Loading..!

ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ಮೈಸೂರು ಖಾಲಿ ಇರುವ ರಿಸೋರ್ಸ್ ಪರ್ಸನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತು ಮಾಹಿತಿ
| Date:5 ಸೆಪ್ಟೆಂಬರ್ 2019
not found
ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ರಿಸೋರ್ಸ್ ಪರ್ಸನ್ (ಸಂಪನ್ಮೂಲ ವ್ಯಕ್ತಿ) ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು52 ಹುದ್ದೆಗಳಿಗೆ ನೇಮಕ ನಡೆಯಲಿದ್ದು ಆಸಕ್ತರು ಅಕ್ಟೋಬರ್ ಮೊದಲ ವಾರದೊಳಗೆ ಅಂಚೆ ಮೂಲಕ ಅರ್ಜಿ ಕಳುಹಿಸಬಹುದು. ಈ ನೇಮಕಕ್ಕೆ ಸಂಬಂಧಪಟ್ಟಂತೆ ಕಳೆದ ಮಾರ್ಚ್ ನಲ್ಲಿ (8 ನೇ ತಾರೀಕು ) ಪ್ರಕಟಿಸಿರುವ ಅಧಿಸೂಚನೆಗನುಗುಣವಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ಸಿಐಐಎಲ್ ಸ್ಪಷ್ಟಪಡಿಸಿದೆ.

ಹುದ್ದೆಗಳ ವಿವರ :
* ಸೀನಿಯರ್ ರಿಸೋರ್ಸ್ ಪರ್ಸನ್ - 08
* ಜೂನಿಯರ್ ರಿಸೋರ್ಸ್ ಪರ್ಸನ್ - 39
* ಚೀಫ್ ರಿಸೋರ್ಸ್ ಪರ್ಸನ್ - 02
* ವೆಬ್ ಡಿಸೈನರ್/ ಎಡಿಟರ್ ಅಸಿಸ್ಟೆಂಟ್ / ವೀಡಿಯೋಗ್ರಾಫರ್ - 03

ಅಭ್ಯರ್ಥಿಗಳ ಗಮನಕ್ಕೆ:
* ಮತ್ತು ನ್ಯಾಶನಲ್ ಟ್ರಾನ್ಸಲೇಶನ್ ಮಿಷನ್ ಗೆ ಸಂಬಂಧಪಟ್ಟಂತೆ ಚಿಪ್ ಸೀನಿಯರ್ ಮತ್ತು ಜೂನಿಯರ್ ರಿಸೋರ್ಸ್ ಪರ್ಸನ್ ಗಳ ನೇಮಕ ನಡೆಯಲಿದೆ. ಆಯಾ ಪ್ರಾಜೆಕ್ಟ್ ಗೆ ಅನುಸಾರ ಇವುಗಳ ವಿದ್ಯಾರ್ಹತೆ ಬೇರೆ ಬೇರೆಯಾಗಿರುವುದರಿಂದ ಅವುಗಳ ಸಂಪೂರ್ಣ ವಿವರಗಳನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು
* ಅಭ್ಯರ್ಥಿಗಳು ಹಿಂದಿ, ಇಂಗ್ಲಿಷ್ ಮತ್ತು ಶೆಡ್ಯೂಲ್ಡ್ ಲ್ಯಾಂಗ್ವೇಜ್ ನಲ್ಲಿ ಪರಿಣತಿ ಹೊಂದಿರಬೇಕು.
* ಇದು ಗುತ್ತಿಗೆ ಆಧರಿತ ಹುದ್ದೆಯಾಗಿದೆ.
* ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
No. of posts:  52
Application Start Date:  4 ಸೆಪ್ಟೆಂಬರ್ 2019
Application End Date:  5 ಅಕ್ಟೋಬರ್ 2019
Qualification: ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ಹೊಂದಿರುವ ಕಾರಣ ಅಭ್ಯರ್ಥಿಗಳು ನೋಟಿಫಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಂಡು ಓದಬೇಕು
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments