Loading..!

ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳ ನೇಮಕ: ಪದವೀಧರರಿಗೆ ಸುವರ್ಣಾವಕಾಶ!
Tags: Degree
Published by: Heena Sheregar | Date:14 ಫೆಬ್ರುವರಿ 2026
not found

ನವದೆಹಲಿ: ದೇಶದ ಸಂಸ್ಕೃತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ Central Sanskrit University (CSU) 2026ನೇ ಸಾಲಿನ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದ ಮೂಲಕ ಭಾರತದಾದ್ಯಂತ ಇರುವ 19 ಆದರ್ಶ ಸಂಸ್ಕೃತ ಮಹಾವಿದ್ಯಾಲಯಗಳು ಹಾಗೂ ಶೋಧ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಡಳಿತ, ಲಿಪಿಕ, ತಾಂತ್ರಿಕ ಹಾಗೂ ಸಹಾಯಕ ಸಿಬ್ಬಂದಿ ಹುದ್ದೆಗಳ ಮೂಲಕ ಕೇಂದ್ರ ಸರ್ಕಾರಿ ಸೇವೆಯಲ್ಲಿ ಸ್ಥಿರ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ.


ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ವಯೋಮಿತಿ ಹಾಗೂ ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಗಮನಿಸಿ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/02/2026. ಇಂತಹ ಮಹತ್ವದ ನೇಮಕಾತಿ ಅವಕಾಶವನ್ನು ಕೈ ತಪ್ಪಿಸಿಕೊಳ್ಳದೆ, ನಿಮ್ಮ ವೃತ್ತಿಜೀವನಕ್ಕೆ ಹೊಸ ದಿಕ್ಕು ನೀಡಿಕೊಳ್ಳಲು ಇಂದೇ ಅರ್ಜಿ ಸಲ್ಲಿಸಿ – ಇದು ನಿಮ್ಮ ಭವಿಷ್ಯವನ್ನು ಬದಲಾಯಿಸಬಲ್ಲ ಅವಕಾಶವಾಗಬಹುದು.


CSUನೇಮಕಾತಿ ಅಧಿಸೂಚನೆಯ ವಿವರ:
ಸಂಸ್ಥೆಯ ಹೆಸರು: ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ (Central Sanskrit University - CSU), ನವದೆಹಲಿ.
ಒಟ್ಟು ಹುದ್ದೆಗಳು: 43 ಹುದ್ದೆಗಳು.
ಉದ್ಯೋಗ ಸ್ಥಳ: ಭಾರತದಾದ್ಯಂತ ಇರುವ ವಿಶ್ವವಿದ್ಯಾಲಯದ ವಿವಿಧ ಅಂಗಸಂಸ್ಥೆಗಳು ಮತ್ತು ಆದರ್ಶ ಸಂಸ್ಕೃತ ಮಹಾವಿದ್ಯಾಲಯಗಳಲ್ಲಿ

ಹುದ್ದೆವಾರು ವಿವರ:
ಲೋವರ್ ಡಿವಿಷನ್ ಕ್ಲರ್ಕ್ (LDC) - 16
ಅಸಿಸ್ಟೆಂಟ್ (Assistant) - 15
ಅಪ್ಪರ್ ಡಿವಿಷನ್ ಕ್ಲರ್ಕ್ (UDC) - 06
ಕಾಲೇಜು ಲೈಬ್ರರಿಯನ್ - 04
ಸೆಕ್ಷನ್ ಆಫೀಸರ್ / ಪ್ರೊಫೆಷನಲ್ ಅಸಿಸ್ಟೆಂಟ್ - 02


