Loading..!

EPFO ನೇಮಕಾತಿ 2025: 111 ಜೂನಿಯರ್ ಎಂಜಿನಿಯರ್, ಆಡಿಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:21 ಜುಲೈ 2025
not found

ಕೆಲಸ ಹುಡುಕುತ್ತಿರುವ ಎಂಜಿನಿಯರ್‌ಗಳು ಮತ್ತು ಆಡಿಟರ್‌ಗಳಿಗೆ ಒಂದು ಸುದ್ದಿ. ನಿಮ್ಮ ಭವಿಷ್ಯದ ಕೆಲಸಕ್ಕಾಗಿ ಕಾಯುತ್ತಿದ್ದೀರಾ? EPFO ನೇಮಕಾತಿ 2025 ಈಗ ಲೈವ್ ಆಗಿದೆ! ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮುಗಿಯಲಿದೆ. ಯಾವುದೇ ಪದವಿಯನ್ನು ಪಾಸಾದ ಅಭ್ಯಥಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶ!


ಭಾರತದ ಉದ್ಯೋಗ ಭದ್ರತಾ ಪ್ರಮುಖ ಸಂಸ್ಥೆ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಜೆಷನ್ (EPFO) ತನ್ನ 2025 ನೇ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಭಾರತದಾದ್ಯಂತ ಒಟ್ಟು 111 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಇದು ಕೇವಲ ಉದ್ಯೋಗವಲ್ಲ, ನಿಮ್ಮ ಭವಿಷ್ಯದ ಭದ್ರತೆಗೆ ಅಡಿಪಾಯ. 


ಈ ಮೂಲಕ ಸಂಸ್ಥೆಯು ಜೂನಿಯರ್ ಎಂಜಿನಿಯರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್), ಅಸಿಸ್ಟಂಟ್ ಆಡಿಟ್ ಆಫಿಸರ್ (AAO), ಮತ್ತು ಆಡಿಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ  ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 17ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿನ ಉದ್ಯೋಗದಲ್ಲಿ ಉತ್ತಮ ವೇತನ, ಆಕರ್ಷಕ ಭತ್ಯೆಗಳು, ಮತ್ತು ಜೀವನಪರ್ಯಂತ ಭದ್ರತೆ. ಈ ನೇಮಕಾತಿ ನಿಮಗಾಗಿಯೇ ಕಾಯುತ್ತಿದೆ. ಆದರೆ ಯಶಸ್ಸು ಸಿಗಲು ನೀವು ಏನು ಮಾಡಬೇಕು? ಅರ್ಹತೆಗಳೇನು? ಪರೀಕ್ಷೆಗೆ ಹೇಗೆ ತಯಾರಾಗಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಬ್ಲಾಗ್ ಪೋಸ್ಟ್ ನಲ್ಲಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ! ಇದು ಪದವಿ ಪಾಸಾದ ಅಭ್ಯರ್ಥಿಗಳಿಗೆ ಒಂದು ಅತ್ಯುತ್ತಮ ಉದ್ಯೋಗಾವಕಾಶವಾಗಿದೆ.


📌ಹುದ್ದೆಗಳ ವಿವರ :
ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್)  : 01  
ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್) : 16 
ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಲೆಕ್ಟ್ರಿಕಲ್) : 02  
ಜೂನಿಯರ್ ಎಂಜಿನಿಯರ್ (ಸಿವಿಲ್)   : 33   
ಅಸಿಸ್ಟಂಟ್ ಆಡಿಟ್ ಆಫಿಸರ್ (AAO)  : 14  
ಆಡಿಟರ್  : 45 


🎓 ವಿದ್ಯಾರ್ಹತೆ :
ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್)  : B.E ಅಥವಾ B.Tech 
ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್) : B.E ಅಥವಾ B.Tech 
ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಲೆಕ್ಟ್ರಿಕಲ್) : B.E ಅಥವಾ B.Tech  
ಜೂನಿಯರ್ ಎಂಜಿನಿಯರ್ (ಸಿವಿಲ್)   : ಡಿಪ್ಲೊಮಾ   
ಅಸಿಸ್ಟಂಟ್ ಆಡಿಟ್ ಆಫಿಸರ್ (AAO)  : EPFO ನ ನಿಯಮಾನುಸಾರ 
ಆಡಿಟರ್  : EPFO ನ ನಿಯಮಾನುಸಾರ 


