Loading..!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಶಿಶಿಕ್ಷು (ಅಪ್ಪ್ರೆಂಟಿಸ್) ತರಬೇತಿ ಹುದ್ದೆಗಳ ನೇಮಕಾತಿಗಾಗಿ SSLC ಪೂರೈಸಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:3 ಅಕ್ಟೋಬರ್ 2019
not found
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಶಿಶಿಕ್ಷು ತರಬೇತಿ ಹುದ್ದೆಗಳ ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣಾವಧಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಹಾಲಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳ ವಿವರ ಈ ಕೆಳಗಿನಂತಿದೆ

* ಡೀಸೆಲ್ ಮೆಕ್ಯಾನಿಕ್ - 530 ಹುದ್ದೆಗಳು
* ಶೀಟ್ ಮೆಟಲ್ ವರ್ಕರ್ - 63 ಹುದ್ದೆಗಳು
* ವೆಲ್ಡರ್ - 40 ಹುದ್ದೆಗಳು
* ಫಿಟ್ಟರ್ - 52 ಹುದ್ದೆಗಳು
* ಟರ್ನರ್ - 10 ಹುದ್ದೆಗಳು

ಅರ್ಜಿ ಸಲ್ಲಿಸ ಅರ್ಜಿ ಸಲ್ಲಿಸ ಅರ್ಜಿ ಸಲ್ಲಿಸುವ ವಿಧಾನ:
ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಭ್ಯರ್ಥಿಯ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ, ಅಪೇಕ್ಷಿತ ವೃತ್ತಿಯ ಮಾಹಿತಿಗಳನ್ನೊಳಗೊಂಡ ಹಾಗೂ ಅಂದವಾಗಿ ಬೆರಳಚ್ಚುಗೊಳಿಸಿದ ಅರ್ಜಿಯೊಂದಿಗೆ ಇತ್ತೀಚಿನ 02 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳಾದ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಆಧಾರ್ ಕಾರ್ಡ್ ಆಧಾರ್ ಕಾರ್ಡ್, ಐ.ಟಿ.ಐ ತೇರ್ಗಡೆ ಹೊಂದಿದ್ದಲ್ಲಿ ಅದರ ಪ್ರಮಾಣ ಪತ್ರಗಳೊಂದಿಗೆ ದಿನಾಂಕ: 09/10/2019 ರಂದು ಬೆಳಿಗ್ಗೆ 10.30 ಗಂಟೆಯಿಂದ 5.00 ಗಂಟೆಯೊಳಗಾಗಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಬಿಲ್ಡಿಂಗ್, 3ನೇ ಮಹಡಿ, ಶಾಂತಿನಗರ , ಶಾಂತಿನಗರ ಬಸ್
ನಿಲ್ದಾಣ, ಬೆಂಗಳೂರು-560027, ಇಲ್ಲಿ ಖುದ್ದಾಗಿ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗತಕ್ಕದ್ದು ಹಾಗೂ ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರುವುದು. ಅಪೂರ್ಣ ಅಥವಾ ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ
No. of posts:  695
Application Start Date:  3 ಅಕ್ಟೋಬರ್ 2019
Application End Date:  9 ಅಕ್ಟೋಬರ್ 2019
Qualification: ಶಿಶಿಕ್ಷು ತರಬೇತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು SSLC ಪರೀಕ್ಷೆಯಲ್ಲಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.

*ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ 1:7 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 1:15 ಇದರ ಪ್ರಮಾಣದಲ್ಲಿ ಒಟ್ಟು ಹುದ್ದೆಗಳಲ್ಲಿ ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ
Age Limit: ದಿನಾಂಕ 09 ಅಕ್ಟೋಬರ್ 2019 ರಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯೋಮಿತಿ 26 ವರ್ಷ ಮೀರಿರಬಾರದು
Pay Scale: ಈ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುವುದು

1. ಫಿಟ್ಟರ್ ಹುದ್ದೆಗಳಿಗೆ : 1 ನೇ ವರ್ಷ 8180/-, 2 ನೇ ವರ್ಷ 9349/-
2. ವೆಲ್ಡರ್ ಹುದ್ದೆಗಳಿಗೆ: 1 ನೇ ವರ್ಷ 8089/-, 2 ನೇ ವರ್ಷ 9245/-
3. ಇತರೆ ವೃತ್ತಿ ಹುದ್ದೆಗಳಿಗೆ : 1 ನೇ ವರ್ಷ 8271/-, 2 ನೇ ವರ್ಷ 9453/-
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments