ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 4500 ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಅಖಿಲ ಭಾರತೀಯ ಮಟ್ಟದಲ್ಲಿ 4500 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಬ್ಯಾಂಕ್‌ನಲ್ಲಿ ಉದ್ಯೋಗದ ಕನಸು ಹೊಂದಿರುವ ಅಭ್ಯರ್ಥಿಗಳಿಗಾಗಿ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 29/06/2025 ವರೆಗೆ ವಿಸ್ತರಿಸಲಾಗಿದೆ.
ನೇಮಕಾತಿ ವಿವರಗಳು :
ಸಂಸ್ಥೆ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಹುದ್ದೆಗಳ ಸಂಖ್ಯೆ : 4500
ಹುದ್ದೆಯ ಹೆಸರು : ಅಪ್ರೆಂಟಿಸ್ (Apprentice)
ಉದ್ಯೋಗ ಸ್ಥಳ : ಅಖಿಲ ಭಾರತ
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹15,000/- ರೂ ಗಳ ವೆರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ರಾಜ್ಯವಾರು ಹುದ್ದೆಗಳ ವಿವರ :
* ಕರ್ನಾಟಕ – 105
* ತಮಿಳುನಾಡು – 202
* ಕೇರಳ – 116
* ಆಂಧ್ರಪ್ರದೇಶ – 128
* ತೆಲಂಗಾಣ – 100
* ಮಹಾರಾಷ್ಟ್ರ – 586
* ಮಧ್ಯಪ್ರದೇಶ – 459
* ಉತ್ತರ ಪ್ರದೇಶ – 580
* ಪಶ್ಚಿಮ ಬಂಗಾಳ – 315
* ಬಿಹಾರ – 433
(ಇತರ ರಾಜ್ಯಗಳ ವಿವರಗಳಿಗೆ ಅಧಿಕೃತ ಅಧಿಸೂಚನೆ ನೋಡಿ)
ಅರ್ಹತಾ ವಿವರಗಳು :
ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree / Graduation) ಪೂರ್ಣಗೊಳಿಸಿರುವವರಾಗಿರಬೇಕು.
ವಯೋಮಿತಿ :
* ಕನಿಷ್ಠ: 20 ವರ್ಷ
* ಗರಿಷ್ಠ: 28 ವರ್ಷ (07-06-2025ರ ತನಕ)
ವಯೋಮಿತಿ ಸಡಿಲಿಕೆ :
* OBC: 03 ವರ್ಷ
* SC/ST: 05 ವರ್ಷ
* PwBD (UR): 10 ವರ್ಷ
* PwBD (OBC): 13 ವರ್ಷ
* PwBD (SC/ST): 15 ವರ್ಷ
ಅರ್ಜಿ ಶುಲ್ಕ :
* PwBD ಅಭ್ಯರ್ಥಿಗಳು: ₹400/-
* SC/ST/ಮಹಿಳೆ/EWS ಅಭ್ಯರ್ಥಿಗಳು: ₹600/-
* ಇತರೆ ಅಭ್ಯರ್ಥಿಗಳು: ₹800/-
* ಪಾವತಿ ವಿಧಾನ : ಆನ್‌ಲೈನ್
ಆಯ್ಕೆ ವಿಧಾನ :
1. ಆನ್‌ಲೈನ್ ಪರೀಕ್ಷೆ
2. ಸ್ಥಳೀಯ ಭಾಷಾ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
2. ಅರ್ಜಿ ಸಲ್ಲಿಸಲು ಮೊದಲು ಇಮೇಲ್, ಮೊಬೈಲ್, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
3. ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಮೂಲಕ ಅರ್ಜಿ ಭರ್ತಿ ಮಾಡಿ.
4. ಅಗತ್ಯ ದಾಖಲೆಗಳನ್ನು ಅಟ್ಯಾಚ್ ಮಾಡಿ, ಫೋಟೋ ಅಪ್ಲೋಡ್ ಮಾಡಿ.
5. ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ.
6. ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಸಂಖ್ಯೆಯನ್ನು ಉಳಿಸಿಕೊಳ್ಳಿ.
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 07-ಜೂನ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-ಜೂನ್-2025
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 25-ಜೂನ್-2025
ಆನ್‌ಲೈನ್ ಪರೀಕ್ಷೆ (ಅಂದಾಜು) : 03-ಜುಲೈ-2025
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ 4500 ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕವನ್ನು 25-06-2025 ರಿಂದ 29th June 2025 ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಶುಲ್ಕ ಪಾವತಿಸುವ ದಿನಾಂಕವನ್ನು 25-ಜೂನ್-2025 ರಿಂದ 30th June 2025 ವರೆಗೆ ವಿಸ್ತರಿಸಲಾಗಿದೆ.
Comments