Loading..!

ಕರ್ನಾಟಕ ESIC ವೈದ್ಯಕೀಯ ಕಾಲೇಜಿನಲ್ಲಿ ಬೋಧಕ ಹುದ್ದೆಗಳ ಬೃಹತ್ ನೇಮಕಾತಿ: ಪರೀಕ್ಷೆಯಿಲ್ಲದೆ ಸರ್ಕಾರಿ ಕೆಲಸ ಪಡೆಯಿರಿ, ನೇರ ಸಂದರ್ಶನದ ಮೂಲಕ ಆಯ್ಕೆ!
Tags: MBBS
Published by: Yallamma G | Date:5 ಜನವರಿ 2026
not found

ESIC ಕರ್ನಾಟಕ ನೇಮಕಾತಿ 2026 – 42 ಪ್ರಾಧ್ಯಾಪಕ, ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ Walk-in Interview


ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ESIC ವೈದ್ಯಕೀಯ ಕಾಲೇಜು, ಪಿ.ಜಿ.ಐ.ಎಂ.ಎಸ್.ಆರ್ ಮತ್ತು ಆಸ್ಪತ್ರೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರು (Professor), ಸಹ ಪ್ರಾಧ್ಯಾಪಕರು (Associate Professor) ಮತ್ತು ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗಳನ್ನು ಭರ್ತಿ ಮಾಡಲು ವಾಕ್-ಇನ್ ಸಂದರ್ಶನವನ್ನು ಆಯೋಜಿಸಿದೆ. ಈ ನೇಮಕಾತಿಯು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಇದನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.


ಕರ್ನಾಟಕದ ಉದ್ಯೋಗಿಯ ರಾಜ್ಯ ವಿಮಾ ನಿಗಮ (ESIC Karnataka) 2026ನೇ ಸಾಲಿನ ಕರ್ನಾಟಕ ಫ್ಯಾಕಲ್ಟಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 42 ಪ್ರಾಧ್ಯಾಪಕರು, ಅಸೋಸಿಯೇಟ್ ಪ್ರೊಫೆಸರ್ ಮತ್ತು ಸಹಾಯಕ ಪ್ರಾಧ್ಯಾಪಕರು ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ನಡೆಯಲಿದೆ. ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇಲ್ಲ, ನೇರವಾಗಿ Walk-in Interview ಮೂಲಕ ಆಯ್ಕೆ ಮಾಡಲಾಗುತ್ತದೆ. ವೈದ್ಯಕೀಯ ಬೋಧನಾ ಕ್ಷೇತ್ರದಲ್ಲಿ ವೃತ್ತಿ ಕಟ್ಟಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶ. ಉತ್ಸಾಹಿಗಳು ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ, ಉದ್ಯೋಗ ಪರಿಣಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. 


ಕಲಬುರಗಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 16-ಜನವರಿ-2026 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ


📌ಹುದ್ದೆಗಳ ಪ್ರಮುಖ ವಿವರಗಳು : 


ಸಂಸ್ಥೆಯ ಹೆಸರು : ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ( ESIC ಕರ್ನಾಟಕ )
ಹುದ್ದೆಗಳ ಸಂಖ್ಯೆ: 42
ಉದ್ಯೋಗ ಸ್ಥಳ: ಕಲಬುರಗಿ – ಕರ್ನಾಟಕ
ಹುದ್ದೆಯ ಹೆಸರು: ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ
ವೇತನ: ತಿಂಗಳಿಗೆ ರೂ.1,40,545 – 2,46,006/-

📌 ಹುದ್ದೆಗಳ ವಿವರ :ಒಟ್ಟು 42 ಹುದ್ದೆಗಳ ವಿವರ ಈ ಕೆಳಗಿನಂತಿದೆ
ಪ್ರಾಧ್ಯಾಪಕರು (Professor) : 06
ಸಹ ಪ್ರಾಧ್ಯಾಪಕರು (Associate Professor) : 14 
ಸಹಾಯಕ ಪ್ರಾಧ್ಯಾಪಕರು (Assistant Professor) : 22


🎓 ಅರ್ಹತಾ ಮಾನದಂಡ : 
- ಶೈಕ್ಷಣಿಕ ಅರ್ಹತೆ: NMC (National Medical Commission) ನಿಯಮಗಳಂತೆ ವೈದ್ಯಕೀಯ ಪದವಿ + ಸ್ನಾತಕೋತ್ತರ (PG) ಅಥವಾ ಸೂಕ್ತ ಸೂಪರ್-ಸ್ಪೆಷಾಲಿಟಿ ಅರ್ಹತೆ ಕಡ್ಡಾಯ.

- KMC / NMC Registration: ಕರ್ನಾಟಕ ಸ್ಟೇಟ್ ಮೆಡಿಕಲ್ ಕೌನ್ಸಿಲ್ (KMC) ಅಥವಾ NMC ನೋಂದಣಿ ಕಡ್ಡಾಯ.

- ಬೋಧನಾ ಅನುಭವ: ಹುದ್ದೆಗೆ ಅನುಗುಣ Teaching Experience ಅಗತ್ಯ.

- Non-Medical Faculty ನಿಯಮ: Anatomy, Physiology, Biochemistry ವಿಭಾಗಗಳಲ್ಲಿ ವೈದ್ಯಕೀಯ ಶಿಕ್ಷಕರು ಲಭ್ಯವಿಲ್ಲದಿದ್ದರೆ 15% ಹುದ್ದೆಗಳಿಗೆ Non-Medical ಅಭ್ಯರ್ಥಿಗಳನ್ನು NMC ನಿಯಮಗಳಂತೆ ಪರಿಗಣಿಸಲಾಗುತ್ತದೆ.


⏳ ವಯಸ್ಸಿನ ಮಿತಿ : ವಯೋಮಿತಿ: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 69 ವರ್ಷಗಳು.


💰 ವೇತನ ಮತ್ತು ಭತ್ಯೆಗಳು (Consolidated Salary) :ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಕ್ರೋಢೀಕೃತ ವೇತನ ಈ ಕೆಳಗಿನಂತೆ ಇರುತ್ತದೆ.
• ಪ್ರಾಧ್ಯಾಪಕರು: ತಿಂಗಳಿಗೆ ₹2,46,006.
• ಸಹ ಪ್ರಾಧ್ಯಾಪಕರು: ತಿಂಗಳಿಗೆ ₹1,63,589.
• ಸಹಾಯಕ ಪ್ರಾಧ್ಯಾಪಕರು: ತಿಂಗಳಿಗೆ ₹1,40,545.
- ಮೇಲಿನ ವೇತನಕ್ಕೆ TA & DA (ಪ್ರಯಾಣ ಭತ್ಯೆ/ದಿನ ಭತ್ಯೆ) ಅನ್ವಯಿಸುತ್ತದೆ.
- DA, HRA, NPA ಅಥವಾ ಇತರ ಯಾವುದೇ ಭತ್ಯೆ ಇರುವುದಿಲ್ಲ.
- Private Practice ಸಂಪೂರ್ಣ ನಿಷೇಧ. ನಿವೃತ್ತ ಸರ್ಕಾರಿ/PSU ವೈದ್ಯರು ಹಾಗೂ ಅರ್ಹ ಖಾಸಗಿ ವೈದ್ಯಕೀಯ ಸಂಸ್ಥೆಗಳ Teaching Faculty ಕೂಡ ಅರ್ಜಿ ಸಲ್ಲಿಸಲು ಅರ್ಹರು.


💸ಅರ್ಜಿ ಶುಲ್ಕ :
SC/ST/ಮಹಿಳಾ ಅಭ್ಯರ್ಥಿಗಳು: ಯಾವುದೇ ಶುಲ್ಕವಿಲ್ಲ.
ಇತರೆ ವರ್ಗದ ಅಭ್ಯರ್ಥಿಗಳು: ₹300.
ಪಾವತಿ ವಿಧಾನ: 'ESI Corporation' ಹೆಸರಿನಲ್ಲಿ ಕಲಬುರಗಿಯಲ್ಲಿ ಪಾವತಿಯಾಗುವಂತೆ ಡಿಮಾಂಡ್ ಡ್ರಾಫ್ಟ್ (Demand Draft) ಮೂಲಕ ಸಲ್ಲಿಸಬೇಕು.


🧭 ಸಂದರ್ಶನದ ಪ್ರಮುಖ ದಿನಾಂಕಗಳು ಮತ್ತು ಸಮಯ :ಅಭ್ಯರ್ಥಿಗಳು ನಿಗದಿತ ದಿನದಂದು ನೇರವಾಗಿ ಹಾಜರಾಗಬೇಕು,
=> ದಾಖಲೆಗಳ ಪರಿಶೀಲನೆ ಮತ್ತು ನೋಂದಣಿ: 15.01.2026 (ಬೆಳಿಗ್ಗೆ 9:00 ರಿಂದ 10:30 ರವರೆಗೆ).

