Loading..!

DRDO ದಲ್ಲಿ ಖಾಲಿ ಇರುವ ಸೈಂಟಿಸ್ಟ್ ಹುದ್ದೆಗೆ ಎಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:24 ಜೂನ್ 2019
not found
ಭಾರತೀಯ ಸೇನೆಗೆ ಮಹತ್ತರ ಕೊಡುಗೆ ನೀಡುತ್ತಿರುವ 'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ'ಯಲ್ಲಿ (DRDO) ಸೈಂಟಿಸ್ಟ್ ಆಗಬೇಕೆಂಬ ಕನಸು ನಿಮ್ಮದಾಗಿದ್ದರೆ ಇದೀಗ ಅವಕಾಶ ಒದಗಿ ಬಂದಿದೆ. ರಕ್ಷಣಾ ಇಲಾಖೆಗೆ ಸೇರಿದ ಈ ಸಂಸ್ಥೆ ಸೈಂಟಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಒಟ್ಟು 40 (ಸೈಂಟಿಸ್ಟ್ - ಎಫ್,ಡಿ/ಇ,ಸಿ ) ಹುದ್ದೆಗಳಿಗೆ ನೇಮಕ ನಡೆಯಲಿದೆ. ಆಸಕ್ತರು ಜುಲೈ ಮೊದಲ ವಾರದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
* ಮೆಕ್ಯಾನಿಕಲ್, ಪ್ರೋಡಕ್ಷನ್, ಪ್ರೊಡಕ್ಷನ್ ಅಂಡ್ ಇಂಡಸ್ಟ್ರಿಯಲ್,ಏರೋನಾಟಿಕಲ್,ಏರೋಸ್ಪೇಸ್ ಎಂಜಿನಿಯರಿಂಗ್, ಎಲೆಕ್ರ್ಟಾನಿಕ್ಸ್ ಅಂಡ್ ಕಮ್ಯುನಿಕೇಷನ್, ಎಲೆಕ್ರ್ಟಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಶನ್, ಎಲೆಕ್ರ್ಟಾನಿಕ್ಸ್,ಕಂಪ್ಯೂಟರ್ ಸೈನ್ಸ್,ಕಂಪ್ಯೂಟರ್ ಹಾರ್ಡ್ ವೆರ್, ಕಂಪ್ಯೂಟರ್ ಸೈನ್ಸ್ ಆಂಡ್ ಆಟೋಮೇಷನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ನೇಮಕ ನಡೆಯಲಿದೆ.ಅರ್ಹ ಅಭ್ಯರ್ಥಿಗಳಿಂದ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಸೂಚನೆ :ಸೈಂಟಿಸ್ಟ್ - ಎಫ್ ಹುದ್ದೆಗೆ 13 ವರ್ಷ,ಸೈಂಟಿಸ್ಟ್ - ಇ ಹುದ್ದೆಗೆ 10 ವರ್ಷ,ಸೈಂಟಿಸ್ಟ್ - ಡಿ ಹುದ್ದೆಗೆ 7 ವರ್ಷ ಮತ್ತು ಸೈಂಟಿಸ್ಟ್ - ಸಿ ಹುದ್ದೆಗೆ 3 ವರ್ಷಗಳ ಸೇವಾನುಭವ ಕಡ್ಡಾಯ.
No. of posts:  40
Application Start Date:  22 ಜೂನ್ 2019
Application End Date:  6 ಜುಲೈ 2019
Qualification: ಅಭ್ಯರ್ಥಿಯು ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಸ್ನಾತಕೋತ್ತರ ಪದವಿ, ಡಾಕ್ಟ್ ರೇಟ್ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.
Fee: ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಉಳಿದಂತೆ ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100/- ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನಲೈನ್ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ.
Age Limit: ಸೈಂಟಿಸ್ಟ್- ಸಿ ಹುದ್ದೆಗೆ 35ವರ್ಷ, ಸೈಂಟಿಸ್ಟ್ ಡಿ/ಇ ಹುದ್ದೆಗೆ 45 ವರ್ಷ ಹಾಗೂ ಸೈಂಟಿಸ್ಟ್-ಎಫ್ ಹುದ್ದೆಗೆ ಗರಿಷ್ಠ ವಯೋಮಿತಿ 55 ವರ್ಷ ನಿಗದಿಪಡಿಸಲಾಗಿದೆ.ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments