ಬೆಳಗಾವಿ ಜಿಲ್ಲೆಯ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಭೋದಕ ಹುದ್ದೆಗಳ ನೇಮಕಾತಿ
Published by: Surekha Halli | Date:22 ಸೆಪ್ಟೆಂಬರ್ 2020

ಗುರುದೇವ ಆತ್ಮಾನಂದ ಶಿಕ್ಷಣ ಸಮಿತಿ ವತಿಯಿಂದ ನಡೆಯುತ್ತಿರುವ ಗುರುದೇವ ಆತ್ಮಾನಂದ ಬಾಲಕೆಯರ ಪ್ರೌಢಶಾಲೆ ಸುರೇಬಾನ - 591127 ತಾ: ರಾಮದುರ್ಗ ಜಿ: ಬೆಳಗಾವಿ ಇಲ್ಲಿ ಖಾಲಿಯಿರುವ ಸಹ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯನ್ನು ನೇಮಕಾತಿ ಮಾಡಲು ಮಾನ್ಯ ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳೊಂದಿಗೆ ಹಾಗೂ ರೂ . 1000 /- ಡಿ.ಡಿ.ಯನ್ನು"ಮಾನ್ಯ ಅಧ್ಯಕ್ಷರು, ಶ್ರೀ ಗುರುದೇವ ಆತ್ಮಾನಂದ ಶಿಕ್ಷಣ ಸಮಿತಿ, ಮನಿಹಾಳ - ಸುರೇಬಾನ" ಇವರ ಹೆಸರಿನಲ್ಲಿ ಖರೀದಿಸಿ ಅರ್ಜಿಯೊಂದಿಗೆ 07-10-2020 ರೊಳಗಾಗಿ ಸಲ್ಲಿಸಬೇಕು. ಒಂದು ಪ್ರತಿಯನ್ನು "ಮಾನ್ಯ ಅಧ್ಯಕ್ಷರು, ಶ್ರೀ ಗುರುದೇವ ಆತ್ಮಾನಂದ ಶಿಕ್ಷಣ ಇಲಾಖೆ ಬೆಳಗಾವಿ (ದಕ್ಷಿಣ)" ಇವರಿಗೆ ಸಲ್ಲಿಸಬೇಕು. ಸಂದರ್ಶನದ ದಿನಾಂಕವನ್ನು ತಮಗೆ ನಂತರ ಅಂಚೆಯ ಮೂಲಕ ತಿಳಿಸಲಾಗುವುದು. ಸ್ವ ವಿಳಾಸವುಳ್ಳ ಒಂದು ಲಕೋಟೆಯನ್ನು ಅರ್ಜಿಯ ಜೊತೆಗೆ ಲಗತ್ತಿಸಿರಬೇಕು. ಅರ್ಜಿಗಳನ್ನು "ಮಾನ್ಯ ಅಧ್ಯಕ್ಷರು, ಶ್ರೀ ಗುರುದೇವ ಆತ್ಮಾನಂದ ಶಿಕ್ಷಣ ಸಮಿತಿ, ಮನಿಹಾಳ - ಸುರೇಬಾನ 591127 ತಾ:ರಾಮದುರ್ಗ ಜಿ: ಬೆಳಗಾವಿ" ಈ ವಿಳಾಸಕ್ಕೆ ಸಲ್ಲಿಸಬೇಕು.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Application Start Date: 17 ಸೆಪ್ಟೆಂಬರ್ 2020
Application End Date: 7 ಅಕ್ಟೋಬರ್ 2020





Comments