ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (CDAC) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (CDAC) ನಲಿ ಖಾಲಿ ಇರುವ311 ಪ್ರಾಜೆಕ್ಟ್ ಇಂಜಿನಿಯರ್, ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಭಾರತದೆಲ್ಲೆಡೆ ಖಾಲಿ ಇರುವ ತನ್ನ ವಿವಿಧ ಕೇಂದ್ರಗಳಲ್ಲಿನ ಒಪ್ಪಂದ ಆಧಾರದ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ವಿದ್ಯಾರ್ಹತೆ : B.E or B.Tech, M.E or M.Tech, Post Graduation, Ph.D
ವಯೋಮಿತಿ : ಕನಿಷ್ಠ 35 ವರ್ಷ ಹಾಗೂ ಗರಿಷ್ಠ 56 ವರ್ಷ
ವಾರ್ಷಿಕ ವೇತನ :
ಪ್ರಾಜೆಕ್ಟ್ ಇಂಜಿನಿಯರ್ : 1.49 ಲಕ್ಷ ರೂ ರಿಂದ 7.11 ಲಕ್ಷ ರೂಗಳವರೆಗೆ
ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ : 8.49 ಲಕ್ಷ ರೂ ರಿಂದ 14 ಲಕ್ಷ ರೂಗಳವರೆಗೆ
ಪ್ರೋಗ್ರಾಮ್ ಮ್ಯಾನೇಜರ್ : 12.63 ಲಕ್ಷ ರೂ ರಿಂದ 22.9 ಲಕ್ಷ ರೂಗಳವರೆಗೆ
ಅರ್ಜಿಸಲ್ಲಿಸುವ ಕ್ರಮಗಳು:
- ಅಧಿಕೃತ ವೆಬ್‌ಸೈಟ್ https://cdac.in/ ಗೆ ಭೇಟಿ ನೀಡಿ.
- ನೀವು ಅರ್ಜಿ ಸಲ್ಲಿಸಲಿರುವ CDAC ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
- ಅಧಿಸೂಚನೆ ಲಿಂಕ್‌ನಿಂದ ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಉದ್ಯೋಗಗಳಿಗಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
- ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
- ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- 20-ಜೂನ್-2025 ರೊಳಗೆ ಅರ್ಜಿ ಸಲ್ಲಿಸಿ ಅರ್ಜಿ ನಮೂನೆಯ ಸಂಖ್ಯೆ/ ಸ್ವೀಕೃತಿ ಸಂಖ್ಯೆಯನ್ನು ಸುರಕ್ಷಿತವಾಗಿಡಬೇಕು.
ಆಯ್ಕೆ : ಸಂದರ್ಶನದ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31-05-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ಜೂನ್-2025
ಉದ್ಯೋಗ ಸ್ಥಳ: ಅಖಿಲ ಭಾರತ
CDAC Job Vacancy 2025
CDAC Notification 2025
CDAC Careers 2025
CDAC Project Engineer Recruitment 2025
Centre for Development of Advanced Computing Recruitment 2025





Comments