Loading..!

"ನಮ್ಮ ಮೆಟ್ರೋ" ಖ್ಯಾತಿಯ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL)ನ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ.
Published by: Tajabi Pathan | Date:7 ಎಪ್ರಿಲ್ 2023
not found

ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಪ್ರಯಾಣದ ಸೌಕರ್ಯ ಮಟ್ಟವನ್ನು ಪಟ್ಟಣ ನಾಗರಿಕರಿಗೆ ಅಪಾರವಾಗಿ ಹೆಚ್ಚಿಸಲು ಸಹಕರಿಸುತ್ತಿರುವ ಕನ್ನಡಿಗರ ಹೆಮ್ಮೆಯ ದ್ವನಿಯಾಗಿರುವ "ನಮ್ಮ ಮೆಟ್ರೋ" ಖ್ಯಾತಿಯ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ಖಾಲಿ ಇರುವ 68 ಡೆಪ್ಯೂಟಿ ಚೀಫ್ ಇಂಜಿನಿಯರ್, ಎಕ್ಸಿಕೂಟಿವ್ ಇಂಜಿನಿಯರ್ ಹಾಗೂ ಅಸಿಸ್ಟೆಂಟ್ ಎಕ್ಸಿಕೂಟಿವ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 17 ಏಪ್ರಿಲ್ 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 68 
ಡೆಪ್ಯೂಟಿ ಚೀಫ್ ಇಂಜಿನಿಯರ್ - 3 
ಎಕ್ಸಿಕೂಟಿವ್ ಇಂಜಿನಿಯರ್ - 10 
ಅಸಿಸ್ಟೆಂಟ್ ಎಕ್ಸಿಕೂಟಿವ್ ಇಂಜಿನಿಯರ್ - 17 
ಅಸಿಸ್ಟಂಟ್ ಇಂಜಿನಿಯರ್ - 38 


ಅರ್ಜಿ ಸಲ್ಲಿಸುವ ವಿಳಾಸ : General Manager (HR),
Bangalore Metro Rail Corporation Limited,
III Floor, BMTC Complex, K.H. Road, Shanthinagar, Bengaluru 560 027
* ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ 

No. of posts:  68
Application Start Date:  7 ಎಪ್ರಿಲ್ 2023
Application End Date:  17 ಎಪ್ರಿಲ್ 2023
Work Location:  ಕರ್ನಾಟಕ
Qualification:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವರ್ಗವಾರು ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಬಿಇ (BE)/ ಡಿಪ್ಲೋಮಾ/ ಪದವಿ ವಿದ್ಯಾರ್ಹತೆಯನ್ನು ಹಾಗೂ ಕಂಪ್ಯೂಟರ್ ಜ್ಞಾನವನ್ನು ಪಡೆದಿರಬೇಕು.

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ ಗರಿಷ್ಠ 55 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗುವಂತೆ 50,000/- ರೂ ಗಳಿಂದ1,40,000/-ರೂಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ. 
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

To Download Official Notification

Comments