ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ

ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಬೆಳಗಾವಿ ಇದರಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು46 ತಾಂತ್ರಿಕ ಅಧಿಕಾರಿ, ಕಿರಿಯ ತಾಂತ್ರಿಕ, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು ದರ್ಜೆ ಮತ್ತು ಆಡಳಿತ ಸಹಾಯಕ ದರ್ಜೆ ಮತ್ತು ಸಹಾಯಕ ವ್ಯವಸ್ಥಾಪಕರು ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ :28/08/2023 ಮತ್ತು ಕೊನೆಯ ದಿನಾಂಕ : 26/09/2023 ಆಗಿರುತ್ತದೆ. ಖುದ್ದಾಗಿ/ ಅಂಚೆ/ ಕೋರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲವೆಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ನೇರ ನೇಮಕಾತಿಗೆ ಪರಿಗಣಿಸಲಾಗಿರುವ ಒಟ್ಟು ಹುದ್ದೆಗಳ ವಿವರ : 46
-ಸಹಾಯಕ ವ್ಯವಸ್ಥಾಪಕರು (ಎ.ಹೆಚ್& ಎ.ಐ) : 2
- ಸಹಾಯಕ ವ್ಯವಸ್ಥಾಪಕರು (ವಿತ್ತ) : 1
- ತಾಂತ್ರಿಕ ಅಧಿಕಾರಿ (ಡಿಟಿ) : 3
- ತಾಂತ್ರಿಕ ಅಧಿಕಾರಿ (ಇಂ) : 3
- ತಾಂತ್ರಿಕ ಅಧಿಕಾರಿ (ಕ್ಯೂಸಿ/ಎಂ.ಬಿ) : 1
- ವಿಸ್ತರಣಾಧಿಕಾರಿ ದರ್ಜೆ-3 : 10
- ಆಡಳಿತ ಸಹಾಯಕ ದರ್ಜೆ-2 : 5
- ಲೆಕ್ಕ ಸಹಾಯಕ ದರ್ಜೆ-2 : 5
- ಮಾರುಕಟ್ಟೆ ಸಹಾಯಕ ದರ್ಜೆ-2 : 2
- ಕೆಮಿಸ್ಟ್ ದರ್ಜೆ-2 : 4
- ಕಿರಿಯ ಸಿಸ್ಟಮ್ ಆಪರೇಟರ್ : 1
- ಕಿರಿಯ ತಾಂತ್ರಿಕರು : 9
ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ SSLC, ITI, Diploma, BA, BSc, BBM, BCA, BCom, M.Com, MBA, B.Tech, Msc, BE ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
- ಅಭ್ಯರ್ಥಿಗಳು Apply link ನ ಮೇಲೆ ಕ್ಲಿಕ್ ಮಾಡಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವಿವಿಧ ರೀತಿಯ ಮಾಸಿಕ ವೇತನವನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು.
-ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿ ಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments