ಧಾರವಾಡ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಧಾರವಾಡ ಜಿಲ್ಲಾದ ಆಯುಷ್ ಅಧಿಕಾರಿಗಳ ಕಾರ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಅಭ್ಯರ್ಥಿಗಳು ದಿನಾಂಕ : 09-11-2021 ರ ಸಾಯಂಕಾಲ 05:30ರೊಳಗಾಗಿ ಕಚೇರಿ ಸಮಯಗಳಲ್ಲಿ ನಿಗದಿತ ನಮೂನೆಯಲ್ಲಿ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಈ ಕಚೇರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಜಿಲ್ಲಾ ಆಯುಷ್ ಕಚೇರಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆವರಣ ಕಿಲ್ಲಾ ರಸ್ತೆ ಧಾರವಾಡ ಇಲ್ಲಿ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಕಚೇರಿ ಕೆಲಸದ ಸಮಯದಲ್ಲಿ ಪಡೆಯಬಹುದು.
ಸೂಚನೆ : 2019-20 ರಲ್ಲಿ ಹೊರಡಿಸಿದ ಅಧಿಸೂಚನೆಯನ್ನು ಕೋವಿಡ್-19 ಕಾರಣದಿಂದ ರದ್ದುಗೊಳಿಸಲಾಗಿದ್ದು, ಅದರನ್ವಯ ಈಗಾಗಲೇ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಪಡೆದು ಸಲ್ಲಿಸಬೇಕು.
1. ಮೆರಿಟ್, ರೋಸ್ಟರ್, ಅನುಭವ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ತಜ್ಞ ವೈದ್ಯರು (ಪ್ರಕೃತಿ ಚಿಕಿತ್ಸೆ ಮತ್ತು ಯೋಗ)- MD in Naturopathy and Yoga (if Post Graduates are not available in Naturopathy and Yoga ; BNYS degree may be considerable with 3 years of experience, without PG allowance)
ಫಾರ್ಮಾಸಿಸ್ಟ್ - ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಮತ್ತು ಔಷಧಿ ವಿಜ್ಞಾನದಲ್ಲಿ ಡಿಪ್ಲೊಮಾ
ಮಸಾಜಿಸ್ಟ್ - ಕನಿಷ್ಠ 7 ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಗಳಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.
ಕ್ಷಾರಸೂತ್ರ ಅಟೆಂಡರ್ - ಕನಿಷ್ಠ 10 ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.
ಸ್ತ್ರೀರೋಗ ಅಟೆಂಡರ್ - ಕನಿಷ್ಠ 10 ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.
ಮಲ್ಟಿಪರ್ಪಸ್ ವರ್ಕರ್- ಕನಿಷ್ಠ10 ತರಗತಿ ವಿದ್ಯಾರ್ಹತೆ ಹೊಂದಿರತಕ್ಕದ್ದು.
35 ವರ್ಷದೊಳಗಿನ ಸಾಮಾನ್ಯ ಅಭ್ಯರ್ಥಿಗಳು ಮತ್ತು 38 ವರ್ಷದೊಳಗಿನ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ತಜ್ಞ ವೈದ್ಯರು (ಪ್ರಕೃತಿ ಚಿಕಿತ್ಸೆ ಮತ್ತು ಯೋಗ)- 35,000/- + 5,000 PG Allowance
ಫಾರ್ಮಾಸಿಸ್ಟ್ - 15,821/-
ಮಸಾಜಿಸ್ಟ್ - 11,356/-
ಕ್ಷಾರಸೂತ್ರ ಅಟೆಂಡರ್ - 11,356/-
ಸ್ತ್ರೀರೋಗ ಅಟೆಂಡರ್ - 11,356/-
ಮಲ್ಟಿಪರ್ಪಸ್ ವರ್ಕರ್- 10,300/-
ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments