ಪರೀಕ್ಷೆ ಇಲ್ಲದೆ ಕೇಂದ್ರ ಸರ್ಕಾರಿ ಉದ್ಯೋಗ: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ 82 ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇರ ಸಂದರ್ಶನ!
Published by: Yallamma G | Date:27 ಮಾರ್ಚ್ 2026

ಪದವೀಧರರಿಗೆ ಕೇಂದ್ರ ಸರ್ಕಾರದ ಅಡಿ ಕಾರ್ಯನಿರ್ವಹಿಸುವ ಸುವರ್ಣಾವಕಾಶ! ಕೇಂದ್ರ ರೇಷ್ಮೆ ಮಂಡಳಿಯಲ್ಲಿ (Central Silk Board) ಸೆರಿಕಲ್ಚರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಭಾರತ ಸರ್ಕಾರದ ಜವಳಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಕೇಂದ್ರ ರೇಷ್ಮೆ ಮಂಡಳಿ'ಯು (Central Silk Board - CSB) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ದೇಶಾದ್ಯಂತ ಇರುವ ತನ್ನ ವಿವಿಧ ಕಚೇರಿಗಳಲ್ಲಿ ಖಾಲಿ ಇರುವ ಸೆರಿಕಲ್ಚರ್ ಅಸಿಸ್ಟೆಂಟ್ (Sericulture Assistant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಈ ನೇಮಕಾತಿ ಅಡಿಯಲ್ಲಿರೇಷ್ಮೆ ಸಹಾಯಕ (NSSO), ರೇಷ್ಮೆ ಸಹಾಯಕ (CSTRI) ಮತ್ತು ರೇಷ್ಮೆ ಸಹಾಯಕ ಸೇರಿದಂತ್ತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು13-ಏಪ್ರಿಲ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ ಕೇವಲ ವೈಯಕ್ತಿಕ ಸಂದರ್ಶನದ (Personal Interview) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವೇತನ, ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ.
Visit Official website
CSB ನೇಮಕಾತಿ 2026
ಹುದ್ದೆಗಳ ಸಂಪೂರ್ಣ ವಿವರ (Vacancy Details)
ಈ ನೇಮಕಾತಿಯು ಸಂಪೂರ್ಣವಾಗಿ 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ (Contract Basis) ಮೇಲಿರುತ್ತದೆ. ಒಟ್ಟು 82 ಹುದ್ದೆಗಳು ಖಾಲಿ ಇದ್ದು, ಇದರ ವಿಂಗಡಣೆ ಈ ಕೆಳಗಿನಂತಿದೆ:
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ವಿದ್ಯಾರ್ಹತೆ ಏನು ಬೇಕು? (Educational Qualification)
ಹುದ್ದೆಗಳನ್ನು ಪ್ರಿ-ಕೂಕೂನ್ (Pre-Cocoon) ಮತ್ತು ಪೋಸ್ಟ್-ಕೂಕೂನ್ (Post-Cocoon) ಎಂದು ವಿಂಗಡಿಸಲಾಗಿದ್ದು, ಶೈಕ್ಷಣಿಕ ಅರ್ಹತೆಗಳು ಈ ಕೆಳಗಿನಂತಿವೆ:
ವಯೋಮಿತಿ ಮತ್ತು ವೇತನ (Age Limit & Salary)
ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು ಏಪ್ರಿಲ್ 13, 2026 ಕ್ಕೆ ಅನ್ವಯವಾಗುವಂತೆ 35 ವರ್ಷಗಳ ಒಳಗಿರಬೇಕು.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,000/- ಜೊತೆಗೆ HRA (ಮನೆ ಬಾಡಿಗೆ ಭತ್ಯೆ) ನೀಡಲಾಗುತ್ತದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ :
ಯಾವುದೇ ಪರೀಕ್ಷೆ ಇರುವುದಿಲ್ಲ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಕೇವಲ ವೈಯಕ್ತಿಕ ಸಂದರ್ಶನ (Personal Interview) ನಡೆಸಲಾಗುತ್ತದೆ. ಸಂದರ್ಶನದ ದಿನಾಂಕ ಮತ್ತು ಸ್ಥಳವನ್ನು ಅಭ್ಯರ್ಥಿಗಳ ಇಮೇಲ್ ಐಡಿಗೆ ಮಾತ್ರ ಕಳುಹಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply):
ಪ್ರಮುಖ ದಿನಾಂಕಗಳು:
KPSCVaani ಕಡೆಯಿಂದ ಅಭ್ಯರ್ಥಿಗಳಿಗೆ ಕಿವಿಮಾತು: ಕರ್ನಾಟಕದ ಅಭ್ಯರ್ಥಿಗಳಿಗೆ, ಅದರಲ್ಲೂ ಬಿ.ಎಸ್ಸಿ (B.Sc) ಮತ್ತು ಕೃಷಿ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ನೇರ ಸಂದರ್ಶನ ಇರುವುದರಿಂದ ನಿಮ್ಮ ರೆಸ್ಯೂಮ್ ಮತ್ತು ಕೌಶಲ್ಯಗಳನ್ನು ಉತ್ತಮವಾಗಿ ಸಿದ್ಧಪಡಿಸಿಕೊಳ್ಳಿ.