=> ವೈಯಕ್ತಿಕ ಸಂದರ್ಶನ: 16.01.2026 (ಬೆಳಿಗ್ಗೆ 10:30 ರಿಂದ).

=> ಸಂದರ್ಶನ ನಡೆಯುವ ಸ್ಥಳ: ಡೀನ್ ಕಚೇರಿ, ESIC ವೈದ್ಯಕೀಯ ಕಾಲೇಜು, ಕಲಬುರಗಿ.


📂 Interview ಸಮಯದಲ್ಲಿ ತರಬೇಕಾದ ಮೂಲ ದಾಖಲೆಗಳು :ಸಂದರ್ಶನದ ಸಮಯದಲ್ಲಿ ಈ ಕೆಳಗಿನ ಮೂಲ ದಾಖಲೆಗಳು ಮತ್ತು ಒಂದು ಸೆಟ್ ದೃಢೀಕೃತ ನಕಲುಗಳನ್ನು ತರಬೇಕು:
ವಯಸ್ಸಿನ ಪುರಾವೆಗಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
MBBS ಮತ್ತು PG ಪದವಿ ಪ್ರಮಾಣಪತ್ರಗಳು.
ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC/NMC) ನೋಂದಣಿ ಪ್ರಮಾಣಪತ್ರ.
ಅನ್ವಯಿಸಿದಲ್ಲಿ ಜಾತಿ ಪ್ರಮಾಣಪತ್ರ ಮತ್ತು ಅನುಭವದ ಪ್ರಮಾಣಪತ್ರ.
ಗುರುತಿನ ಚೀಟಿ (ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್).
ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.


🏁 ಆಯ್ಕೆ ಪ್ರಕ್ರಿಯೆ
ನೇರವಾಗಿ Interview ನಲ್ಲಿ ಪ್ರದರ್ಶನ ಆಧಾರವಾಗಿ Merit Selection
50% marks Interview cutoff as eligibility
Applicants ಹೆಚ್ಚು ಇದ್ದರೆ Screening Test ನಡೆಸುವ ಸಾಧ್ಯತೆ ESIC ಹೊಂದಿದೆ.
Final Result ಅನ್ನು ESIC ಅಧಿಕೃತ ನೇಮಕಾತಿ ಪೋರ್ಟಲ್‌ನಲ್ಲಿ ಪ್ರಕಟಿಸಲಾಗುತ್ತದೆ.
Waiting List validity – 2 months.ಮಾಡಲಾಗುತ್ತದೆ. ಸಂದರ್ಶನದಲ್ಲಿ ಕನಿಷ್ಠ 50% ಅಂಕಗಳನ್ನು ಪಡೆಯುವುದು ಅವಶ್ಯಕ.


📅 ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆ ದಿನಾಂಕ: 01-01-2026
ವಾಕ್-ಇನ್ ದಿನಾಂಕ: 16-ಜನವರಿ-2026
ನೋಂದಣಿ ದಿನಾಂಕ: 15ನೇ ಜನವರಿ 2026


🔍 ಏಕೆ ಇದು ಪ್ರಮುಖ ನೇಮಕಾತಿ?
Selection List ಅಲ್ಲ, Recruitment drive
ಕರ್ನಾಟಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಗುತ್ತಿಗೆ ಫ್ಯಾಕಲ್ಟಿ ನೇಮಕಕ್ಕೆ ಇದು ದೊಡ್ಡ ಅಭಿಯಾನ
69 ವರ್ಷದವರೆಗೆ ಅವಕಾಶ ಇರುವುದರಿಂದ Senior/Retired faculty ಗೂ ಉತ್ತಮ ವೇದಿಕೆ
NMC Norms fulfillment ಗೆ ESIC ಪ್ರಾಮುಖ್ಯತೆ ನೀಡಿರುವ ನೇಮಕಾತಿ
Walk-in ಆಗಿರುವುದರಿಂದ ಅರ್ಜಿ ಪ್ರಕ್ರಿಯೆ ಸರಳ ಮತ್ತು ವೇಗದ ಆಯ್ಕೆ ಸಾಧ್ಯ


ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ: www.esic.gov.in.


ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೆಚ್ಚಿನ ಉದ್ಯೋಗ ಮಾಹಿತಿಗಾಗಿ KPSCVaani ಫಾಲೋ ಮಾಡಿ.

Application End Date:  16 ಜನವರಿ 2026
To Download Official Notification

Comments