Loading..!

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಒಟ್ಟು 55 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Mallappa Myageri | Date:2 ಡಿಸೆಂಬರ್ 2021
not found
ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು-32, ಹೌಸ್‌ಕೀಪಿಂಗ್ ಸ್ಟಾಫ್ ಹುದ್ದೆಗಳು-20, ಮಾಲಿ ಹುದ್ದೆ-1, ಸೂಪರ್‌ವೈಸರ್ ಹುದ್ದೆ-1 ಮತ್ತು ಗಾರ್ಬೇಜ್ ಕಲೆಕ್ಟರ್ ಹುದ್ದೆ-1 ಹೀಗೆ ಒಟ್ಟು 55  ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡುವುದರ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ : 10-12-2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
No. of posts:  55
Application Start Date:  28 ನವೆಂಬರ್ 2021
Application End Date:  10 ಡಿಸೆಂಬರ್ 2021
Qualification:

ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ಹೊಂದಿರಬೇಕು.
1) ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ತೇರ್ಗಡೆ ಹೊಂದಿರಬೇಕು.
2) ಹೌಸ್‌ಕೀಪಿಂಗ್ ಸ್ಟಾಫ್, ಮಾಲಿ ಮತ್ತು ಗಾರ್ಬೇಜ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 5ನೇ ತರಗತಿ ತೇರ್ಗಡೆ ಹೊಂದಿರಬೇಕು.
3) ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು. ಜೊತೆಗೆ ಹುದ್ದೆಗೆ ಸಂಬಂಧಿಸಿದಂತೆ ವೃತ್ತಿಯಲ್ಲಿ 02 ವರ್ಷಗಳ ಅನುಭವವನ್ನು ಹೊಂದಿರಬೇಕು.

Fee:

* ಮಲ್ಟಿ ಟಾಸ್ಕಿಂಗ್ ಸ್ಟಾಫ್, ಹೌಸ್‌ಕೀಪಿಂಗ್ ಸ್ಟಾಫ್, ಮಾಲಿ, ಸೂಪರ್‌ವೈಸರ್ ಮತ್ತು ಗಾರ್ಬೇಜ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ750/- 
-SC/ST/PH/Economically Backward ಅಭ್ಯರ್ಥಿಗಳು ರೂ450/- ಅರ್ಜಿ ಶುಲ್ಕವನ್ನು ನಿಗದಿಪಡಿಸಿದೆ.

Pay Scale: ಟಾಸ್ಕಿಂಗ್ ಸ್ಟಾಫ್, ಹೌಸ್‌ಕೀಪಿಂಗ್ ಸ್ಟಾಫ್, ಮಾಲಿ, ಸೂಪರ್‌ವೈಸರ್ ಮತ್ತು ಗಾರ್ಬೇಜ್ ಕಲೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು ರೂ15,908/- ರಿಂದ 20,976/-ರೂಗಳ ವರೆಗೆ ವೇತನವನ್ನು ಪಡೆಯುವರು.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ
To Download the Official Notification

Comments

Anand Mang ಡಿಸೆಂ. 2, 2021, 11:25 ಪೂರ್ವಾಹ್ನ
Shrikant Spear ಡಿಸೆಂ. 2, 2021, 12:12 ಅಪರಾಹ್ನ