💰ವೇತನ ಶ್ರೇಣಿ :
ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್)  : ₹67,700 - ₹2,08,700    
ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಸಿವಿಲ್) : ₹56,100 - ₹1,77,500    
ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಲೆಕ್ಟ್ರಿಕಲ್) :  ₹56,100 - ₹1,77,500    
ಜೂನಿಯರ್ ಎಂಜಿನಿಯರ್ (ಸಿವಿಲ್)   : ₹35,400 - ₹1,12,400    
ಅಸಿಸ್ಟಂಟ್ ಆಡಿಟ್ ಆಫಿಸರ್ (AAO)  : ₹44,900 - ₹1,42,400    
ಆಡಿಟರ್  : ₹35,400 - ₹1,12,400    


🎂 ವಯೋಮಿತಿ :
* ಗರಿಷ್ಠ ವಯಸ್ಸು: 56 ವರ್ಷ
* ವಯೋಮಿತಿಯಲ್ಲಿ ರಿಯಾಯಿತಿ: EPFO ನ ನಿಯಮಾನುಸಾರ ಲಭ್ಯವಿದೆ.


💼 ಆಯ್ಕೆ ವಿಧಾನ :
1. ಅರ್ಜಿ ಶಾರ್ಟ್‌ಲಿಸ್ಟ್ ಮಾಡುವುದು
2. ಲಿಖಿತ ಪರೀಕ್ಷೆ
3. ವೈಯಕ್ತಿಕ ಸಂದರ್ಶನ


🔹ಅರ್ಜಿ ಸಲ್ಲಿಕೆ ವಿಧಾನ :
ಅಭ್ಯರ್ಥಿಗಳಿಗೆ ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಅರ್ಜಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸರಿಯಾದ ಮಾದರಿಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:


ವಿಳಾಸ :
ಶ್ರೀ ದೀಪಕ್ ಆರ್ಯ,
ಪ್ರಾದೇಶಿಕ ಪ್ರಾವಿಡೆಂಟ್ ಫಂಡ್ ಕಮಿಷನರ್-II,
ಭರ್ತಿ ವಿಭಾಗ,
ಪ್ಲೇಟ್ A, ನೆಲಮಹಡಿ, ಬ್ಲಾಕ್ II,
ಈಸ್ಟ್ ಕಿದ್ವಾಯಿ ನಗರ,
ನವದೆಹಲಿ - 110023


ಅರ್ಜಿ ಸಲ್ಲಿಸಲು Speed Post / Registered Post ಅಥವಾ ಯಾವುದೇ ಸುರಕ್ಷಿತ ಸೇವೆಯನ್ನು ಉಪಯೋಗಿಸಬಹುದು.


📝 ಅರ್ಜಿ ಸಲ್ಲಿಕೆಗೆ ಅಗತ್ಯವಾದ ಹಂತಗಳು :
1. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
2. ಇಮೇಲ್ ID, ಮೊಬೈಲ್ ನಂಬರ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
3. ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ ಮತ್ತು ಸರಿಯಾಗಿ ಭರ್ತಿ ಮಾಡಿ
4. ಎಲ್ಲಾ ದಾಖಲೆಗಳನ್ನು ಸ್ವಯಂ-ದಾಖಲಿಸಿದ ಪ್ರತಿಗಳೊಂದಿಗೆ ಲಗತ್ತಿಸಿ
5. ಅರ್ಜಿಯನ್ನು ನಿಗದಿತ ವಿಳಾಸಕ್ಕೆ ಕಳುಹಿಸಿ


📅ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 18 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17 ಸೆಪ್ಟೆಂಬರ್ 2025


- ಸರ್ಕಾರಿ ಉದ್ಯೋಗಕ್ಕಾಗಿ ಸುತ್ತುತ್ತಿರುವವರಿಗೆ ಇದು ಚುಕ್ಕಾಣಿ ಹಿಡಿಯುವ ಅವಕಾಶ! EPFOಯಂತಹ ರಾಷ್ಟ್ರಮಟ್ಟದ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆಯಲು ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ.

Comments