Loading..!

ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCI) ನಲ್ಲಿ ಖಾಲಿ ಇರುವ 100 ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ
Tags: ITI SSLC
Published by: Hanamant Katteppanavar | Date:31 ಡಿಸೆಂಬರ್ 2020
not found
ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCI) ಕೇಂದ್ರ ಸರ್ಕಾರದ ಅಧೀನಕ್ಕೊಳಪಡುವ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಈ ಕಂಪನಿಯು ಸಿಮೆಂಟ್‌ನ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿದೆ. ಪ್ರಸ್ತುತ ಕಂಪನಿಯಲ್ಲಿ ಖಾಲಿ ಇರುವ ಒಟ್ಟು 100 ವಿವಿಧ ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ ಜನವರಿ 20 2021 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. 

 

* ಖಾಲಿ ಹುದ್ದೆಗಳ ವಿವರ :

- ಫಿಟ್ಟರ್- 25 ಹುದ್ದೆಗಳು

- ಎಲೆಕ್ಟ್ರಿಷಿಯನ್- 20 ಹುದ್ದೆಗಳು

- ವೆಲ್ಡರ್ [ಗ್ಯಾಸ್ ಮತ್ತು ಎಲೆಕ್ಟ್ರಿಕ್] - 10 ಹುದ್ದೆಗಳು

- ಟರ್ನರ್ / ಮೆಷಿನಿಸ್ಟ್- 15 ಹುದ್ದೆಗಳು

- ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ - ೧೦ ಹುದ್ದೆಗಳು

- ಮೆಕ್. ಡೀಸೆಲ್ / ಮೆಕ್. ಎಂ.ವಿ - 10 ಹುದ್ದೆಗಳು 

- ಕಾರ್ಪೆಂಟರ್- 02 ಹುದ್ದೆಗಳು

- ಕೊಳಾಯಿಗಾರ ( Plumber)- 02 ಹುದ್ದೆಗಳು

- ಡೇಟಾ ಎಂಟ್ರಿ ಆಪರೇಟರ್ (ಡಿಇಒ) ಐಟಿಐ (ಆಫೀಸ್ ಅಸಿಸ್ಟೆಂಟ್, ಕೋಪಾ) - 06 ಹುದ್ದೆಗಳು

- ಒಟ್ಟು ಹುದ್ದೆಗಳು- 100
No. of posts:  100
Application End Date:  20 ಜನವರಿ 2021
Selection Procedure: ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯ ಆಧಾರ ಮೇಲೆ ಆಯ್ಕೆ ಪಟ್ಟಿಯ ಮೂಲಕ ನೇರವಾಗಿ ಆಯ್ಕೆ ಮಡಲಾಗುವುದು.
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ, ಮತ್ತು ಹುದ್ದೆಗಳಿಗೆ ಅನುಗುಣವಾಗಿ ITI ವಿದ್ಯಾರ್ಹತೆಯನ್ನು ವಿವಿಧ ವಿಭಾಗಗಳ್ಲಲಿ ಪೂರ್ಣಗೊಳಿಸಿರಬೇಕು.
Age Limit:

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ- 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು, ಮತ್ತು ಗರಿಷ್ಠ- 25 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.

* ಪ. ಜಾ,ಪ .ಪಂ ದ, ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗಿದೆ.

* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ಅ ಮೂಲಕ ನಿಗದಿತ ನಮೂನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಪೂರ್ಣವಾಗಿ ತುಂಬಿ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಕೊನೆಯ ದಿನಾಂಕದೊಳಗಾಗಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ತಲುಪುವಂತೆ ಸಲ್ಲಿಸಬೇಕು

The General Manager, Tandur Cement Factory, Karankote Village, Tandur

Mandal, Vikarabad District, Telangana –501158

ಈ ವಿಳಾಸಕ್ಕೆ  ಸ್ಪೀಡ್ ಪೋಸ್ಟ್ ಮೂಲಕ ಅರ್ಜಿಯನ್ನು 20.01. 2021ರ ಒಳಗಾಗಿ ಸಲ್ಲಿಸಬೇಕು.

To Download the official notification and application format

Comments

Thippeswamy B B ಜನ. 2, 2021, 10:33 ಪೂರ್ವಾಹ್ನ