ಶೈಕ್ಷಣಿಕ ಅರ್ಹತೆ :
LDC (ಲಿಪಿಕ): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ. ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 35 ಪದಗಳ ಅಥವಾ ಹಿಂದಿಯಲ್ಲಿ 30 ಪದಗಳ ಟೈಪಿಂಗ್ ವೇಗ ಹೊಂದಿರಬೇಕು.
UDC: ಪದವಿಯೊಂದಿಗೆ ಸರ್ಕಾರಿ ಅಥವಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ LDC ಆಗಿ ಕನಿಷ್ಠ 2 ವರ್ಷಗಳ ಅನುಭವ.
ಅಸಿಸ್ಟೆಂಟ್ (Assistant): ಪದವಿಯೊಂದಿಗೆ ಯುಡಿಸಿಯಾಗಿ 3 ವರ್ಷಗಳ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ ಅಗತ್ಯ.
ಸೆಕ್ಷನ್ ಆಫೀಸರ್: ಪದವಿಯೊಂದಿಗೆ ಅಸಿಸ್ಟೆಂಟ್ ಆಗಿ 3 ವರ್ಷಗಳ ಅಥವಾ ಯುಡಿಸಿಯಾಗಿ 8 ವರ್ಷಗಳ ಆಡಳಿತಾತ್ಮಕ ಅನುಭವ.
ಕಾಲೇಜು ಲೈಬ್ರರಿಯನ್: ಲೈಬ್ರರಿ ಸೈನ್ಸ್‌ನಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು UGC-NET/SLET/SET ಅರ್ಹತೆ ಅಥವಾ Ph.D. ಪಡೆದಿರಬೇಕು.

ವೇತನ ಶ್ರೇಣಿ:
ಲೋವರ್ ಡಿವಿಷನ್ ಕ್ಲರ್ಕ್ (LDC) - ₹19,900 to ₹63,200 (Level 2)
ಅಸಿಸ್ಟೆಂಟ್ (Assistant) - ₹35,400 to ₹1,12,400 (Level 6)
ಅಪ್ಪರ್ ಡಿವಿಷನ್ ಕ್ಲರ್ಕ್ (UDC) - ₹25,500 to ₹81,100 (Level 4)
ಕಾಲೇಜು ಲೈಬ್ರರಿಯನ್ - ₹57,700 to ₹1,82,400 (Level 10)
ಸೆಕ್ಷನ್ ಆಫೀಸರ್ / ಪ್ರೊಫೆಷನಲ್ ಅಸಿಸ್ಟೆಂಟ್ - ₹44,900 to ₹1,42,400 (Level 7/6)


ವಯೋಮಿತಿ ಮತ್ತು ಸಡಿಲಿಕೆ (28-01-2026 ಕ್ಕೆ ಅನ್ವಯ):
LDC / UDC: ಗರಿಷ್ಠ 32 ವರ್ಷಗಳು.
ಅಸಿಸ್ಟೆಂಟ್ / ಸೆಕ್ಷನ್ ಆಫೀಸರ್: ಗರಿಷ್ಠ 35 ವರ್ಷಗಳು.
ಲೈಬ್ರರಿಯನ್: UGC ನಿಯಮಗಳ ಪ್ರಕಾರ.
ವಯೋಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, ಮತ್ತು PwBD ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇರುತ್ತದೆ.

ಆಯ್ಕೆ ಪ್ರಕ್ರಿಯೆಯ ಹಂತಗಳು:
ಅಭ್ಯರ್ಥಿಗಳ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ಈ ಕೆಳಗಿನ ಹಂತಗಳಲ್ಲಿ ನಡೆಸಲಾಗುತ್ತದೆ:
1.ಸ್ಕ್ರೂಟಿನಿ: ಅಭ್ಯರ್ಥಿಗಳ ದಾಖಲೆಗಳ ಪ್ರಾಥಮಿಕ ಪರಿಶೀಲನೆ.
2.ಲಿಖಿತ ಪರೀಕ್ಷೆ (Written Exam): ಸಾಮಾನ್ಯ ಜ್ಞಾನ, ರೀಸನಿಂಗ್, ಇಂಗ್ಲಿಷ್/ಹಿಂದಿ ಭಾಷೆ ಮತ್ತು ಕಂಪ್ಯೂಟರ್ ಜ್ಞಾನದ ಕುರಿತು ಪರೀಕ್ಷೆ ಇರುತ್ತದೆ.
3.ಕೌಶಲ ಪರೀಕ್ಷೆ (Skill Test): ಕ್ಲರ್ಕ್ ಹುದ್ದೆಗಳಿಗೆ ಟೈಪಿಂಗ್ ಟೆಸ್ಟ್ ಇರುತ್ತದೆ (ಇದು ಕೇವಲ ಅರ್ಹತಾ ಪರೀಕ್ಷೆಯಾಗಿರುತ್ತದೆ).
4.ಸಂದರ್ಶನ (Interview): ಲೈಬ್ರರಿಯನ್ ಮತ್ತು ಉನ್ನತ ದರ್ಜೆಯ ಹುದ್ದೆಗಳಿಗೆ ಮಾತ್ರ ಅನ್ವಯ.

ಅರ್ಜಿ ಶುಲ್ಕ(Application Fee):
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ. 
ಸಾಮಾನ್ಯ/OBC/EWS: ₹1,000 (ಲೈಬ್ರರಿಯನ್ ಹುದ್ದೆಗೆ ₹3,000).
SC/ST/PwBD: ₹500 (ಲೈಬ್ರರಿಯನ್ ಹುದ್ದೆಗೆ ₹1,500).

ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ;
ಹಂತ1:ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು www.sanskrit.nic.in ಗೆ ಹೋಗಿ.
ಹಂತ 2:ನೋಂದಣಿ: 'Recruitment/Notification' ವಿಭಾಗದಲ್ಲಿ ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಬಳಸಿ ನೋಂದಾಯಿಸಿಕೊಳ್ಳಿ.
ಹಂತ 3:ಮಾಹಿತಿ ಭರ್ತಿ: ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ತುಂಬಿರಿ.
ಹಂತ 4:ದಾಖಲೆ ಅಪ್‌ಲೋಡ್: ಇತ್ತೀಚಿನ ಫೋಟೋ, ಸಹಿ ಮತ್ತು ಅಗತ್ಯ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
ಹಂತ 5:ಶುಲ್ಕ ಪಾವತಿ: ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
ಹಂತ 6:ಹಾರ್ಡ್ ಕಾಪಿ ಕಳುಹಿಸುವುದು: ಆನ್‌ಲೈನ್ ಅರ್ಜಿಯ ಪ್ರಿಂಟ್‌ಔಟ್ ಪಡೆದು, ಅದರ ಜೊತೆ ಸ್ವಯಂ ದೃಢೀಕರಿಸಿದ ದಾಖಲೆಗಳನ್ನು ಲಗತ್ತಿಸಿ 10-03-2026 ರೊಳಗೆ ರಿಜಿಸ್ಟ್ರಾರ್ ಕಚೇರಿಗೆ ಅಂಚೆ ಮೂಲಕ ಕಳುಹಿಸುವುದು ಕಡ್ಡಾಯ.

ಪ್ರಮುಖ ದಿನಾಂಕಗಳು (Important Dates):
ಅಧಿಸೂಚನೆ ಹೊರಡಿಸಿದ ದಿನಾಂಕ: 28 ಜನವರಿ 2026
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 28 ಜನವರಿ 2026
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ: 27 ಫೆಬ್ರವರಿ 2026 (ರಾತ್ರಿ 11:30 ರವರೆಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 27 ಫೆಬ್ರವರಿ 2026
ಅರ್ಜಿಯ ಹಾರ್ಡ್ ಕಾಪಿ ತಲುಪಲು ಕೊನೆಯ ದಿನ: 10 ಮಾರ್ಚ್ 2026 (ಸಂಜೆ 6:00 ರವರೆಗೆ)
ಪರೀಕ್ಷಾ ದಿನಾಂಕ: ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ: 
The Registrar,
Central Sanskrit University,
56-57, Institutional Area, Janakpuri,
New Delhi - 110058.

ಕಳುಹಿಸುವ ವಿಧಾನ:
ಅರ್ಜಿಯನ್ನು ಕೇವಲ ನೋಂದಾಯಿತ ಅಂಚೆ (Registered Post) ಅಥವಾ ಸ್ಪೀಡ್ ಪೋಸ್ಟ್ (Speed Post) ಮೂಲಕ ಮಾತ್ರ ಕಳುಹಿಸಬೇಕು.

ಲಗತ್ತಿಸಬೇಕಾದ ದಾಖಲೆಗಳು:
ಆನ್‌ಲೈನ್ ಅರ್ಜಿಯ ಪ್ರಿಂಟ್‌ಔಟ್ ಜೊತೆಗೆ ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವದ ಪತ್ರಗಳು, ಜಾತಿ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯಸ್ವಯಂ ದೃಢೀಕರಿಸಿದ (Self-Attested)ನಕಲು ಪ್ರತಿಗಳನ್ನು ಲಗತ್ತಿಸಬೇಕು.

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ


 

Application End Date:  27 ಫೆಬ್ರುವರಿ 2026
To download official notification

Comments