ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಭಾರತ ಸರ್ಕಾರದ ಮತ್ತು ಕರ್ನಾಟಕ ಸರ್ಕಾರದ ಜಂಟಿ ಉದ್ಯಮ ಹಾಗೂ ವಿಶೇಷ ಉದ್ದೇಶದ ವಾಹನವಾದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ಖಾಲಿ ಇರುವ 33 ಕಾರ್ಯನಿರ್ವಾಹಕ ನಿರ್ದೇಶಕರು (ಟ್ರಾಕ್ಷನ್), ಕಾರ್ಯನಿರ್ವಾಹಕ ನಿರ್ದೇಶಕರು(ಸಿಸ್ಟಮ್), ಮುಖ್ಯ ಎಂಜಿನಿಯರ್(ಟ್ರಾಕ್ಷನ್), ಉಪ ಮುಖ್ಯ ಎಂಜಿನಿಯರ್(ಟ್ರಾಕ್ಷನ್), ಜನರಲ್ ಮ್ಯಾನೇಜರ್, ಅಡಿಷನಲ್ ಜನರಲ್ ಮ್ಯಾನೇಜರ್, ಮ್ಯಾನೇಜರ್ (F&A) ಮತ್ತು ಉಪ ಮುಖ್ಯ ಎಂಜಿನಿಯರ್(ಕಾಂಟ್ರಾಕ್ಸ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳೆಗೆ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಗುತ್ತಿಗೆ / ನಿಯೋಜನೆ ಆಧಾರದ ಮೇಲೆ ಅರ್ಹತೆ, ಅನುಭವ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಈ ಹುದ್ದೆಗಳಿಗೆ ಅರ್ಜಿಯನ್ನು ದಿನಾಂಕ16 ಅಕ್ಟೋಬರ್ 2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಅರ್ಜಿ ಸಹಿ ಮಾಡಿದ ಪ್ರಿಂಟ್ ಔಟ್ ಸ್ವೀಕರಿಸಲು 22 ಅಕ್ಟೋಬರ್ 2024ರೊಳಗಾಗಿ ಸಂಜೆ 4.00 ಗಂಟೆಯೊಳಗಾಗಿ ಕಳುಹಿಸಬೇಕು.
ಹುದ್ದೆಗಳ ವಿವರ : 33
ಕಾರ್ಯನಿರ್ವಾಹಕ ನಿರ್ದೇಶಕರು (ಟ್ರಾಕ್ಷನ್) - 1
ಕಾರ್ಯನಿರ್ವಾಹಕ ನಿರ್ದೇಶಕರು ( ಸಿಸ್ಟಮ್ಸ್) - 1
ಮುಖ್ಯ ಇಂಜಿನಿಯರ್(ರೋಲಿಂಗ್ ಸ್ಟಾಕ್) - 2
ಮುಖ್ಯ ಇಂಜಿನಿಯರ್ (ಟ್ರಾಕ್ಷನ್) - 1
ಉಪ ಮುಖ್ಯ ಇಂಜಿನಿಯರ್( ರೋಲಿಂಗ್ ಸ್ಟಾಕ್) - 2
ಉಪ ಮುಖ್ಯ ಇಂಜಿನಿಯರ್(ಟ್ರಾಕ್ಷನ್) - 2
ಉಪ ಮುಖ್ಯ ಇಂಜಿನಿಯರ್ (ಇ & ಎಂ)- 2
ಉಪ ಮುಖ್ಯ ಇಂಜಿನಿಯರ್ ( ಟೆಲಿಕಮ್ಯೂನಿಕೇಷನ್ & ಎಎಫ್‌ಸಿ) - 1
ಉಪ ಮುಖ್ಯ ಇಂಜಿನಿಯರ್ (ಕಾಂಟ್ರಾಕ್ಸ್) - 1
ಜನರಲ್ ಮ್ಯಾನೇಜರ್ (F&A) - 3
ಅಡಿಷನಲ್ ಜನರಲ್ ಮ್ಯಾನೇಜರ್ (F&A) - 1
ಡೆಪ್ಯುಟಿ ಜನರಲ್ ಮ್ಯಾನೇಜರ್ (F&A) - 06
ಸೀನಿಯರ್ ಮ್ಯಾನೇಜರ್ (F&A) - 02
ಮ್ಯಾನೇಜರ್ (F&A) - 02
ಅಸಿಸ್ಟಂಟ್ ಮ್ಯಾನೇಜರ್ (F&A) - 6
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಸವಿವರವಾದ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.





Comments