- ಸಂಸ್ಥೆಯ ಹೆಸರು : ಸೆಂಟ್ರಲ್ ಸಿಲ್ಕ್ ಬೋರ್ಡ್ ( CSB )
- ಹುದ್ದೆಯ ವಿವರಗಳು : ರೇಷ್ಮೆ ಸಹಾಯಕ
- ಒಟ್ಟು ಹುದ್ದೆಗಳ ಸಂಖ್ಯೆ : 82
- ಸಂಬಳ: ತಿಂಗಳಿಗೆ ರೂ. 21,000/-
- ಉದ್ಯೋಗ ಸ್ಥಳ: ಅಖಿಲ ಭಾರತ
- ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್
- ಅಧಿಕೃತ ವೆಬ್‌ಸೈಟ್ : csb.gov.in
ಹುದ್ದೆಗಳ ಸಂಪೂರ್ಣ ವಿವರ (Vacancy Details)
ಈ ನೇಮಕಾತಿಯು ಸಂಪೂರ್ಣವಾಗಿ 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ (Contract Basis) ಮೇಲಿರುತ್ತದೆ. ಒಟ್ಟು 82 ಹುದ್ದೆಗಳು ಖಾಲಿ ಇದ್ದು, ಇದರ ವಿಂಗಡಣೆ ಈ ಕೆಳಗಿನಂತಿದೆ:
- CSB - ಕೇಂದ್ರ ಕಚೇರಿ (Central Office), ಬೆಂಗಳೂರು: 2 ಹುದ್ದೆಗಳು.
- CSB - CSTRI (ಕೇಂದ್ರೀಯ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ) ಮತ್ತು ಅದರ ಘಟಕಗಳು: 15 ಹುದ್ದೆಗಳು (ಇದರಲ್ಲಿ ಬೆಂಗಳೂರು, ರಾಮನಗರ ಸೇರಿದಂತೆ ಕರ್ನಾಟಕದಲ್ಲಿಯೇ 9 ಹುದ್ದೆಗಳಿವೆ).
- CSB - NSSO (ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆ) ಘಟಕಗಳು: 65 ಹುದ್ದೆಗಳು (ಇದರಲ್ಲಿ ಮೈಸೂರು, ಬೆಂಗಳೂರು, ರಾಮನಗರ, ಮಳವಳ್ಳಿ ಸೇರಿದಂತೆ ಕರ್ನಾಟಕದಲ್ಲಿ ಗರಿಷ್ಠ 31 ಹುದ್ದೆಗಳಿವೆ).
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ವಿದ್ಯಾರ್ಹತೆ ಏನು ಬೇಕು? (Educational Qualification)
ಹುದ್ದೆಗಳನ್ನು ಪ್ರಿ-ಕೂಕೂನ್ (Pre-Cocoon) ಮತ್ತು ಪೋಸ್ಟ್-ಕೂಕೂನ್ (Post-Cocoon) ಎಂದು ವಿಂಗಡಿಸಲಾಗಿದ್ದು, ಶೈಕ್ಷಣಿಕ ಅರ್ಹತೆಗಳು ಈ ಕೆಳಗಿನಂತಿವೆ:
1. ಪ್ರಿ-ಕೂಕೂನ್ ಸೆಕ್ಟರ್ ಹುದ್ದೆಗಳಿಗೆ (Pre-Cocoon Sector): ರೇಷ್ಮೆ ಕೃಷಿಯಲ್ಲಿ (Sericulture) 3 ಅಥವಾ 4 ವರ್ಷಗಳ ಪದವಿ ಪಡೆದಿರಬೇಕು. ಅಥವಾಕೃಷಿ ವಿಜ್ಞಾನದಲ್ಲಿ (Agriculture Sciences) 4 ವರ್ಷಗಳ ಪದವಿ. ಅಥವಾಜೀವಶಾಸ್ತ್ರ, ಪ್ರಾಣಿಶಾಸ್ತ್ರ (Zoology), ಅಥವಾ ಸಸ್ಯಶಾಸ್ತ್ರದಲ್ಲಿ (Botany) 3 ವರ್ಷಗಳ ಪದವಿಯೊಂದಿಗೆ, ರೇಷ್ಮೆ ಕೃಷಿಯಲ್ಲಿ ಪಿಜಿ ಡಿಪ್ಲೊಮಾ ಮಾಡಿರಬೇಕು ಅಥವಾ 1 ವರ್ಷದ ಅನುಭವ ಹೊಂದಿರಬೇಕು.
2. ಪೋಸ್ಟ್-ಕೂಕೂನ್ ಸೆಕ್ಟರ್ ಹುದ್ದೆಗಳಿಗೆ (Post-Cocoon Sector - CSTRI):
ಟೆಕ್ಸ್‌ಟೈಲ್ ಟೆಕ್ನಾಲಜಿ/ಹ್ಯಾಂಡ್ಲೂಮ್/ಟೆಕ್ಸ್‌ಟೈಲ್ ಕೆಮಿಸ್ಟ್ರಿಯಲ್ಲಿ 3 ವರ್ಷಗಳ ಡಿಪ್ಲೊಮಾ. ಅಥವಾ
ಟೆಕ್ಸ್‌ಟೈಲ್ಸ್ ಕ್ಷೇತ್ರದಲ್ಲಿ B.Sc ಅಥವಾ ಸಂಬಂಧಿತ ವಿಭಾಗದಲ್ಲಿ B.Tech ಪದವಿ.
ವಯೋಮಿತಿ ಮತ್ತು ವೇತನ (Age Limit & Salary)
ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು ಏಪ್ರಿಲ್ 13, 2026 ಕ್ಕೆ ಅನ್ವಯವಾಗುವಂತೆ 35 ವರ್ಷಗಳ ಒಳಗಿರಬೇಕು.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,000/- ಜೊತೆಗೆ HRA (ಮನೆ ಬಾಡಿಗೆ ಭತ್ಯೆ) ನೀಡಲಾಗುತ್ತದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಯ್ಕೆ ಪ್ರಕ್ರಿಯೆ :
ಯಾವುದೇ ಪರೀಕ್ಷೆ ಇರುವುದಿಲ್ಲ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಕೇವಲ ವೈಯಕ್ತಿಕ ಸಂದರ್ಶನ (Personal Interview) ನಡೆಸಲಾಗುತ್ತದೆ. ಸಂದರ್ಶನದ ದಿನಾಂಕ ಮತ್ತು ಸ್ಥಳವನ್ನು ಅಭ್ಯರ್ಥಿಗಳ ಇಮೇಲ್ ಐಡಿಗೆ ಮಾತ್ರ ಕಳುಹಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply):
- ಆನ್‌ಲೈನ್ ಮೂಲಕ ಮಾತ್ರ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು.
- ಅಧಿಕೃತ ವೆಬ್‌ಸೈಟ್: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಲಿಂಕ್ https://csb-hiring.in/ ಗೆ ಭೇಟಿ ನೀಡಬೇಕು.\
- ದಾಖಲೆಗಳ ಲಗತ್ತಿಸುವಿಕೆ: ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವಾಗ, ಅರ್ಹತೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳ 'ಸ್ವಯಂ ದೃಢೀಕರಿಸಿದ' (self-attested) ಪ್ರತಿಗಳನ್ನು ಕಡ್ಡಾಯವಾಗಿ ಅಪ್‌ಲೋಡ್ (attach) ಮಾಡಬೇಕು.
- ಸ್ಥಳದ ಆದ್ಯತೆ (Location Preference): ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಾವು ಕೆಲಸ ಮಾಡಲು ಇಚ್ಛಿಸುವ ಮೂರು ಆದ್ಯತೆಯ ಸ್ಥಳಗಳನ್ನು (three preferred locations) ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
- ಸರಿಯಾದ ಇಮೇಲ್ ಐಡಿ ಕಡ್ಡಾಯ: ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಸರಿಯಾದ ಮತ್ತು ಚಾಲ್ತಿಯಲ್ಲಿರುವ ತಮ್ಮ ಇಮೇಲ್ ಐಡಿಯನ್ನು (E-mail ID) ಮಾತ್ರ ಒದಗಿಸಬೇಕು. ಏಕೆಂದರೆ, ಮುಂದಿನ ವೈಯಕ್ತಿಕ ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಯನ್ನು ಕೇವಲ ಇಮೇಲ್ ಮೂಲಕವೇ ತಿಳಿಸಲಾಗುತ್ತದೆ.
- ಎಚ್ಚರಿಕೆ ವಹಿಸಿ: ಅರ್ಜಿಯಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡಬಾರದು, ತಿದ್ದಿದ ಅಥವಾ ಫ್ಯಾಬ್ರಿಕೇಟ್ ಮಾಡಿದ ದಾಖಲೆಗಳನ್ನು ನೀಡಬಾರದು ಮತ್ತು ಯಾವುದೇ ಮುಖ್ಯ ಮಾಹಿತಿಯನ್ನು ಮುಚ್ಚಿಡಬಾರದು.
- ತಿದ್ದುಪಡಿಗೆ ಅವಕಾಶವಿಲ್ಲ: ಅಪೂರ್ಣವಾಗಿರುವ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುತ್ತದೆ. ಒಮ್ಮೆ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿದ (submit) ನಂತರ, ಅದರಲ್ಲಿ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಸೇರಿಸಲು ಅಥವಾ ಬದಲಾಯಿಸಲು ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ.
- ಕೊನೆಯ ದಿನಾಂಕ: ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ 13-04-2026 ಆಗಿರುತ್ತದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-03-2026
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-ಏಪ್ರಿಲ್-2026
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
ಸೂಚನೆ:ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಹೋಗಬೇಕು, ಯಾವುದೇ ಟಿಎ/ಡಿಎ ನೀಡಲಾಗುವುದಿಲ್ಲ ಹಾಗೂ ಸಂದರ್ಶನದ ಸಮಯದಲ್ಲಿ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಸೂಚನೆ:ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಹೋಗಬೇಕು, ಯಾವುದೇ ಟಿಎ/ಡಿಎ ನೀಡಲಾಗುವುದಿಲ್ಲ ಹಾಗೂ ಸಂದರ್ಶನದ ಸಮಯದಲ್ಲಿ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
KPSCVaani ಕಡೆಯಿಂದ ಅಭ್ಯರ್ಥಿಗಳಿಗೆ ಕಿವಿಮಾತು: ಕರ್ನಾಟಕದ ಅಭ್ಯರ್ಥಿಗಳಿಗೆ, ಅದರಲ್ಲೂ ಬಿ.ಎಸ್ಸಿ (B.Sc) ಮತ್ತು ಕೃಷಿ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ನೇರ ಸಂದರ್ಶನ ಇರುವುದರಿಂದ ನಿಮ್ಮ ರೆಸ್ಯೂಮ್ ಮತ್ತು ಕೌಶಲ್ಯಗಳನ್ನು ಉತ್ತಮವಾಗಿ ಸಿದ್ಧಪಡಿಸಿಕೊಳ್ಳಿ.
Application End Date: 13 ಎಪ್ರಿಲ್ 2026

Comments