Loading..!

CTET ಪರೀಕ್ಷೆ 2019ರ ಅಧಿಸೂಚನೆ ಪ್ರಕಟ : ಕೇಂದ್ರ ಸರ್ಕಾರದ, ಕೇಂದ್ರಾಡಳಿತ ಪ್ರದೇಶದ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ಇದು ಅರ್ಹತಾ ಪರೀಕ್ಷೆಯಾಗಿದೆ.
| Date:24 ಆಗಸ್ಟ್ 2019
not found
ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2019ರ ಸಿಟಿಇಟಿ ಪರೀಕ್ಷೆಗೆ ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ. ರಿಜಿಸ್ಟ್ರೇಶನ್ ಪ್ರಕ್ರಿಯೆಯು ಆಗಸ್ಟ್ 19 ರಿಂದ ಸೆಪ್ಟೆಂಬರ್ 18ರ ವರೆಗೆ ನಡೆಯಲಿದ್ದು, ಡಿಸೆಂಬರ್‌ 8,2019ರಂದು 'ಸೆಂಟ್ರಲ್‌ ಟೀಚರ್‌ ಎಲಿಜಿಬಿಲಿಟಿ ಟೆಸ್ಟ್‌' (ಸಿಟಿಇಟಿ) ನಡೆಸಲಾಗುವುದೆಂದು ಮತ್ತು ದೇಶಾದ್ಯಂತ ಒಟ್ಟು 110 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸಿಬಿಎಸ್‌ಇಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಟಿಇಟಿ ಪರೀಕ್ಷೆ ಪ್ರಕ್ರಿಯೆ ಬಗೆಗಿನ ಸಂಪೂರ್ಣ ಮಾಹಿತಿಯಿರುವ ಕೈಪಿಡಿಯನ್ನು ಈ ಕೆಳಗೆ ನೀಡಿರುವ ಲಿಂಕ್ ಒದಗಿಸಲಾಗಿದೆ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಗಮನಿಸಬಹುದು. ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಕೇಂದ್ರ ಸರ್ಕಾರದ (ಕೆವಿಎಸ್‌, ಎನ್‌ವಿಎಸ್‌ ಇತ್ಯಾದಿ), ಕೇಂದ್ರಾಡಳಿತ ಪ್ರದೇಶದ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ಇದು ಅರ್ಹತಾ ಪರೀಕ್ಷೆಯಾಗಿದೆ.

ಈ ಪರೀಕ್ಷೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 1ರಿಂದ 5ನೇ ತರಗತಿಯವರೆಗೆ ಬೋಧಿಸಲಿಚ್ಛಿಸುವವರು ಪ್ರೆಮರಿ ಹಂತದ ಮತ್ತು 6 ರಿಂದ 8ನೇ ತರಗತಿಯವರೆಗೆ ಬೋಧಿಸಲು ಬಯಸುವವರು ಎಲಿಮೆಂಟರಿ ಹಂತದ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮತ್ತು ಇತರೆ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಬಳಸಿ
Application Start Date:  20 ಆಗಸ್ಟ್ 2019
Application End Date:  18 ಸೆಪ್ಟೆಂಬರ್ 2019
Last Date for Payment:  23 ಸೆಪ್ಟೆಂಬರ್ 2019
Qualification: ಅರ್ಹತೆ ಕುರಿತ ಮಾಹಿತಿಗೆ ಅಭ್ಯರ್ಥಿಗಳು ಅಧಿಸೂಚನೆ ಗಮನಿಸಬೇಕು
Fee: ಸಿಬಿಎಸ್ಇ, ಸಿಟಿಇಟಿ 2019ರ ರಿಜಿಸ್ಟ್ರೇಶನ್ ಶುಲ್ಕ ಹೀಗಿದೆ.
ಪೇಪರ್-1 ಅಥವಾ ಪೇಪರ್ -2 ಕ್ಕೆ ಸಾಮಾನ್ಯ ಅಭ್ಯರ್ಥಿಗಳು 700/-ರೂ ಹಾಗೂ ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ರೂ.350/- ಶುಲ್ಕ ಪಾವತಿಸಿಬೇಕು ಅಂತೆಯೇ
ಪೇಪರ್-1 ಮತ್ತು ಪೇಪರ್ -2ಕ್ಕೆ ಸಾಮಾನ್ಯ ಅಭ್ಯರ್ಥಿಗಳು ರೂ.1200/- ಹಾಗೂ ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ರೂ.600/- ಶುಲ್ಕ ಪಾವತಿಸಿಬೇಕು.
ಶುಲ್ಕ ಪಾವತಿಸಲು ಸೆಪ್ಟೆಂಬರ್‌ 23ರ ವರೆಗೆ ಗಡುವು ನೀಡಲಾಗಿದೆ.
Age Limit: ಸಿಟಿಇಟಿ 2019 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು. ಹಾಗೂ ಗರಿಷ್ಠ ವಯಸ್ಸಿನ ಮಿತಿಯಿಲ್ಲ.
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments