Loading..!

ವಿಜಯಪುರ ಮಹಿಳಾ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ: ಎಸ್‌ಎಸ್‌ಎಲ್‌ಸಿ, ಡಿಗ್ರಿ ಆದವರಿಗೆ ಭರ್ಜರಿ ಅವಕಾಶ!
Tags: Degree
Published by: Yallamma G | Date:2 ಮಾರ್ಚ್ 2026
not found
ಉದ್ಯೋಗ ಹುಡುಕುತ್ತಿರುವ ನಾಡಿನ ಯುವಕ-ಯುವತಿಯರಿಗೆ ವಿಜಯಪುರದ ಪ್ರತಿಷ್ಠಿತ 'ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ' ಭರ್ಜರಿ ಸಿಹಿಸುದ್ದಿ ನೀಡಿದೆ. ಬ್ಯಾಂಕಿನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು (Junior Assistants) ಮತ್ತು ಸಿಪಾಯಿ (Peon) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

ಕೇವಲ 10ನೇ ತರಗತಿ ಪಾಸಾದವರಿಂದ ಹಿಡಿದು ಪದವೀಧರರವರೆಗೆ ಇಲ್ಲಿ ಅವಕಾಶವಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 10 ಜೂನಿಯರ್ ಅಸಿಸ್ಟೆಂಟ್, ಸಿಪಾಯಿ ಹುದ್ದೆಗಳನ್ನು ನೇಮಕ ಮಾಡಿಕೊಳಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 10/03/2026. 

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕಂಪ್ಲೀಟ್ ಡೀಟೇಲ್ಸ್ ಅನ್ನು KPSCVaani ಇಲ್ಲಿ ನೀಡುತ್ತಿದೆ.

ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಯಾವೆಲ್ಲ ಹುದ್ದೆಗಳಿವೆ  : 


  • ಒಟ್ಟು 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 

  • ಕಿರಿಯ ಸಹಾಯಕರು (Junior Assistants): 5 ಹುದ್ದೆಗಳು 

  • ಸಿಪಾಯಿ (Peon): 5 ಹುದ್ದೆಗಳು 


ಶೈಕ್ಷಣಿಕ ಅರ್ಹತೆ ಏನಿರಬೇಕು?


  • ಕಿರಿಯ ಸಹಾಯಕರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಬಿ.ಕಾಂ (B.Com), ಬಿ.ಎಸ್ಸಿ (B.Sc), ಬಿಸಿಎ (BCA), ಬಿಬಿಎ (BBA) ಅಥವಾ ಬಿ.ಇ (B.E) ಪದವೀಧರರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು. ಪದವಿಯಲ್ಲಿ ಕನಿಷ್ಠ ಶೇ. 70% ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಜ್ಞಾನ ಮತ್ತು ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.

  • ಸಿಪಾಯಿ: ಎಸ್‌ಎಸ್‌ಎಲ್‌ಸಿ (SSLC) ಪಾಸ್ ಆಗಿರಬೇಕು ಮತ್ತು ಕನ್ನಡವನ್ನು ಒಂದು ವಿಷಯವನ್ನಾಗಿ ಓದಿ ತೇರ್ಗಡೆ ಹೊಂದಿರಬೇಕು. ಡ್ರೈವಿಂಗ್ ಲೈಸೆನ್ಸ್ (Driving License) ಇದ್ದವರಿಗೆ ಆದ್ಯತೆ ನೀಡಲಾಗುವುದು.

  • ಗಮನಿಸಿ: ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲೀಷ್, ಮತ್ತು ಹಿಂದಿ ಭಾಷೆಗಳನ್ನು ಓದಲು ಮತ್ತು ಬರೆಯಲು ಬರಬೇಕು.


ವಯೋಮಿತಿ (Age Limit)
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:


  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷಗಳು.

  • ಇತರೆ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ: 38 ವರ್ಷಗಳು.

  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ: 40 ವರ್ಷಗಳು.


ಅರ್ಜಿ ಶುಲ್ಕದ ವಿವರ


  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ: ₹1000/-.

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ: ₹500/-.

  • ಪಾವತಿಸುವ ವಿಧಾನ: ನಿಗದಿತ ಶುಲ್ಕವನ್ನು "ವ್ಯವಸ್ಥಾಪಕರು, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ ನಿ., ವಿಜಯಪುರ" ಇವರ ಹೆಸರಿನಲ್ಲಿ ಡಿ.ಡಿ (DD - Demand Draft) ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.


ವೇತನ ಎಷ್ಟು?
ವೇತನ ಶ್ರೇಣಿ ಈ ಕೆಳಗಿನಂತಿದೆ:


  • ಕಿರಿಯ ಸಹಾಯಕರು (Junior Assistants): ಈ ಹುದ್ದೆಗೆ ಆಯ್ಕೆಯಾದವರಿಗೆ ₹27,650 ರಿಂದ ₹52,650 ರವರೆಗೆ ವೇತನ ಶ್ರೇಣಿ ಇರಲಿದೆ.

  • ಸಿಪಾಯಿ (Peon): ಈ ಹುದ್ದೆಗೆ ₹19,950 ರಿಂದ ₹37,900 ರವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.'

  • ಗಮನಿಸಿ: ರಾಜ್ಯ ಸರ್ಕಾರವು ಕಾಲಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಬ್ಯಾಂಕಿನ ಆರ್ಥಿಕ ಸ್ಥಿತಿಗನುಗುಣವಾಗಿ ನೀಡಲಾಗುವುದು.


 ಆಯ್ಕೆ ಪ್ರಕ್ರಿಯೆ ಮತ್ತು ಲಿಖಿತ ಪರೀಕ್ಷೆಯ ಪಠ್ಯಕ್ರಮ 
ಅಭ್ಯರ್ಥಿಗಳನ್ನು 200 ಅಂಕಗಳ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯ ವಿಷಯಗಳು ಈ ಕೆಳಗಿನಂತಿವೆ:


  • ಕನ್ನಡ ಭಾಷೆ : 40 

  • ಇಂಗ್ಲಿಷ್ ಭಾಷೆ : 30 

  • ಸಾಮಾನ್ಯ ಜ್ಞಾನ (GK) : 30 

  • ಸಹಕಾರ ಮತ್ತು ಬ್ಯಾಂಕಿಂಗ್ : 100

  • ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು 15 ಅಂಕಗಳ ಮೌಖಿಕ ಸಂದರ್ಶನಕ್ಕೆ (Interview) ಕರೆಯಲಾಗುತ್ತದೆ.


ಅರ್ಜಿ ಸಲ್ಲಿಸುವುದು ಹೇಗೆ?


  • ನಿಗದಿತ ಅರ್ಜಿ ನಮೂನೆಯನ್ನು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ (www.cmsbank.in) ಅಥವಾ ವಿಜಯಪುರದಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಿಂದ ಖುದ್ದಾಗಿ ಪಡೆಯಬಹುದು.

  • ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ನಿಮ್ಮ ಪಾಸ್‌ಪೋರ್ಟ್ ಅಳತೆಯ ಫೋಟೋ ಅಂಟಿಸಿ.

  • ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಅಂಕಪಟ್ಟಿಗಳು, ಆಧಾರ ಕಾರ್ಡ್, ಜಾತಿ ಪ್ರಮಾಣಪತ್ರ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ (Gazetted Officer) ದೃಢೀಕರಿಸಿ (Attestation) ಅರ್ಜಿಯೊಂದಿಗೆ ಲಗತ್ತಿಸುವುದು ಕಡ್ಡಾಯ.

  • ಡಿ.ಡಿ (DD) ಯನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

  • ಅರ್ಜಿ ಸಲ್ಲಿಸಬೇಕಾದ ವಿಳಾಸ: ಸಿಬ್ಬಂದಿ ನೇಮಕಾತಿ ಸಮಿತಿಯ ಸಂಚಾಲಕರು ಹಾಗೂ ಪ್ರಧಾನ ವ್ಯವಸ್ಥಾಪಕರು, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ ನಿ., ಮೀನಾಕ್ಷಿ ಚೌಕ, ಮಿರ್ದೆ ಗಲ್ಲಿ, ವಿಜಯಪುರ-586101.


ಪ್ರಮುಖ ದಿನಾಂಕಗಳು:


  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 16-02-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2026


ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ಹೊಸ ನೇಮಕಾತಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಲು ಇಲ್ಲಿ ಡೌನ್ಲೋಡ್ ಮಾಡಿ. 

Application Start Date:  16 ಫೆಬ್ರುವರಿ 2026
Application End Date:  10 ಮಾರ್ಚ್ 2026
To Download Official Notification

Comments