Loading..!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (CPCB) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | SSLC, PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree SSLC
Published by: Yallamma G | Date:8 ಎಪ್ರಿಲ್ 2025
not found

ಭಾರತದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (Central Pollution Control Board - CPCB) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿರುವ ಶಾಸನಬದ್ಧ ಸಂಸ್ಥೆಯಾಗಿದ್ದು, ಈಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ 69 ಸೈಂಟಿಸ್ಟ್-B, ಅಸಿಸ್ಟೆಂಟ್, ಅಸಿಸ್ಟೆಂಟ್ ಲೋವರ್ ಆಫೀಸರ್, ಟೆಕ್ನಿಕಲ್ ಸೂಪರ್ವೈಸರ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ28/04/2025 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.


ವಿದ್ಯಾರ್ಹತೆ :
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ 10ನೇ, 12ನೇ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಬಿಇ ಅಥವಾ ಬಿ.ಟೆಕ್  ಪೂರ್ಣಗೊಳಿಸಿರಬೇಕು.


ವಯೋಮಿತಿ :
ಅಭ್ಯರ್ಥಿಯು ಗರಿಷ್ಠ ವಯಸ್ಸು 35 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
ಪಿಡಬ್ಲ್ಯೂಬಿಡಿ (ಯುಆರ್/ಇಡಬ್ಲ್ಯೂಎಸ್) ಅಭ್ಯರ್ಥಿಗಳು: 10 ವರ್ಷಗಳು
ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು


ಅರ್ಜಿಶುಲ್ಕ :
SC/ST/PwBD/ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಇರುವುದಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳಿಗೆ (ಒಂದು ಗಂಟೆ ಪರೀಕ್ಷೆ): ₹500/-
ಇತರ ಎಲ್ಲಾ ಅಭ್ಯರ್ಥಿಗಳಿಗೆ (ಎರಡು ಗಂಟೆಗಳ ಪರೀಕ್ಷೆ): ₹1000/-
ಪಾವತಿ ವಿಧಾನ: ಆನ್‌ಲೈನ್ ಮೂಲಕ


ವೇತನ ಶ್ರೇಣಿ :
ಮಾಸಿಕ ₹18,000-1,77,500/- ವೇತನವನ್ನು ನಿಗದಿಪಡಿಸಲಾಗಿದೆ.


ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.


ಅರ್ಜಿಸಲ್ಲಿಸುವ ಕ್ರಮಗಳು :
- ಅಧಿಕೃತ ವೆಬ್‌ಸೈಟ್‌ https://cpcb.nic.in/ ಗೆ ಭೇಟಿ ನೀಡಿ
- ನೀವು ಅರ್ಜಿ ಸಲ್ಲಿಸಲಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಾತಿ ಅಥವಾ ಉದ್ಯೋಗಗಳಿಗಾಗಿ ಪರಿಶೀಲಿಸಿ.
- ಸಹಾಯಕ, ವಿಜ್ಞಾನಿ ಹುದ್ದೆಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
- ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
- ನೀವು ಅರ್ಹರಾಗಿದ್ದರೆ, ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- 28-04-2025 ರೊಳಗೆ ಅರ್ಜಿ ಸಲ್ಲಿಸಿ ಅರ್ಜಿ ನಮೂನೆಯ ಸಂಖ್ಯೆ/ಕೊರಿಯರ್ ಸ್ವೀಕೃತಿ ಸಂಖ್ಯೆಯನ್ನು ಸುರಕ್ಷಿತವಾಗಿಡಬೇಕು.


ಅರ್ಜಿಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 07-04-2025 ರಿಂದ  28-04-2025 ರೊಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಾತಿ ಅಧಿಕೃತ ವೆಬ್‌ಸೈಟ್ https://cpcb.nic.in/ ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-04-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-04-2025
ಉದ್ಯೋಗ ಸ್ಥಳ: ಅಖಿಲ ಭಾರತ

Application End Date:  28 ಎಪ್ರಿಲ್ 2025
To Download Official Notification
NLC Recruitment 2025
CPCB Recruitment 2025
Neyveli Lignite Corporation Jobs 2025
Central Pollution Control Board Jobs 2025
NLC Job Notification 2025
CPCB Vacancy 2025
CPCB NLC Careers 2025
NLC CPCB Job Openings 2025

Comments