ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕೇಂದ್ರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ದಲ್ಲಿ ಖಾಲಿ ಇರುವ 84 ಸೀನಿಯರ್ ಟೆಸ್ಟ್ ಪೈಲಟ್, ಚೀಫ್ ಮ್ಯಾನೇಜರ್ (ಸಿವಿಲ್) – VI, ಸೀನಿಯರ್ ಮ್ಯಾನೇಜರ್ (ಸಿವಿಲ್) – V, ಡೆಪ್ಯುಟಿ ಮ್ಯಾನೇಜರ್ (ಸಿವಿಲ್) – III ಮತ್ತು ಮ್ಯಾನೇಜರ್ (IMM) – IV ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 30/11/2023 ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 84
ಸೀನಿಯರ್ ಟೆಸ್ಟ್ ಪೈಲಟ್ - 02
ಚೀಫ್ ಮ್ಯಾನೇಜರ್ (ಸಿವಿಲ್) – VI, - 01
ಸೀನಿಯರ್ ಮ್ಯಾನೇಜರ್ (ಸಿವಿಲ್) – V, - 01
ಡೆಪ್ಯುಟಿ ಮ್ಯಾನೇಜರ್ (ಸಿವಿಲ್) – III - 09
ಮ್ಯಾನೇಜರ್ (IMM) – IV - 05
ಡೆಪ್ಯುಟಿ ಮ್ಯಾನೇಜರ್ (IMM) – III- 12
ಇಂಜಿನಿಯರ್ (IMM) – II - 09
ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್) – III - 09
ಫೈನಾನ್ಸ್ ಆಫೀಸರ್ – II - 06
ಡೆಪ್ಯುಟಿ ಮ್ಯಾನೇಜರ್ (HR) – III- 05
ಡೆಪ್ಯುಟಿ ಮ್ಯಾನೇಜರ್ (ಲೀಗಲ್) – III - 07
ಡೆಪ್ಯುಟಿ ಮ್ಯಾನೇಜರ್ (ಮಾರ್ಕೆಟಿಂಗ್) – III 5
ಸೆಕ್ಯೂರಿಟಿ ಆಫೀಸರ್ – II- 09
ಆಫೀಸರ್ (ಆಫೀಸರ್ ಲ್ಯಾಂಗ್ವೇಜ್) – II- 01
ಫೈರ್ ಆಫೀಸರ್ – II- 03
ಇಂಜಿನಿಯರ್ (CS) (ಕಾಂಪ್ಲೆಕ್ಸ್ ಆಫೀಸ್) – II- 03
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ITI/ Diploma/ CA/ B.Com/ MBA/ Engineering ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಮತ್ತು
SC/ST/PH ಅಭ್ಯರ್ಥಿಗಳು ಶುಲ್ಕದಿಂದ ವಿನಾಯಿತಿ ಹೊಂದಿರುತ್ತಾರೆ.
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ 48 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWD ಅಭ್ಯರ್ಥಿಗಳು: 10 ವರ್ಷಗಳು
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments