ESIC ಕಲಬುರ್ಗಿ: 29 ವಿವಿಧ ಹುದ್ದೆಗಳಿಗೆ ನೇಮಕಾತಿ — ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ

ಕರ್ನಾಟಕದ ಉದ್ಯೋಗಿಯ ರಾಜ್ಯ ವಿಮಾ ನಿಗಮ (ESIC Karnataka) 2025 ರ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಒಟ್ಟು 29 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ನೇರ ಸಂದರ್ಶನ (Walk-in-Interview) ಮೂಲಕ ಅವಕಾಶ ನೀಡಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು, ಇದು ನಿಮ್ಮ ಜೀವನವನ್ನೇ ಬದಲಾಯಿಸಬಹುದಾದ ಅವಕಾಶವಾಗಿದೆ.
ಈ ನೇಮಕಾತಿಯಡಿಯಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿಮಾಡಲಾಗುತ್ತದೆ. ಉತ್ಸಾಹಿಗಳು ಮತ್ತು ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ, ಉದ್ಯೋಗ ಪರಿಣಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಸರ್ಕಾರಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 16-ಜುಲೈ-2025 ರಂದು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಸಂಸ್ಥೆ ವಿವರ :
ಸಂಸ್ಥೆ ಹೆಸರು : ಉದ್ಯೋಗದಾರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC Karnataka)
ಉದ್ಯೋಗ ಸ್ಥಳ : ಕಲಬುರ್ಗಿ – ಕರ್ನಾಟಕ
ಒಟ್ಟು ಹುದ್ದೆಗಳ ಸಂಖ್ಯೆ : 29
ಅರ್ಜಿ ವಿಧಾನ : ನೇರ ಸಂದರ್ಶನ (Walk-in Interview)
🧾ಹುದ್ದೆಗಳ ವಿವರಗಳು :
ಪ್ರಾಧ್ಯಾಪಕರು : 06
ಸಹ ಪ್ರಾಧ್ಯಾಪಕರು : 10
ಸಹಾಯಕ ಪ್ರಾಧ್ಯಾಪಕರು : 13
💰 ವೇತನ ಶ್ರೇಣಿ :
ಪ್ರಾಧ್ಯಾಪಕರು : ₹2,41,740/-
ಸಹ ಪ್ರಾಧ್ಯಾಪಕರು : ₹1,60,752/-
ಸಹಾಯಕ ಪ್ರಾಧ್ಯಾಪಕರು : ₹1,38,108/-
ಅರ್ಹತಾ ಮಾನದಂಡಗಳು
🎓 ವಿದ್ಯಾರ್ಹತೆ :
ಶೈಕ್ಷಣಿಕ ಅರ್ಹತೆ : ESIC ಕರ್ನಾಟಕ ಅಧಿಸೂಚನೆಯ ಪ್ರಕಾರ (ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿ/ಅನುಭವ) ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.
🎂 ವಯೋಮಿತಿ :
ESIC ಕರ್ನಾಟಕ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಗರಿಷ್ಠ ವಯಸ್ಸು 69 ವರ್ಷಕ್ಕಿಂತ ಕಡಿಮೆ ಇರಬೇಕು.
ವಯೋಮಿತಿಯಲ್ಲಿ ಸಡಿಲಿಕೆ : ESIC ಕರ್ನಾಟಕ ಅಧಿಸೂಚನೆಯ ನಿಯಮಾನುಸಾರ ಲಭ್ಯವಿದೆ.
ಆಯ್ಕೆ ವಿಧಾನ :
1. ಅಭ್ಯರ್ಥಿಗಳ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ,
2. ಆಯ್ಕೆಯಾದ ಅಭ್ಯರ್ಥಿಗಳು ಇಮೇಲ್ ಮೂಲಕ ತಾತ್ಕಾಲಿಕ ನೇಮಕಾತಿಯ ಪ್ರಸ್ತಾಪವನ್ನು ಸ್ವೀಕರಿಸಿದ ತಕ್ಷಣ ವೈದ್ಯಕೀಯ ಪರೀಕ್ಷೆ ಮತ್ತು ಮೂಲ ಪ್ರಮಾಣಪತ್ರಗಳ ಪರಿಶೀಲನೆಗಾಗಿ ಈ ಕಚೇರಿಗೆ ವರದಿ ಮಾಡಬೇಕಾಗುತ್ತದೆ.
3. ಅಂತಿಮ ಆಯ್ಕೆಯು ವೈಯಕ್ತಿಕ ಸಂದರ್ಶನದಲ್ಲಿ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ. ನೇಮಕಾತಿಯ ಪ್ರಸ್ತಾಪವು ಸೇರ್ಪಡೆಯ ಸಮಯದಲ್ಲಿ ಮೂಲ ಪ್ರಮಾಣಪತ್ರಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ.
ಸಂದರ್ಶನದ ದಿನಾಂಕ ಮತ್ತು ಸ್ಥಳ :
ದಾಖಲೆ ಪರಿಶೀಲನೆ ಮತ್ತು ನೋಂದಣಿ ದಿನಾಂಕ : 15-ಜುಲೈ-2025
ಸಂದರ್ಶನ ದಿನಾಂಕ : 16-ಜುಲೈ-2025, ಬೆಳಿಗ್ಗೆ 10:30 ಗಂಟೆಗೆ
ಸ್ಥಳ :
ESIC ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ, ಕಲಬುರ್ಗಿ, ಕರ್ನಾಟಕ
🔍 ಅಗತ್ಯ ದಾಖಲೆಗಳು :
* ವಿದ್ಯಾರ್ಹತೆ ಪ್ರಮಾಣಪತ್ರಗಳು
* ಅನುಭವ ದಾಖಲೆಗಳು
* ಗುರುತಿನ ಚೀಟಿ
* ಪಾಸ್ಪೋರ್ಟ್ ಗಾತ್ರದ ಫೋಟೋ
* ಯಾವುದೇ ಇತರ ಅಧಿಕೃತ ದಾಖಲೆಗಳು (ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ)
🗓️ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆ ದಿನಾಂಕ : 07-ಜುಲೈ-2025
ದಾಖಲೆ ಪರಿಶೀಲನೆ : 15-ಜುಲೈ-2025
Walk-In Interview : 16-ಜುಲೈ-2025
💻 ಅರ್ಜಿದಾರರಿಗೆ ಸೂಚನೆಗಳು :
- ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಲ್ಲಿ ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.
- ಮೂಲ ದಾಖಲಾತಿಗಳು ಮತ್ತು ಪ್ರತಿ ಪ್ರತಿಗಳನ್ನುೊಂದಿಗೆ ಇತರ ಅಗತ್ಯ ದಾಖಲೆಗಳನ್ನು ಕೊಂಡೊಯ್ಯಬೇಕು.
- ಅರ್ಜಿ ಶುಲ್ಕವನ್ನು ನಗದು ಅಥವಾ ಡಿಡಿ ಮೂಲಕ ಸ್ಥಳದಲ್ಲಿ ಪಾವತಿಸಬೇಕು (ಅಗತ್ಯವಿದ್ದಲ್ಲಿ).
- ಇದು ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತರಾಗಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಎಲ್ಲ ಅಗತ್ಯ ದಾಖಲೆಗಳನ್ನು ತಯಾರಿಸಿ ಸಂದರ್ಶನಕ್ಕೆ ಸಮಯಕ್ಕೆ ಹಾಜರಾಗಬೇಕು.
Comments