Loading..!

🏥 ಉಡುಪಿ ಜಿಲ್ಲೆಯ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಆರೋಗ್ಯ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ, ಪೂರ್ಣ ಮಾಹಿತಿ ಇಲ್ಲಿದೆ.
Tags: Degree
Published by: Yallamma G | Date:3 ಜನವರಿ 2026
not found

ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯ ಭರ್ಜರಿ ನೇಮಕಾತಿ 2026: ಕೂಡಲೇ ಅರ್ಜಿ ಹಾಕಿ!


         ಉಡುಪಿ ಜಿಲ್ಲೆಯ ನಿರುದ್ಯೋಗಿಗಳಿಗೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (NHM) ಮತ್ತು ನಮ್ಮ ಕ್ಲಿನಿಕ್‌ಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.


ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 'ನಮ್ಮ ಕ್ಲಿನಿಕ್'ಗಳಲ್ಲಿ ಖಾಲಿ ಇರುವ 19 ವಿವಿಧ ಹುದ್ದೆಗಳ ಭರ್ತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮರು ಅಧಿಸೂಚನೆ ಹೊರಡಿಸಿದೆ.


ವಿಶೇಷವಾಗಿ, ಈ ಹಿಂದೆ ಪರಿಶಿಷ್ಟ ಜಾತಿಗಳ (SC) ಒಳ ಮೀಸಲಾತಿ ವರ್ಗೀಕರಣದ ಕಾರಣದಿಂದ ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಇದೀಗ ಪರಿಷ್ಕೃತ ರೋಸ್ಟರ್‌ಗಳ ಅನ್ವಯ ಪುನರಾರಂಭಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಶುಶ್ರೂಷಕರು ಲ್ಯಾಬ್ ಟೆಕ್ನಿಷಿಯನ್, ಪ್ರಯೋಗ ಶಾಲಾ ತಂತ್ರಜ್ಞರು ಮತ್ತು ಕಿರಿಯ ಆರೋಗ್ಯ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದ್ದು, ವಿವಿಧ ಪರಿಣಿತ ಹುದ್ದೆಗಳನ್ನು ಒಳಗೊಂಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಜನವರಿ 2026.    


📌 ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2025

ಒಟ್ಟು ಹುದ್ದೆ : 19
ನೇಮಕಾತಿ ಪ್ರಕಾರ : ಗುತ್ತಿಗೆ (Contract Basis)
ಉದ್ಯೋಗ ಸ್ಥಳ:  ಉಡುಪಿ – ಕರ್ನಾಟಕ
ಅಧಿಕೃತ ವೆಬ್‌ಸೈಟ್ : udupi.nic.in
ಅರ್ಜಿ ಸಲ್ಲಿಸುವ ಬಗೆ:  ಆಫ್ಲೈನ್ 


📌 ಹುದ್ದೆಗಳ ವಿವರ : 19
ಹೃದಯ ರೋಗ ತಜ್ಞ (Cardiologist) : 01
ಎನ್.ಸಿ.ಡಿ ಫಿಸಿಶಿಯನ್ (NCD Physician) : 01
ಎನ್.ಪಿ.ಪಿ.ಸಿ ಫಿಸಿಶಿಯನ್ : 03
anesthetist : 01
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (Multi Rehabilitation Worker – MRW) : 02
Audiometric Assistant  : 1
Instructor - Young Hearing Impaired Audiometric Assistant : 01
ANM / PHCO : 03
Block Epidemiologist : 01
RMNCH+A Counsellor : 01
ಪ್ರಯೋಗ ಶಾಲಾ ತಂತ್ರಜಾನರು  : 01
Pharmacist : 02
ಕಿರಿಯ ಆರೋಗ್ಯ ಸಹಾಯಕರು (Junior Health Assistant) : 01


