Loading..!

DRDO DIBT ನೇಮಕಾತಿ 2025 – ರಿಸರ್ಚ್ ಫೆಲೋ, ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:2 ಸೆಪ್ಟೆಂಬರ್ 2025
not found

                        ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇದರ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಬಯೋ-ಡಿಫೆನ್ಸ್ ಟೆಕ್ನಾಲಜೀಸ್(DIBT) 43 ಸಂಶೋಧನಾ ಸಹೋದ್ಯೋಗಿ, ಸಂಶೋಧನಾ ಸಹಾಯಕ ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳು ಡಿಆರ್‌ಡಿಓ ಅಡಿಯಲ್ಲಿ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಬಯೋ-ಡಿಫೆನ್ಸ್ ಟೆಕ್ನಾಲಜೀಸ್(DIBT) ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವ ತಜ್ಞರಿಗೆ ಅನನ್ಯ ಅವಕಾಶವನ್ನು ನೀಡುತ್ತವೆ.


                  ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಇಂಟರ್ನ್‌ಶಿಪ್ ಹುದ್ದೆಗಳಿಗೆ DRDO DIBT ನ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್ ವಿಧಾನದಲ್ಲಿ, ಅಂದರೆ ಅಂಚೆ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-09-2025 ಆಗಿರುತ್ತದೆ. ಈ ದಿನಾಂಕದ ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


                ಅರ್ಹ ಮತ್ತು ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು, DRDO DIBT ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನಕ್ಕೆ ಬಲವಾದ ಚಾಲನೆ ನೀಡಬಹುದು. ಇದು ಭವಿಷ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇದಿಕೆಯಾಗಲಿದೆ.


📌ಹುದ್ದೆಯ ವಿವರಗಳು :
ಸಂಶೋಧನಾ ಸಹೋದ್ಯೋಗಿ : 32
ಸಂಶೋಧನಾ ಸಹಾಯಕ : 1
ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) : 10


🎓 ಶೈಕ್ಷಣಿಕ ಅರ್ಹತೆ:  ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಸಂಶೋಧನಾ ಸಹೋದ್ಯೋಗಿ : DRDO DIBT ಮಾನದಂಡಗಳ ಪ್ರಕಾರ
ಸಂಶೋಧನಾ ಸಹಾಯಕ : ಎಂ.ಟೆಕ್, ಪಿಎಚ್‌ಡಿ
ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) : ಪದವಿ , ಸ್ನಾತಕೋತ್ತರ ಪದವಿ, ಎಂ.ಟೆಕ್


💼 ಆಯ್ಕೆ ಪ್ರಕ್ರಿಯೆ : 
                ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ವಿದ್ಯಾರ್ಥಿ ಜೀವನದಲ್ಲಿ ಹೊಂದಿರುವ ಸಾಧನೆಗಳ ಆಧಾರದ ಮೇಲೆ ಪ್ರಾಥಮಿಕವಾಗಿ ಮೆರಿಟ್ ಪಟ್ಟಿಯನ್ನು (Merit List) ತಯಾರಿಸಲಾಗುತ್ತದೆ. ಈ ಮೆರಿಟ್ ಪಟ್ಟಿಯು ಅಭ್ಯರ್ಥಿಗಳ ಅಂಕಪಟ್ಟಿ, ಶೈಕ್ಷಣಿಕ ಸಾಧನೆ ಮತ್ತು ಅಗತ್ಯವಿರುವ ತಾಂತ್ರಿಕ/ತಜ್ಞ ಪರಿಣಿತಿಗಳ ಆಧಾರಿತವಾಗಿರುತ್ತದೆ.


                      ಮೆರಿಟ್ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅರ್ಹ ಅಭ್ಯರ್ಥಿಗಳನ್ನು ಮುಂದೆ ಸಂದರ್ಶನಕ್ಕೆ (Interview) ಕರೆಯಲಾಗುತ್ತದೆ. ಈ ಸಂದರ್ಶನದ ಮೂಲಕ ಅಭ್ಯರ್ಥಿಯ ವೈಯಕ್ತಿಕ ಸಾಮರ್ಥ್ಯ, ಸಂವಹನ ಕೌಶಲ್ಯ, ವಿಷಯ ಪಟುತೆ, ಹಾಗೂ ಹುದ್ದೆಗೆ ಹೊಂದಿಕೊಳ್ಳುವತೆ ಮೊದಲಾದ ಅಂಶಗಳನ್ನು ಪರಿಗಣಿಸಿ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.


                       ಹೀಗೆ, ಶೈಕ್ಷಣಿಕ ಅರ್ಹತೆ + ಮೆರಿಟ್ ಪಟ್ಟಿಯಲ್ಲಿ ಸ್ಥಾನ + ಸಂದರ್ಶನದಲ್ಲಿ ತೋರಿಸಿದ ಸಾಮರ್ಥ್ಯ — ಇವೆಲ್ಲದರ ಆಧಾರದಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.  


💰 ಮಾಸಿಕ ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಸಂಶೋಧನಾ ಸಹೋದ್ಯೋಗಿ : DRDO DIBT ಮಾನದಂಡಗಳ ಪ್ರಕಾರ
ಸಂಶೋಧನಾ ಸಹಾಯಕ : ರೂ.67000/-
ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) : ರೂ.37000/- 


💻 ಅರ್ಜಿ ಸಲ್ಲಿಸುವ ವಿಧಾನ :
- ಮೊದಲನೆಯದಾಗಿ DRDO DIBT ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. 
- ಆಫ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- DRDO DIBT ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳನ್ನು ಲಗ್ಗತಿಸಿ.  
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- DRDO DIBT ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಂಚೆ ಕಛೇರಿಯ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿರುತ್ತದೆ.    


💻 ಅರ್ಜಿ ಸಲ್ಲಿಸುವ ವಿಳಾಸ : ಕೇಂದ್ರ ಮುಖ್ಯಸ್ಥರು, DIBT, ಸಿದ್ಧಾರ್ಥನಗರ, ಮೈಸೂರು-570011.

Comments