🚨 BSF ನೇಮಕಾತಿ 2025 – 549 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC ಪಾಸಾದವರಿಗೆ ಸುವರ್ಣಾವಕಾಶ!
ಸರ್ಕಾರಿ ಹುದ್ದೆಯನ್ನು ಹುಡುಕುತ್ತಿರುವ ಯುವಕ-ಯುವತಿಯರೇ, ನಿಮಗೊಂದು ಸಿಹಿ ಸುದ್ದಿ ನಿಮಗಾಗಿಯೇ. ಗಡಿ ಭದ್ರತಾ ಪಡೆ (ಬಾರ್ಡರ್ ಸೆಕ್ಯುರಿಟಿ ಫೋರ್ಸ್[BSF]) 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆದೆ.
ಹೌದು ಗಡಿ ಭದ್ರತಾ ಪಡೆ (BSF) 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆಮಾಡಿ ಕಾನ್ಸ್‌ಟೇಬಲ್ ಕ್ರೀಡಾ ಕೂಟದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಭಾರತಾದ್ಯಾಂದ್ಯಂತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಹಾಗೂ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು 2026/01/15ರ ಒಳಗಾಗಿ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. SSLC ಪಾಸಾದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ.
ಭಾರತದ ಗಡಿಭದ್ರತಾ ಪಡೆಯಾದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಒಟ್ಟು 549 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ, ಈ ನೇಮಕಾತಿ ಅಡಿಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ದಾಖಲೆ ಪರಿಶೀಲನೆ, ದೈಹಿಕ ಮಾನದಂಡ ಪರೀಕ್ಷೆ (PST) ಮತ್ತು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಪಕ್ರಿಯೆಯನ್ನು ಏರ್ಪಡಿಸಲಾಗಿದೆ. ಸರ್ಕಾರಿ ಉಸ್ತುವಾರಿ ಯೋಜನೆಗಳಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
BSF ಅಧಿಕಾರಿಗಳಿಗೆ ನೇಮಕಾತಿ ನಿಯಮಾನುಸಾರ ವೇತನ ಶ್ರೇಣಿಯೊಂದಿಗೆ ಈ ಹುದ್ದೆಗಳು ಉತ್ತಮ ವೃತ್ತಿಪರ ಅವಕಾಶವನ್ನು ನೀಡುತ್ತವೆ. ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ನೇಮಕಾತಿ 2025ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
📌ಬಿಎಸ್ಎಫ್ ಹುದ್ದೆಯ ಅಧಿಸೂಚನೆ
🏛️ ಸಂಸ್ಥೆಯ ಹೆಸರು : ಗಡಿ ಭದ್ರತಾ ಪಡೆ ( ಬಿಎಸ್‌ಎಫ್ )
🧾 ಹುದ್ದೆಗಳ ಸಂಖ್ಯೆ: 549
📍 ಹುದ್ದೆಯ ಸ್ಥಳ: ಅಖಿಲ ಭಾರತ
👨💼 ಹುದ್ದೆಯ ಹೆಸರು: ಕಾನ್ಸ್‌ಟೇಬಲ್
💸 ಸಂಬಳ: ತಿಂಗಳಿಗೆ ರೂ.21700-69100
ಸ್ಪರ್ಧಾತ್ಮಕ ಪರೀಕ್ಷೆಗಳ (KAS, FDA, SDA, RRB, PSI, PC..etc) ಪ್ರಶ್ನೆಪತ್ರಿಕೆಗಳ ಅಭ್ಯಾಸಕ್ಕಾಗಿ ಈ ಲಿಂಕ್ ಅನ್ನು ತೆರೆಯಿರಿ.
📌 ಹುದ್ದೆಗಳ ವಿವರ : 549
ಕಾನ್‌ಸ್ಟೆಬಲ್ (ಪುರುಷ) : 277
ಕಾನ್‌ಸ್ಟೆಬಲ್ (ಮಹಿಳೆ) : 272
🎓ಅರ್ಹತಾ ಮಾನದಂಡ : ಬಿಎಸ್‌ಎಫ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಕ್ರೀಡಾ ಅರ್ಹತೆ : 15 ಜನವರಿ 2024 ರಿಂದ 15 ಜನವರಿ 2026 ರವರೆಗೆ ಮಾನ್ಯತೆ ಪಡೆದ ಅಂತರರಾಷ್ಟ್ರೀಯ / ರಾಷ್ಟ್ರೀಯ / ಅಂತರ ವಿಶ್ವವಿದ್ಯಾಲಯ / ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಅಥವಾ ಪದಕ .
⏳ ವಯಸ್ಸಿನ ಮಿತಿ: ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-ಆಗಸ್ಟ್-2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 23 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
💸 ಅರ್ಜಿ ಶುಲ್ಕ:
ಮಹಿಳಾ/ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ಇಲ್ಲ
ಯುಆರ್/ಒಬಿಸಿ ಅಭ್ಯರ್ಥಿಗಳು: ರೂ.159/-
ಪಾವತಿ ವಿಧಾನ: ಆನ್‌ಲೈನ್
💼 ಆಯ್ಕೆ ಪ್ರಕ್ರಿಯೆ :
1. ದೈಹಿಕ ಪ್ರಮಾಣೀಕರಣ ಪರೀಕ್ಷೆ
2. ದೈಹಿಕ ದಕ್ಷತೆ ಪರೀಕ್ಷೆ
3. ದಾಖಲೆ ಪರಿಶೀಲನೆ
4. ಉಕ್ತಲೇಖನ ಪರೀಕ್ಷೆ
5. ಪ್ಯಾರಾಗ್ರಾಫ್ ಓದುವ ಪರೀಕ್ಷೆ
6. ವೈದ್ಯಕೀಯ ಪರೀಕ್ಷೆ
📏 ದೈಹಿಕ ಗುಣಮಟ್ಟ ಪರೀಕ್ಷೆ (PST) :
=> ಪುರುಷ ಅಭ್ಯರ್ಥಿಗಳು:
* ಎತ್ತರ: ಯುಆರ್/ಒಬಿಸಿ/ಇಡಬ್ಲ್ಯೂಎಸ್/ಎಸ್‌ಸಿ ಅಭ್ಯರ್ಥಿಗಳಿಗೆ ಕನಿಷ್ಠ 170 ಸೆಂ.ಮೀ; ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 162.5 ಸೆಂ.ಮೀ.
* ಎದೆಯ ಎತ್ತರ: ಯುಆರ್/ಒಬಿಸಿ/ಇಡಬ್ಲ್ಯೂಎಸ್/ಎಸ್‌ಸಿ ಅಭ್ಯರ್ಥಿಗಳಿಗೆ ಕನಿಷ್ಠ 80 ಸೆಂ.ಮೀ ನಿಂದ 85 ಸೆಂ.ಮೀ; ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 75 ಸೆಂ.ಮೀ ನಿಂದ 80 ಸೆಂ.ಮೀ.
=> ಮಹಿಳಾ ಅಭ್ಯರ್ಥಿಗಳು: ಎತ್ತರ: ಯುಆರ್/ಒಬಿಸಿ/ಇಡಬ್ಲ್ಯೂಎಸ್/ಎಸ್‌ಸಿ ಅಭ್ಯರ್ಥಿಗಳಿಗೆ ಕನಿಷ್ಠ 157 ಸೆಂ.ಮೀ; ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 150 ಸೆಂ.ಮೀ.
🏃 ದೈಹಿಕ ದಕ್ಷತೆ ಪರೀಕ್ಷೆ (PET) :
🔹 ಪುರುಷ ಅಭ್ಯರ್ಥಿಗಳು:
- ಓಟ: 1.6 ಕಿ.ಮೀ. ಓಟವನ್ನು 6.5 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.
- ಲಾಂಗ್ ಜಂಪ್: 3 ಅವಕಾಶಗಳಲ್ಲಿ 3.6 ಮೀಟರ್
- ಎತ್ತರ ಜಿಗಿತ: 3 ಅವಕಾಶಗಳಲ್ಲಿ 1.2 ಮೀಟರ್
🔹 ಮಹಿಳಾ ಅಭ್ಯರ್ಥಿಗಳು:
- ಓಟ: 800 ಮೀಟರ್‌ಗಳನ್ನು 4 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು.
- ಲಾಂಗ್ ಜಂಪ್: 3 ಅವಕಾಶಗಳಲ್ಲಿ 9 ಅಡಿ
- ಎತ್ತರ ಜಿಗಿತ: 3 ಅವಕಾಶಗಳಲ್ಲಿ 3 ಅಡಿ
🏥 ವೈದ್ಯಕೀಯ ಮಾನದಂಡಗಳು :
- ಅಭ್ಯರ್ಥಿಗಳು ಎರಡೂ ಕಣ್ಣುಗಳಲ್ಲಿ ಕನಿಷ್ಠ 6/6 ಅಥವಾ 6/9 ದೂರದೃಷ್ಟಿಯನ್ನು ಹೊಂದಿರಬೇಕು, ಕನ್ನಡಕವನ್ನು ಧರಿಸುವ ಆಯ್ಕೆಯೊಂದಿಗೆ.
- ಅಭ್ಯರ್ಥಿಗಳು ಉನ್ನತ ದರ್ಜೆಯ ಬಣ್ಣ ದೃಷ್ಟಿ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿರಬೇಕು.
💰 ವೇತನ: ಮಾಸಿಕ ರೂ. 21,700 ರಿಂದ 69,100/- ರೂಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ ಮತ್ತು ಇತರ ಭತ್ಯೆಗಳು ಇರಲಿದೆ..
📝 ಅರ್ಜಿ ಸಲ್ಲಿಸುವ ವಿಧಾನ :
1. rectt.bsf.gov.in ಗೆ ಭೇಟಿ ನೀಡಿ
2. ನಿಮ್ಮ ಪ್ರೊಫೈಲ್ ಅನ್ನು ನೋಂದಾಯಿಸಿ ಮತ್ತು ರಚಿಸಿ
3. ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
4. ಶೈಕ್ಷಣಿಕ ಮತ್ತು ಕ್ರೀಡಾ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿ
5. ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ)
6. ಫಾರ್ಮ್ ಅನ್ನು ಸಲ್ಲಿಸಿ ಮತ್ತು ಮುದ್ರಣವನ್ನು ತೆಗೆದುಕೊಳ್ಳಿರಿ.
📅 ಪ್ರಮುಖ ದಿನಾಂಕಗಳು :
ಅಧಿಸೂಚನೆ ದಿನಾಂಕ: 19 ಡಿಸೆಂಬರ್ 2025
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27 ಡಿಸೆಂಬರ್ 2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜನವರಿ 2026
ಶುಲ್ಕ ಪಾವತಿ ಕೊನೆಯ ದಿನಾಂಕ: 15 ಜನವರಿ 2026
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
⚠️ ಮುಖ್ಯ ಸೂಚನೆ :
=> ಅರ್ಜಿಯನ್ನು ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ.
=> ಅರ್ಜಿಯಲ್ಲಿನ ತಪ್ಪು ಮಾಹಿತಿ ಅಥವಾ ಅಪೂರ್ಣ ದಾಖಲೆಗಳಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
=> ಮಹಿಳಾ ಅಭ್ಯರ್ಥಿಗಳಿಗೂ ಕೆಲವು ಹುದ್ದೆಗಳಲ್ಲಿ ಅವಕಾಶ ನೀಡಲಾಗಿದೆ.
✨ ಸಾರಾಂಶ : BSF ನೇಮಕಾತಿ 2025 ರಾಷ್ಟ್ರ ಸೇವೆ ಮಾಡಲು ಬಯಸುವ ಯುವಕರಿಗೆ ಅಪರೂಪದ ಅವಕಾಶ. ಕನಿಷ್ಠ SSLC ಪಾಸಾದವರು ದೈಹಿಕ ಸಾಮರ್ಥ್ಯ ಮತ್ತು ಉತ್ಸಾಹದಿಂದ ಅರ್ಜಿ ಹಾಕಿ ದೇಶದ ಗಡಿಯ ಭದ್ರತೆಗೆ ತಮ್ಮ ಕೊಡುಗೆಯನ್ನು ನೀಡಬಹುದು.




Comments