🎓ಅರ್ಹತಾ ಮಾನದಂಡ : ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು. 
ಹೃದಯ ರೋಗ ತಜ್ಞ (Cardiologist) : ಎಂ.ಬಿ.ಬಿ.ಎಸ್, ಎಂ.ಡಿ / DNB in Cardiology
ಎನ್.ಸಿ.ಡಿ ಫಿಸಿಶಿಯನ್ (NCD Physician) : ಎಂ.ಬಿ.ಬಿ.ಎಸ್, ಎಂ.ಡಿ
ಕನ್ಸಲ್ಟಂಟ್ ಮೆಡಿಸಿನ್ (Consultant Medicine) : ಎಂ.ಬಿ.ಬಿ.ಎಸ್, ಎಂ.ಡಿ
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (Multi Rehabilitation Worker – MRW) : 10+2 + 1 Year MRW / Multipurpose Rehabilitation Course
Audiometric Assistant / Instructor for Hearing Impaired : Diploma in Hearing, Language & Speech (DHLS)
ANM / PHCO : ANM Course + KNC Registration
ಕಿರಿಯ ಆರೋಗ್ಯ ಸಹಾಯಕರು (Junior Health Assistant) : SSLC/PUC + JHA Training


💼 ಆಯ್ಕೆ ಪ್ರಕ್ರಿಯೆ : ನೇಮಕಾತಿ ಪ್ರಕ್ರಿಯೆ NHM ಮಾರ್ಗಸೂಚಿ ಮತ್ತು ರೋಸ್ಟರ್ ಕಂ ಮೆರಿಟ್ ನಿಯಮಗಳಂತೆ ನಡೆಯುತ್ತದೆ.


💰 ಸಂಬಳದ ವಿವರ :ನೇಮಕಾತಿ ನಿಯಮಾನುಸಾರ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
ಹೃದಯ ರೋಗ ತಜ್ಞ (Cardiologist) : ರೂ. 1,10,000/-
ಎನ್.ಸಿ.ಡಿ ಫಿಸಿಶಿಯನ್ (NCD Physician) :ರೂ. 1,10,000/-
ಎನ್.ಪಿ.ಪಿ.ಸಿ ಫಿಸಿಶಿಯನ್ : ರೂ. 1,10,000/-
anesthetist : ರೂ. 1,10,000/-
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (Multi Rehabilitation Worker – MRW) : ರೂ. 15,000/-
Audiometric Assistant  : ರೂ. 15,000/-
Instructor - Young Hearing Impaired Audiometric Assistant : ರೂ. 15,000/-
ANM / PHCO : ರೂ. 14,044/-
Block Epidemiologist : ರೂ. 30,000/-
RMNCH+A Counsellor : ರೂ. 15,939/-
ಪ್ರಯೋಗ ಶಾಲಾ ತಂತ್ರಜಾನರು  :  ರೂ. 15,000/-
Pharmacist : ರೂ. 15,555/-
ಕಿರಿಯ ಆರೋಗ್ಯ ಸಹಾಯಕರು (Junior Health Assistant) : ರೂ.14,044/-


📝 ಅರ್ಜಿ ಸಲ್ಲಿಸುವ ವಿಧಾನ : 
* ಆಸಕ್ತ ಅಭ್ಯರ್ಥಿಗಳು ಉಡುಪಿ ಜಿಲ್ಲೆಯ ಅಧಿಕೃತ ವೆಬ್‌ಸೈಟ್ udupi.nic.in ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
* ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳು, ಅನುಭವದ ಪತ್ರಗಳು ಮತ್ತು ಜಾತಿ ಪ್ರಮಾಣಪತ್ರಗಳ ನಕಲನ್ನು ಲಗತ್ತಿಸಿ.
* ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕು:
* ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಯೋಜನಾ ನಿರ್ವಹಣಾ ಘಟಕ (NHM), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಅಜ್ಜರಕಾಡು, ಉಡುಪಿ - 576101.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820-2525566 / 2536650.


📅 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 01-01-2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-01-2026 (ಸಂಜೆ 4:00 ಗಂಟೆಯೊಳಗೆ).


🌐 ಪ್ರಮುಖ ಸೂಚನೆಗಳು : ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.


KPSC Vaani ಟಿಪ್ಸ್: ನಿರಂತರ ಸರ್ಕಾರಿ ಉದ್ಯೋಗ ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಮ್ ಚಾನೆಲ್ ಮತ್ತು ವಾಟ್ಸಾಪ್ ಗ್ರೂಪ್ ಸೇರಲು ಮರೆಯಬೇಡಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಿಗೆ ಉದ್ಯೋಗ ಪಡೆಯಲು ಸಹಾಯ ಮಾಡಿ!

Application End Date:  16 ಜನವರಿ 2026
To Download Official Notification

Comments