Loading..!

ಕೇಂದ್ರೀಯ ರೇಷ್ಮೆ ಮಂಡಳಿ ಬೆಂಗಳೂರು ಇಲ್ಲಿ ಖಾಲಿ ಇರುವ ಸುಮಾರು 60 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Mallappa Myageri | Date:10 ನವೆಂಬರ್ 2021
not found
ಭಾರತ ಸರ್ಕಾರದ ಕೇಂದ್ರ ರೇಷ್ಮೆ ಮಂಡಳಿ, ಬೆಂಗಳೂರು ಜವಳಿ ಸಚಿವಾಲಯದಲ್ಲಿ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ : 17.11.2021 ರ ಸಂಜೆ 06:00  ಗಂಟೆ ಒಳಗಾಗಿ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಿದೆ.
No. of posts:  60
Application Start Date:  9 ನವೆಂಬರ್ 2021
Application End Date:  17 ನವೆಂಬರ್ 2021
Selection Procedure: ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification:

ತರಬೇತುದಾರ 30 ಹುದ್ದೆಗಳಿಗೆ 
NSQF ಹಂತ 1 ಮತ್ತು 2 ಕೋರ್ಸ್‌ಗಳಿಗೆ: 8 ವರ್ಷಗಳ ಅನುಭವದೊಂದಿಗೆ 10 ನೇ ತೇರ್ಗಡೆ ಅಥವಾ 7 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ 5 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ವಿಜ್ಞಾನದಲ್ಲಿ ಪದವಿ ಪಡೆದವರು ೩ ವರ್ಷಗಳ ಅನುಭವ ಅಥವಾ ಇಂಜಿನಿಯರಿಂಗ್ ಪದವೀಧರರು ಮತ್ತು 1 ವರ್ಷದ ಅನುಭವ
NSQF ಹಂತ 3 ಮತ್ತು 4 ಕೋರ್ಸ್‌ಗಳಿಗೆ:10 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಡಿಪ್ಲೊಮಾ ಇನ್ ಇಂಜಿನಿಯರಿಂಗ್ / ಗ್ರಾಜುಯೇಟ್ ಇನ್ ಸೈನ್ಸಸ್ ಜೊತೆಗೆ ೫ ವರ್ಷಗಳ ಅನುಭವ ಅಥವಾ 2 ವರ್ಷಗಳ ಅನುಭವದೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.
ತರಬೇತಿ ಸಹಾಯಕ 30 ಹುದ್ದೆಗಳಿಗೆ 
10 ನೇ ತೇರ್ಗಡೆಯೊಂದಿಗೆ 5 ವರ್ಷಗಳ ಅನುಭವ ಅಥವಾ 3 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ ಒಂದು ವರ್ಷದ ಅನುಭವದೊಂದಿಗೆ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.

Age Limit: ವಯಸ್ಸಿನ ಮಿತಿ 35 ವರ್ಷಗಳು ಮತ್ತು SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the official notification

Comments

Kiran Naik ನವೆಂ. 15, 2021, 9:51 ಅಪರಾಹ್ನ