ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಲ್ಲಿ ಖಾಲಿ ಇರುವ 345 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಲ್ಲಿ ಖಾಲಿ ಇರುವ 345 ಸಹಾಯಕ ನಿರ್ದೇಶಕ, ಸಹಾಯಕ ವಿಭಾಗ ಅಧಿಕಾರಿ (ASO), ಸಹಾಯಕ (ಸಿಎಡಿ), ಸ್ಟೆನೋಗ್ರಾಫರ್, ಸೀನಿಯರ್ ಸೆಕ್ರೆಟರಿಯೇಟ್ ಸಹಾಯಕ, ತಾಂತ್ರಿಕ ಸಹಾಯಕ (ಲ್ಯಾಬ್), ಮತ್ತು ಸೀನಿಯರ್ ತಂತ್ರಜ್ಞ ಸೇರಿದಂತೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಇಚ್ಛಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ09 ಸೆಪ್ಟೆಂಬರ್ 2024 ಹಾಗೂ ಕೊನೆಯ ದಿನಾಂಕ 30 ಸೆಪ್ಟೆಂಬರ್ 2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ, ಪ್ರಾಯೋಗಿಕ ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಹುದ್ದೆಗಳ ವಿವರ :345
ಸಹಾಯಕ ನಿರ್ದೇಶಕ - 3
ಪರ್ಸನಲ್ ಅಸಿಸ್ಟೆಂಟ್ - 27
ಸಹಾಯಕ ವಿಭಾಗ ಅಧಿಕಾರಿ (ASO) - 43
ಸಹಾಯಕ (ಸಿಎಡಿ) - 1
ಸ್ಟೆನೋಗ್ರಾಫರ್ - 19
ಸೀನಿಯರ್ ಸೆಕ್ರೆಟರಿಯೇಟ್ ಸಹಾಯಕ - 128
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ - 78
ತಾಂತ್ರಿಕ ಸಹಾಯಕ (ಲ್ಯಾಬ್) - 27
ಸೀನಿಯರ್ ತಂತ್ರಜ್ಞ - 18
ತಂತ್ರಜ್ಞ - 1
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC / Dilpoma ಪದವಿ ವಿದ್ಯಾರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 35 ವರ್ಷ ವಯಸ್ಸು ನಿಗದಿಪಡಿಸಲಾಗಿದೆ
ವಯೋಮಿತಿ ವಯೋಸಡಿಲಿಕೆ :
SC/ST ಅಭ್ಯರ್ಥಿಗಳು: 05 ವರ್ಷಗಳು
OBC ಅಭ್ಯರ್ಥಿಗಳು: 03 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳು: 10 ವರ್ಷಗಳು
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25500/- ರೂ ಗಳಿಂದ 177500/- ರೂಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.
- ಈ ಕುರಿತು ಸವಿವರವಾದ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.




Comments