Loading..!

ಕೇಂದ್ರ ಸರ್ಕಾರದ DRDO ಸಂಸ್ಥೆಯಲ್ಲಿ SSLC ಪೊರೈಸಿದವರಿಗಾಗಿ ವಿವಿಧ ಹುದ್ದೆಗಳ ನೇಮಕಾತಿ ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ
| Date:2 ಜೂನ್ 2019
not found
ಭಾರತದ ರಕ್ಷಣಾ ಸಚಿವಾಲಯಕ್ಕೆ ಸೇರಿದ 'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ'ಯು (ಡಿಆರ್‌ಡಿಒ) ಸೆಂಟರ್‌ ಫಾರ್‌ ಪರ್ಸೊನೆಲ್‌ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ (ಸಿಇಪಿಟಿಎಎಂ) ಮೂಲಕ ಟೆಕ್ನಿಕಲ್‌ ಕೇಡರ್‌ನಲ್ಲಿ (ಡಿಆರ್‌ಟಿಸಿ) ಟೆಕ್ನಿಷಿಯನ್‌ 'ಎ' ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆಸಕ್ತರು ನಾಳೆಯಿಂದ (ಜೂನ್‌ 3 ರಿಂದ 26 ರವರೆಗೆ) ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ :
* ಆಟೋಮೊಬೈಲ್‌-3,
* ಬುಕ್‌ ಬೈಂಡರ್‌-11,
* ಕಾರ್ಪೆಂಟರ್‌-4,
* ಕಂಪ್ಯೂಟರ್‌ ಆಪರೇಟರ್‌ ಮತ್ತು ಪ್ರೋಗ್ರಾಮಿಂಗ್‌ ಅಸಿಸ್ಟೆಂಟ್‌-55,
* ಡ್ರಾಟ್ಸ್‌ಮೆನ್‌(ಮೆಕ್ಯಾನಿಕಲ್‌)-20,
* ಡಿಟಿಪಿ ಆಪರೇಟರ್‌-2,
* ಎಲೆಕ್ಟ್ರಿಷಿಯನ್‌-49,
* ಎಲೆಕ್ಟ್ರಾನಿಕ್ಸ್‌-37,
* ಫಿಟ್ಟರ್‌-59,
* ಮೆಷಿನಿಸ್ಟ್‌-44,
* ಮೆಕ್ಯಾನಿಕ್‌ (ಡೀಸೆಲ್‌)-7,
* ಮೆಡಿಕಲ್‌ ಲ್ಯಾಬ್‌ ಟೆಕ್ನಾಲಜಿ-4,
* ಮೋಟಾರ್‌ ಮೆಕ್ಯಾನಿಕ್‌-2,
* ಪೇಂಟರ್‌-2,
* ಫೋಟೊಗ್ರಾಫರ್‌-7,
* ಶೀಟ್‌ ಮೆಟಲ್‌ ವರ್ಕರ್‌-7,
* ಟರ್ನರ್‌-24 ಮತ್ತು ವೆಲ್ಡರ್‌-14 ಸೇರಿದಂತೆ ಒಟ್ಟು 351 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


* ಸಹಾಯವಾಣಿ: 011- 23882323, 23819217
No. of posts:  351
Application Start Date:  3 ಜೂನ್ 2019
Application End Date:  26 ಜೂನ್ 2019
Selection Procedure: * ಮೊದಲಿಗೆ ಟೈಯರ್‌-1 ಕಂಪ್ಯೂಟರ್‌ ಆಧರಿತ ಪರೀಕ್ಷೆ ಮತ್ತು ಟೈಯರ್‌-2 ಟ್ರೇಡ್‌ ಟೆಸ್ಟ್‌ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
* ಟೈಯರ್‌-1 ಪರೀಕ್ಷೆಯು ವಸ್ತುನಿಷ್ಠ ಬಹುಆಯ್ಕೆ ಮಾದರಿಯಲ್ಲಿರುತ್ತದೆ. ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ.
* ಟೈಯರ್‌-2 ಪರೀಕ್ಷೆಯ ಹಂತದಲ್ಲಿಯೇ ದಾಖಲಾತಿ ಪರಿಶೀಲನೆ ನಡೆಯಲಿದೆ. ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ಡಿಆರ್‌ಡಿಒ ತನ್ನ ವೆಬ್‌ನಲ್ಲಿ ಪ್ರಕಟಿಸಲಿದೆ.
* ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಸಿಬಿಟಿ ಪರೀಕ್ಷಾ ಕೇಂದ್ರವಿರಲಿದೆ
Qualification: ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿ, ಹುದ್ದೆಗೆ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ ಮಾಡಿದವರು ಅರ್ಜಿ ಸಲ್ಲಿಸಬಹುದು.
Fee: ಪ್ರತಿಯೊಂದು ಹುದ್ದೆಗೂ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಮಹಿಳೆ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಇಎಸ್‌ಎಂ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ನೀಡಲಾಗಿದೆ.
ಎಲ್ಲಾದರೂ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಪ್ರತಿಯೊಂದು ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಮತ್ತು ಶುಲ್ಕ ಸಲ್ಲಿಸಬೇಕು.
ಎಲ್ಲಾದರೂ ಅಭ್ಯರ್ಥಿಯು ಎರಡು ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷಾ ದಿನಾಂಕ ಒಂದೇ ದಿನವಿದ್ದರೆ ಅಭ್ಯರ್ಥಿಯು ಸ್ವಯಂಇಚ್ಚೆಯಿಂದ ಯಾವುದಾದರೂ ಒಂದು ಹುದ್ದೆಯ ಪರೀಕ್ಷೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.
Age Limit: ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ/ಒಬಿಸಿ/ಪಿಡಬ್ಲ್ಯುಡಿ/ಇಎಸ್‌ಎಂ/ವಿಧವೆ/ವಿಚ್ಛೇದಿತೆ/ಸರಕಾರಿ ಉದ್ಯೋಗಿಗಳಿಗೆ ಸರಕಾರದ ನೀತಿನಿಯಮಗಳನ್ವಯ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
Pay Scale: 7ನೇ ವೇತನ ಆಯೋಗದ ಶಿಫಾರಸು ಪ್ರಕಾರ ಕ್ಲಾಸ್‌ 'ಎಕ್ಸ್‌' ನಗರಗಳಲ್ಲಿ ಅಂದಾಜು 28,000 ರೂ. ಮಾಸಿಕ ವೇತನ ನೀಡಲಾಗುತ್ತದೆ.
to download official notification
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments