ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಖಾಲಿ ಇರುವ ವಿವಿಧ ಹುದ್ದೆಗಳ ಭರ್ಜರಿ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಲ್ಲಿ ಖಾಲಿ ಇರುವ 169 ಕಾನ್ಸ್ ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪ್ರಾರಂಭ ದಿನಾಂಕ 16-01-2024 ಹಾಗೂ ಕೊನೆಯ ದಿನಾಂಕ 15 ಫೆಬ್ರುವರಿ 2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 169
ಜಿಮ್ನ್ಯಾಸ್ಟಿಕ್ - 06
ಜುಡೋ - 06
ವೂಶು - 09
ಶೂಟಿಂಗ್ - 09
ಬಾಕ್ಸಿಂಗ್ - 05
ಅಥ್ಲೆಟಿಕ್ಸ್ - 22
ಆರ್ಚರಿ - 6
ರೆಸ್ಲಿಂಗ್ ಫ್ರೀ ಸ್ಟೈಲ್ - 10
ಗ್ರೀಕ ರೋಮನ್ - 01
ಟೇಕ್ವಾಂಡೋ - 05
ವಾಟರ್ ಸ್ಪೋರ್ಟ್ಸ್ - 04
ಕ್ಯಾನೊಗ್ - 04
ರೋಯಿಂಗ್ - 02
ಬಾಡಿ ಬಿಲ್ಡಿಂಗ್ - 02
ವೇಯ್ಟ್ ಲಿಪ್ಟಿಂಗ್ - 07
ಸ್ವಿಮ್ಮಿಂಗ್ - 14
ಡೈವಿಂಗ್ - 05
ಟ್ರೈಯಥ್ಲಾನ್ - 01
ಕರಾಟೆ - 06
ಯೋಗ - 05
ಎಕ್ಯೂಸ್ಟ್ರಿಯನ್ - 10
ಯಾಚ್ಟಿಂಗ್ - 10
ಐಸ್ ಹಾಕಿ - 08
ಐಸ್ ಸ್ಕೇಟಿಂಗ್ - 08
ಐಸ್ ಸ್ಕೀಯಿಂಗ್- 04
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಹಾಗೂ ಸಂದರ್ಶನ ನಡೆಸುವ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕ್ರೀಡಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಠ 23 ವರ್ಷ ವಯೋಮಿತಿಯನ್ನು ಹೊಂದಿರಬೇಕು.
SC/ ST ಅಭ್ಯರ್ಥಿಗಳಿಗೆ 5 ವರ್ಷಗಳು
OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗುವಂತೆ ಮಾಸಿಕ ವೇತನ 21,700/- ರೂ ಗಳಿಂದ 69,100/- ರೂ ಗಳ ವರೆಗೆ ನೀಡಲಾಗುತ್ತದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments