Loading..!

🏥 ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ – ಈ ಅವಕಾಶ ತಪ್ಪಿಸಿಕೊಳ್ಳಬೇಡಿ!
Tags: Degree
Published by: Yallamma G | Date:1 ಡಿಸೆಂಬರ್ 2025
not found

               🏥 ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಉತ್ತರ ಕನ್ನಡ ಜಿಲ್ಲಾಯ ಕಾರವಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 33 ತಜ್ಞ ವೈದ್ಯರು, ಮುಖ್ಯ ವೈದ್ಯಾಧಿಕಾರಿ, ಪ್ರಯೋಗ ಶಾಲಾ ತಂತ್ರಜ್ಞರು, ಜಿಲ್ಲಾ ಸಲಹೆಗಾರರು, ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಮತ್ತು ಜಿಸಿ ವೈದ್ಯಕೀಯ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರ ಅನುಭವ ಮತ್ತು ಸ್ಥಿರ ಉದ್ಯೋಗ ದೊರಕಿಸಿಕೊಳ್ಳಲು ಅವಕಾಶ ನೀಡುತ್ತದೆ.


                         🩺ಆಸಕ್ತರು ಇಂದೇ ನಿಮ್ಮ ಅರ್ಜಿಯನ್ನು ಸಿದ್ಧಪಡಿಸಿ, ಅಗತ್ಯ ದಾಖಲೆಗಳೊಂದಿಗೆ ಸಮಯಮಿತಿಯೊಳಗೆ ಸಲ್ಲಿಸಿ. ಆರೋಗ್ಯ ಸೇವೆಯಲ್ಲಿ ಮುಂದಿನ ಹೆಜ್ಜೆ ಇಡಲು ಮತ್ತು ಸಮುದಾಯದ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡಲು ಇದು ಉತ್ತಮ ಅವಕಾಶವಾಗಿದೆ. ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ!


                            ಈ ಲೇಖನದಲ್ಲಿ ನಾವು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಕೊನೆಯ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೂಡಲೇ ಅರ್ಜಿ ಸಲ್ಲಿಸಿ ಈ ಉದ್ಯೋಗಾವಕಾಶವನ್ನು ಬಳಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 15-ಡಿಸೆಂಬರ್-2025 ರೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ. 


📌 DHFWS ಉತ್ತರ ಕನ್ನಡ, ಕಾರವಾರ ಹುದ್ದೆಯ ಅಧಿಸೂಚನೆ

Application End Date:  15 ಡಿಸೆಂಬರ್ 2025
Selection Procedure:

🏛️ ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉತ್ತರ ಕನ್ನಡ
🧾 ಹುದ್ದೆಗಳ ಸಂಖ್ಯೆ: 33
📍 ಉದ್ಯೋಗ ಸ್ಥಳ: ಉತ್ತರ ಕನ್ನಡ - ಕರ್ನಾಟಕ
🔹 ಪೋಸ್ಟ್ ಹೆಸರು: ವೈದ್ಯಕೀಯ ಅಧಿಕಾರಿ, ತಜ್ಞ ವೈದ್ಯರು
💰 ವೇತನ: WCD ಉತ್ತರ ಕನ್ನಡ ನಿಯಮಗಳ ಪ್ರಕಾರ


🎓 ಅರ್ಹತೆ :  ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು DHFWS ಉತ್ತರ ಕನ್ನಡ ಮಾನದಂಡಗಳ ಪ್ರಕಾರ MBBS, MD, DNB, BDS, ಡಿಪ್ಲೋಮ, ನರ್ಸಿಂಗ್ ವಿದ್ಯಾರ್ಹತೆಯನ್ನು ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ.


⏳ ವಯಸ್ಸಿನ ಮಿತಿ: 
ಸಾಮಾನ್ಯ ಅಭ್ಯರ್ಥಿಗಳಿಗೆ : 38 ವರ್ಷ 
OBC ಅಭ್ಯರ್ಥಿಗಳಿಗೆ : 41 ವರ್ಷ 
ST/SC ಅಭ್ಯರ್ಥಿಗಳಿಗೆ : 43 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.  


💰 ವೇತನ:ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿ ನಿಯಮಾನುಸಾರ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. 


💼ಆಯ್ಕೆ ಪ್ರಕ್ರಿಯೆ : 
=> ಮೆರಿಟ್ ಪಟ್ಟಿ 
=> ಸಂದರ್ಶನ
=> ಪ್ರಮಾಣಪತ್ರ ಪರಿಶೀಲನೆ


💼ಅರ್ಜಿ ಸಲ್ಲಿಸುವ ವಿಧಾನ :
                       ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕಚೇರಿ, ಕಾರವಾರ, ಉತ್ತರ ಕನ್ನಡಕ್ಕೆ 15-ಡಿಸೆಂಬರ್-2025 ರಂದು ಅಥವಾ ಅದಕ್ಕೂ ಮೊದಲು ಕಳುಹಿಸಬೇಕು 


📥 ಅರ್ಜಿ ಸಲ್ಲಿಸುವುದು ಹೇಗೆ :
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ


📅 ಪ್ರಮುಖ ದಿನಾಂಕಗಳು : 
ಅರ್ಜಿಗಳನ್ನು ವಿತರಿಸಲು ಪ್ರಾರಂಭಿಸುವ ದಿನಾಂಕ : 29-11-2025 
ಅರ್ಜಿಗಳನ್ನು ಪಡೆಯಲು ಕೊನೆಯ ದಿನಾಂಕ : 15-12-2025
ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 15-12-2025
ಕ್ರಸಂ 01 ರಿಂದ 24 ರವರೆಗಿನ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಖುದ್ದಾಗಿ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ : 17-12-2025


ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ, ಕಛೇರಿ ಕಾರವಾರ.
ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ, ಕಛೇರಿ ಸಭಾಂಗಣ, ಕಾರವಾರ.

ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಉದ್ಯೋಗ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ,
ಉತ್ತರ ಕನ್ನಡ ಸರ್ಕಾರಿ ಉದ್ಯೋಗ,
ಆರೋಗ್ಯ ಇಲಾಖೆ ಹುದ್ದೆಗಳು,
ಸಿರ್ಸಿ ಆರೋಗ್ಯ ಇಲಾಖೆ ನೇಮಕಾತಿ,
ಎಎನ್ಎಮ್ ಉದ್ಯೋಗ ಅವಕಾಶ,
ಸಿರ್ಸಿ ಜಿಲ್ಲಾ ಸರ್ಕಾರಿ ಉದ್ಯೋಗ,
ಆರೋಗ್ಯ ಕಾರ್ಯಕರ್ತ ಹುದ್ದೆ,
ಉತ್ತರ ಕನ್ನಡ ನೇಮಕಾತಿ 2025,
ಸಿರ್ಸಿ ಆರೋಗ್ಯ ಇಲಾಖೆ ಅರ್ಜಿ

Comments