ಇರುವ ಗ್ರಾಮ ಕಾಯಕಮಿತ್ರ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು ಆಯ್ಕೆ ಮಾಡಲಾದ 9 ಗ್ರಾಮಪಂಚಾಯತಿಗಳು : ರಟ್ಟಿಹಳ್ಳಿ ತಾಲೂಕಿನ ಹುಲ್ಲತ್ತಿ, ಹಳ್ಳೂರು, ಕುಂಚೂರು, ನೇಶ್ವಿ, ಶಿರಗಂಬಿ, ಮಕರಿ, ಇಂಗಳಗೊಂದಿ, ಚಿಕ್ಕಯಡಚಿ, ಹಿರೇಕಬ್ಬಾರ

* ದಿನಾಂಕ 1-1-2021ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರೀಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು.

* ಹುದ್ದೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು. 45 ವರ್ಷ ವಯಸ್ಸನ್ನು ಮೀರಿರಬಾರದು.
Application Start Date:  24 ಮೇ 2021
Application End Date:  15 ಜೂನ್ 2021
Work Location:  ಹಾವೇರಿ ಜಿಲ್ಲೆ
To Download Official Notification

Comments

Purushottam Biradar ಮೇ 27, 2021, 10:25 ಅಪರಾಹ್ನ
Sachin Kumar G C ಜೂನ್ 8, 2021, 6:37 ಅಪರಾಹ್ನ