ಹಾವೇರಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಕಾಯಕಮಿತ್ರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Published by: Rukmini Krushna Ganiger | Date:18 ಜುಲೈ 2021

- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಮತ್ತು ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಹಾವೇರಿ ಜಿಲ್ಲೆಯ 08 ತಾಲೂಕುಗಳಲ್ಲಿ ಗ್ರಾಮ ಪಂಚಾಯತ ಮಟ್ಟದಲ್ಲಿ ಕುಟುಂಬಗಳ ನೋಂದಣಿ, ಕೆಲಸದ ಬೇಡಿಕೆ ಸ್ವೀಕರಿಸುವದು ಮತ್ತು ಸ್ವೀಕೃತಿ ನೀಡುವದು, ಗ್ರಾಮ ಸಭೆ ಮತ್ತು ಸಾಮಾಜಿಕ ಪರಿಶೋಧನಾ ಸಭೆಗಳನ್ನು ಗ್ರಾಮ ಸಭೆಗಳನ್ನು ಆಯೋಜಿಸಲು ನೆರವು ನೀಡುವದು ಇತ್ಯಾದಿ ಕರ್ತ್ಯವಗಳನ್ನೂ ನಿರ್ವಹಿಸುವ ಮೂಲಕ ಯೋಜನೆಯ ಆಡಳಿತವನ್ನು ಉತ್ತಮಗೊಳಿಸುವಲ್ಲಿ ನೆರವು ನೀಡುವ ಸಲುವಾಗಿ 2020 -21 ನೇ ಸಾಲಿನಲ್ಲಿ 20000 ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯತಗಳಲ್ಲಿ " ಗ್ರಾಮ ಕಾಯಕ ಮಿತ್ರ " ರನ್ನು ಗೌರವ ಧನದ ಆಧಾರದಲ್ಲಿ 79 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲು ಉಲ್ಲೇಖದನ್ವಯ ನಿರ್ದೇಶನವಿರುತ್ತದೆ. ಆದ್ದರಿಂದ ಗ್ರಾಮ ಪಂಚಾಯತಿಗಳಿಗೆ 'ಗ್ರಾಮ ಕಾಯಕಮಿತ್ರ' ಹುದ್ದೆಗಳನ್ನು ನೇಮಕ ಮಾಡಲು ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಖಾಲಿ ಇರುವ ಗ್ರಾಮ ಕಾಯಕಮಿತ್ರ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ : 29/07/2021 ದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Application Start Date: 15 ಜುಲೈ 2021
Application End Date: 29 ಜುಲೈ 2021
Work Location: Karnataka





Comments