Loading..!

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ
Tags: Degree
Published by: Yallamma G | Date:30 ಮಾರ್ಚ್ 2023
not found

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ವಿಜಯಪುರ ಇದರಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು40 ತಾಂತ್ರಿಕ ಅಧಿಕಾರಿ, ಕಿರಿಯ ತಾಂತ್ರಿಕ, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು ದರ್ಜೆ ಮತ್ತು ಆಡಳಿತ ಸಹಾಯಕ ದರ್ಜೆ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 24/03/2023 ಮತ್ತು ಕೊನೆಯ ದಿನಾಂಕ : 25/04/2023 ಆಗಿರುತ್ತದೆ. ಖುದ್ದಾಗಿ / ಅಂಚೆ ಕೋರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.


ನೇರ ನೇಮಕಾತಿಗೆ ಪರಿಗಣಿಸಲಾಗಿರುವ ಒಟ್ಟು ಹುದ್ದೆಗಳ ವಿವರ : 40 
* ಸಹಾಯಕ ವ್ಯವಸ್ಥಾಪಕರು ( ಎ.ಹೆಚ್ & ಎಐ ) - 06
* ತಾಂತ್ರಿಕ ಅಧಿಕಾರಿ ( ಡಿಟಿ / ಅಭಿಯಂತರ ) - 02
* ವಿಸ್ತರಣಾಧಿಕಾರಿ ದರ್ಜೆ - 08
* ಕೆಮಿಸ್ಟ್ ದರ್ಜೆ -03
* ಕಿರಿಯ ಸಿಸ್ಟಂ ಆಪರೇಟರ್ - 03
* ಆಡಳಿತ ಸಹಾಯಕ ದರ್ಜೆ -02
* ಮಾರುಕಟ್ಟೆ ಸಹಾಯಕರು ದರ್ಜೆ -02
* ಕಿರಿಯ ತಾಂತ್ರಿಕ - 08
* ಹಾಲು ರವಾನೆಗಾರರು - 06

No. of posts:  40
Application Start Date:  24 ಮಾರ್ಚ್ 2023
Application End Date:  25 ಎಪ್ರಿಲ್ 2023
Work Location:  ಕರ್ನಾಟಕ
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಮೆರಿಟ್ ಮತ್ತು ಮೌಖಿಕ ಸಂದರ್ಶನ ದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
Qualification:

ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ SSLC, ITI, BA, BBA, BCA, BCom, Bsc ಹಾಗು BE ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.

Fee:

* ಪರಿಶಿಷ್ಟ ಜಾತಿ , ಪರಿಶಿಷ್ಠ ಪಂಗಡ, ಪ್ರವರ್ಗ -1 ಅಂಗವಿಕಲ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ Rs. 500/- (ಬ್ಯಾಂಕ್ ಶುಲ್ಕ ಪ್ರತ್ಯೇಕ).
* ಇತರೆ  ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ Rs. 1000/- (ಬ್ಯಾಂಕ್ ಶುಲ್ಕ ಪ್ರತ್ಯೇಕ).

Age Limit:

ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಈ ಕೆಳಕಂಡ ವಯೋಮಿತಿಗಳನ್ನು ಮೀರಿರಬಾರದು 
* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ 
* 2A/2B/3A/3B ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ 
* SC/ST/CAT-1 ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ

Pay Scale:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವಿವಿಧ ರೀತಿಯ ಮಾಸಿಕ ವೇತನವನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು.
-ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿ ಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download the Official Notification

Comments